ಚಡಚಣ-ಹೆಣ್ಣು ಎಂದರೆ ಸಾಕ್ಷಾತ್ ದೇವಿ ಸ್ವರೂಪ.ಯಾವ ಜಾಗದಲ್ಲಿ ಆಕೆಗೆ ಭರಪೂರ ಗೌರವಾಧಾರಗಳು ದೊರೆಯುತ್ತವೋ ಆ ಸ್ಥಳ ನಂದಗೋಕುಲವಾಗುತ್ತದೆ ಎಂದು ಶ್ರೀ ಷ.ಬ್ರ. ಅಭಿನವ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು.
ತಾಲೂಕಿನ ಹೋರ್ತಿ ಗ್ರಾಮದಲ್ಲಿ ಶ್ರೀ ಆದಿಶಕ್ತಿ ಮಹಾಮಂಡಳಿ ವತಿಯಿಂದ ನವರಾತ್ರಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ 10001 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಅವರು ಆರ್ಶಿವಚನ ನೀಡಿದರು.
ಹೆಣ್ಣೆಂದರೆ ಒಂದು ಕುಟುಂಬದ ಬೆಳಗು,ತಾಯಿಯಾಗಿ,ಸಹೋದರಿಯಾಗಿ ಮತ್ತು ಪತ್ನಿಯಾಗಿ ಅವಳು ನಿರ್ವಹಿಸುವ ಜವಾಬ್ದಾರಿಗಳು ವರ್ಣಿಸಲಾಗದ್ದು.ಹೆಣ್ಣು ಇಂದು ಕೇವಲ ಮನೆಯ ಒಳಗಿನ ಶಕ್ತಿಯಾಗಿ ಉಳಿಯದೆ ಜಗವನ್ನು ಆಳುವ ಶಕ್ತಿಯಾಗಿ ಬೆಳೆದಿದ್ದಾಳೆ.ದೇವರು ಗಂಡಿಗಿಂತಲೂ ಹೆಚ್ಚಿನ ಯೋಚನಾ ಶಕ್ತಿಯನ್ನು ಹೆಣ್ಣಿಗೆ ಕೊಟ್ಟಿದ್ದಾನೆ.ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆಯೂ ಹೆಣ್ಣಿನ ಪರಿಶ್ರಮ ಸಾಕಷ್ಟಿರುತ್ತದೆ ಎಂದರು.
ಅಣ್ಣಪ್ಪ ಸಾಹುಕಾರ ಖೈನೂರ ಮಾತನಾಡಿ,ಅನಾದಿಕಾಲದಿಂದಲೂ ಮಹಿಳೆಯರು ಸ್ವಾರ್ಥ ವಿಲ್ಲದೆ ಸೇವೆಗೈಯುತ್ತಾ ಬಂದಿದ್ದಾರೆ.ಇವತ್ತು ದೇಶಗಳನ್ನೇ ಮುಂದುವರೆಸುವ ಹಂತಕ್ಕೆ ಹೆಣ್ಣುಮಕ್ಕಳು ಬೆಳೆದಿದ್ದಾರೆ.ಹೆಣ್ಣಿಲ್ಲದೆ ಈ ಜಗತ್ತಿಲ್ಲ.ಆಕೆ ಹೆತ್ತರಷ್ಟೇ ಈ ಜಗತ್ತು ಬೆಳೆಯುತ್ತದೆ.ಶಕ್ತಿ ಸ್ವರೂಪಿಣಿಯಾದ ಅಂತಹ ಹೆಣ್ಣನ್ನು ನಾವೆಲ್ಲರೂ ಪೂಜಿಸಬೇಕು ಎಂದರು.
ಜೆಡಿಎಸ್ ಪಕ್ಷದ ಅದ್ಯಕ್ಷ ಬಿ ಡಿ ಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅದ್ಯಕ್ಷ ಜಯಶ್ರೀ ಶ್ರೀ. ಭೋಸಗಿ, ಪಿ.ಕೆ.ಪಿ.ಎಸ್ ಅದ್ಯಕ್ಷ ಮಹಾದೇವ ಪೂಜಾರಿ, ಶ್ರೀಮಂತ ಇಂಡಿ,ಸಿದರಾಯ ಭೋಷಗಿ, ಶಿವಶರಣಪ್ಪ ಡೋಳಿ, ಮಲ್ಲಪ್ಪ ಭೋಸಗಿ, ರೇವಣಸಿದ್ದ ಪೂಜಾರಿ, ಪವನ ಕುಲಕರ್ಣಿ, ಶಿವಶಂಕರ್ ಕಡೆಮನಿ, ಸಿದರಾಯ ಕಡಿಮನಿ, ಸುಧೀರ ಅಂಕಲಗಿ , ಶಾಂತಯ್ಯ ಹೀರೇಮಠ, ಧೀಪಾ ಕಾಂಬಳೆ,ಮಂಜುನಾಥ್ ಭೋಸಗಿ, ರೇವಮ್ಮ ಅಂಜುಟಗಿ, ಸುನಂದ ಬೊರಗಿ, ಸಾವಿತ್ರಿ ಕಡೆಮನಿ, ಶ್ರೀಶೈಲ ಶಿವೂರರೇಣುಕಾ ಕಡಿಮನಿ,ಸಾವಿತ್ರಿ, ಯಳಸಂಗಿ ದಾನಮ್ಮ, ಅಂಕಲಗಿ ಪ್ರಕಾಶ, ಬಮ್ಮನಳ್ಳಿ ರವೀಂದ್ರ, ಹೊಸಟ್ಟಿ ಗುರಪ್ಪ ಕಡಿಮನಿ, ಸಿದರಾಯ ಡೊಣಗಿ, ಸೊಮನಿಂಗ ಬೊರಗಿ ಮತ್ತಿತರರು ಇದ್ದರು.