ಮೂಡಿಗೆರೆ:ತಾಲೂಕಿನ ಹೊಯ್ಸಳಲು ಗ್ರಾಮದ 4 ಕಿ.ಮೀ ರಸ್ತೆ ಸಂಪೂರ್ಣ,ಗುoಡಿ ಗೊಟರುಮಯವಾಗಿದ್ದು ಇದರಿಂದ ಪ್ರತಿನಿತ್ಯ ವಾಹನಗಳು ಗುಂಡಿಗೆ ಸಿಕ್ಕಿಹಾಕಿಕೊಳ್ಳುತ್ತಿದ್ದು ಸಂಚಾರಕ್ಕೆ ತೀವ್ರ ತರದ ತೊಂದರೆ ಉಂಟಾಗಿದೆ.
ಹೊಯ್ಸಳಲು ಗ್ರಾಮದಲ್ಲಿ 300 ಕ್ಕೂ ಅಧಿಕ ಕುಟುಂಬವಿದೆ.ಇಲ್ಲಿಗೆ ಪ್ರತಿನಿತ್ಯ ಬೆಳಗ್ಗೆ 8.30ಕ್ಕೆ ಮತ್ತು ಸಂಜೆ 5ಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ಆಗಮಿಸುತ್ತಿದ್ದು ಇದರಿಂದ ಪ್ರತಿನಿತ್ಯ ಶಾಲೆ ಕಾಲೇಜಿಗೆ ತೆರಳುವ ವಿಧ್ಯಾರ್ಥಿಗಳಿಗೆ ಹಾಗೂ ಸ್ಥಳೀಯರ ಪ್ರಯಾಣಕ್ಕೆ ಅನುಕೂಲವಾಗಿತ್ತು.
ಆದರೆ ರಸ್ತೆ ಸರಿಯಲ್ಲದ ಕಾರಣ ಎಂದಿನoತೆ ಬುಧವಾರ ಬೆಳಗ್ಗೆ ಆಗಮಿಸಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಗುಂಡಿಗೆ ಸಿಕ್ಕಿಕೊಂಡು ಸುಮಾರು 2ಗಂಟೆ ಅತ್ತಿತ್ತ ಚಲಿಸಲಾಗದೆ ತೊಂದರೆಯಾಗುವ ಜೊತೆಗೆ ಬಸ್ ಜಖಂಗೊoಡಿದೆ.
ಮಂಗಳವಾರ ಕೂಡ ಬೆಳಗ್ಗೆ ಲಾರಿಯೊಂದು ಈ ರಸ್ತೆಯಲ್ಲಿ ಹೂತುಹೋಗಿ, ಸುಮಾರು 5ಗಂಟೆಗಳ ಕಾಲ ಸಂಚಾರಕ್ಕೆ ತೊಡಕುಂಟಾಗಿತ್ತು. ದಿನನಿತ್ಯದ ಈ ಜಂಜಾಟದಿoದ ಬೇಸರಗೊoಡಿರುವ ಬಸ್ ಚಾಲಕ ಹಾಗೂ ನಿರ್ವಾಹಕ ರಸ್ತೆ ದುರಸ್ತಿಯಾಗುವವರೆಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗುವುದು ಎಂದು ಹೇಳಿದ್ದು,ಇದರಿಂದ ಗ್ರಾಮದ ಜನರು ಪಟ್ಟಣಕ್ಕೆ ತೆರಳಲು ತೊಂದರೆ ಉoಟಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಳೆದ 18ವರ್ಷದ ಹಿಂದೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ರೋಜ್‌ಗಾರ್ ಯೋಜನೆಯಲ್ಲಿ ರಸ್ತೆ ಡಾಂಬರೀಕರಣಗೊoಡಿದ್ದು, ಇದೀಗ ರಸ್ತೆ ಸಂಪೂರ್ಣ ಹಾಳಾಗಿದೆ. 25 ಲಕ್ಷ ಶಾಸಕರ ಅನುದಾನ ಬಳಸಿ ಸಂಪೂರ್ಣ ಹಾಳಾಗಿದ್ದ 2 ತಿರುವಿನಲ್ಲಿ ಒಟ್ಟು 500 ಮೀಟರ್ ರಸ್ತೆ ಕಾಂಕ್ರಿಟೀಕರಣಗೊಳಿಸಲಾಗಿದೆ. ಉಳಿದ ಕಡೆ ರಸ್ತೆ ದುರಸ್ತಿ ಕಾರ್ಯ ನಡೆಯಬೇಕಿದೆ. ದಸರಾ ಹಬ್ಬದ ರಜಾ ಕಳೆದು ಶಾಲೆ ಪ್ರಾರಂಭಗೊಳ್ಳುವ ಮುನ್ನ ಕೇಂದ್ರ ಸರ್ಕಾರದ ಹಣ ಬಿಡುಗಡೆ ಮಾಡಿ ರಸ್ತೆ ದುರಸ್ಥಿ ಕಾರ್ಯ ನಡೆಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
…………. ವಿಜಯಕುಮಾರ್, ಟಿ