ಕೆ.ಆರ್.ಪೇಟೆ:ವಿ.ಎ ಸಂಘದ ತಾಲೂಕು ಅಧ್ಯಕ್ಷರಾಗಿ ದಶರಥ ಪೂಜಾರಿ ಅವಿರೋಧ ಆಯ್ಕೆ-ನೂತನ ಪದಾಧಿಕಾರಿಗಳ ಅಭಿನಂದಿಸಿದ ಡಾ:ಎಂ.ಯು ಅಶೋಕ್

ಕೆ.ಆರ್.ಪೇಟೆ:ತಾಲ್ಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಆಡಳಿತ ಮಂಡಳಿಯನ್ನು ಸಂಘದ ಸದಸ್ಯರುಗಳ ಸರ್ವಾನುಮತದೊಂದಿಗೆ ಪುನರ್‌ರಚನೆ ಮಾಡಲಾಯಿತು.

ಎಲ್ಲಾ ಸದಸ್ಯರ ಒಮ್ಮತದ ಮೇರೆಗೆ ಸಂಘದ ನೂತನ ತಾಲ್ಲೂಕು ಅಧ್ಯಕ್ಷರಾಗಿ ದಶರಥ ಪೂಜಾರಿ ಅವರನ್ನು ಸರ್ವಾನುಮತದಿಂದ ಆರಿಸುವುದರ ಜೊತೆಗೆ ಗೌರವಾಧ್ಯಕ್ಷರಾಗಿ ಪ್ರಸನ್ನ,ಉಪಾಧ್ಯಕ್ಷರಾಗಿ ರಾಘವೇಂದ್ರ, ಸಾವಿತ್ರಿ, ಕಾರ್ಯದರ್ಶಿಯಾಗಿ ಹೊನ್ನೇಶ್‌, ಖಜಾಂಜಿಯಾಗಿ ಕಾವ್ಯ ಗೌಡರ್ ಅವರನ್ನು ಆಯ್ಕೆ ಮಾಡಲಾಯಿತು.

ತಾಲೂಕು ಕಚೇರಿಯಲ್ಲಿ ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿದ ತಾಲೂಕು ದಂಡಾಧಿಕಾರಿ ಡಾ:ಎಂ.ಯು ಅಶೋಕ್, ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸಲು ಗ್ರಾಮ ಆಡಳಿತ ಅಧಿಕಾರಿಗಳ ಪಾತ್ರ ಮುಖ್ಯ. ಹಾಗಾಗಿ ಸಂಘಟನೆಯ ಮೂಲಕ ಸಂಘಟಿತರಾಗಿ ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಕೊಂಡಿಯಂತೆ ಕಾರ್ಯನಿರ್ವಹಿಸಬೇಕು ಎಂದು ನೂತನ ಆಡಳಿತ ಮಂಡಳಿಗೆ ಸಲಹೆ ನೀಡಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ದಶರಥ ಪೂಜಾರಿ, ನನ್ನ ಆಡಳಿತ ಅವಧಿಯಲ್ಲಿ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಮಾಣಿಕವಾಗಿ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗೆ ಸ್ಪಂದಿಸಿ ಕಾರ್ಯನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹರೀಶ್,ವಿ.ಎ ಸುನಿಲ್ ಕುಮಾರ್ ಶಿರಸಂಗಿ, ಧರ್ಮಪ್ಪ ಆನಂದ್, ಲೋಹಿತ್ ವಾಲ್ಮೀಕಿ, ರಾಘವೇಂದ್ರ,ಸೇರಿದಂತೆ ಉಪಸ್ಥಿತರಿದ್ದರು.

———–ಮನು ಮಾಕವಳ್ಳಿ ಕೆ.ಆರ್ ಪೇಟೆ

Leave a Reply

Your email address will not be published. Required fields are marked *

× How can I help you?