ಕೊಟ್ಟಿಗೆಹಾರ-ನಿಷ್ಪಾಪಿ ನಾಗೇಶ್ ಆಚಾರ್ ನ ಮೃತದೇಹ ಕೊನೆಗೂ ತನ್ನ ಸಾ,ವಿಗೆ ನ್ಯಾಯ ಸಿಕ್ಕ ಸಂತೋಷದಲ್ಲಿ ಮಗ್ಗುಲು ಬದಲಾಯಿಸಿದೆ

ಕೊಟ್ಟಿಗೆಹಾರ-ನಿಷ್ಪಾಪಿ ನಾಗೇಶ್ ಆಚಾರ್ ನ ಮೃತದೇಹ ಕೊನೆಗೂ ತನ್ನ ಸಾ,ವಿಗೆ ನ್ಯಾಯ ಸಿಕ್ಕ ಸಂತೋಷದಲ್ಲಿ ಮಗ್ಗುಲು ಬದಲಾಯಿಸಿದೆ.

2021 ರಲ್ಲಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸಂಚಲನ ಸ್ರಷ್ಟಿಸಿದ್ದ ನಾಗೇಶ್ ಆಚಾರ್ ಎಂಬ ನಿಷ್ಪಾಪಿ ಕಾರ್ಪೆಂಟರ್ ಒಬ್ಬನ ಹತ್ಯೆಯ ಪ್ರಕರಣದ ತೀರ್ಪು ಹೊರಬಿದ್ದಿದ್ದು ಕೊ,ಲೆ ಆರೋಪಿ ಕೃಷ್ಣೇಗೌಡನಿಗೆ ಚಿಕ್ಕಮಗಳೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಹೊರಡಿಸಿದೆ.

ಮೂಡಿಗೆರೆ ತಾಲ್ಲೂಕಿನ ಬಾಳೂರು ಠಾಣಾ ವ್ಯಾಪ್ತಿಯ ಬಿದಿರುತಳ ಎಂಬಲ್ಲಿ 2021 ರ ನವೆಂಬರ್ 27 ರಂದು ನಡೆದಿದ್ದ ಕೊ,ಲೆ ಪ್ರಕರಣ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಧಕ್ಷ ಪೊಲೀಸ್ ಅಧಿಕಾರಿಗಳಾದ ಸೋಮಶೇಖರ್ ಜಿ.ಸಿ ಹಾಗು ಹಾಲಿ ಮೂಡಿಗೆರೆ ಸರ್ಕಲ್ ಇನ್ಸ್ಪೆಕ್ಟರ್ ಆಗಿರುವ ಸೋಮೇಗೌಡ ಕೊಲೆಯ ಹಿಂದಿನ ಆಳ ಅಗಲಗಳ ಇಂಚು-ಇಂಚಾಗಿ ಶೋದಿಸತೊಡಗಿದ್ದರು.

ಹೋಂ ಸ್ಟೇ ಕಟ್ಟುತ್ತಿದ್ದ ಕೃಷ್ಣೇಗೌಡ …

ಆರೋಪಿ ಕೃಷ್ಣೇಗೌಡ ಬಾಳೂರು ಗ್ರಾಮದ ಚಾರ್ಮಾಡಿ ಘಟ್ಟದ ತಪ್ಪಲಿನಲ್ಲಿರುವ ಬಿದಿರುತಳ ಗ್ರಾಮದಲ್ಲಿ ಹೋಂ ಸ್ಟೇ ಒಂದನ್ನು ಕಟ್ಟುತ್ತಿದ್ದ.ಈ ಹೋಂ ಸ್ಟೇನಲ್ಲಿ ಮರದ ಕೆಲಸವನ್ನು ನಾಗೇಶ್ ಆಚಾರ್ ಮಾಡುತ್ತಿದ್ದರು.

ಅಂದು ಎಂದಿನಂತೆ ಕೃಷ್ಣೇಗೌಡ ತನ್ನ ಹೋಂ ಸ್ಟೇ ಕೆಲಸಕ್ಕೆಂದು ಬಾಳೂರಿನ ನಾಗೇಶ್ ಆಚಾರ್ ರವರನ್ನು ಅವರ ಮನೆಯಿಂದ ಜೀಪಿನಲ್ಲಿ ಕರೆದುಕೊಂಡು ಹೋಗಿದ್ದ.

ಎರಡು ದಿನಗಳ ನಂತರ ನಾಗೇಶ್ ಆಚಾರ್ ಮನೆಗೆ ಬಂದ ಕೃಷ್ಣೇಗೌಡ ಅವರ ಪತ್ನಿ ಬಳಿ ನಿಮ್ಮ ಗಂಡ ನಾಪತ್ತೆಯಾಗಿದ್ದಾನೆ.ಮೀನು ಶಿಕಾರಿಗೆ ಎಂದು ಹೋದವನು ಮರಳಿ ಬಂದಿಲ್ಲ ಎಂದು ಕತೆ ಹೆಣೆದಿದ್ದಾನೆ.ಇದರಿಂದ ಗಾಬರಿಗೊಂಡು ನಾಗೇಶ್ ಆಚಾರ್ ಪತ್ನಿ ಸುಮ ಬಾಳೂರು ಠಾಣೆಯಲ್ಲಿ ಗಂಡ ನಾಪತ್ತೆಯಾಗಿದ್ದಾರೆಂದು ದೂರು ನೀಡಿದ್ದರು.

ನಾಗೇಶ್ ಆಚಾರ್

ಹಸಿಮಣ್ಣಿನಲ್ಲಿ ಕಂಡ ಹೆಜ್ಜೆ ಗುರುತುಗಳು..

ವಿಚಾರ ಎಲ್ಲೆಡೆ ಹಬ್ಬಿ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಮತ್ತು ನೂರಾರು ಗ್ರಾಮಸ್ಥರು ನಾಗೇಶ್ ಆಚಾರ್ ನಿಗಾಗಿ ಹುಡುಕಾಟ ನಡೆಸುತ್ತಾರೆ.ಸ್ವತಃ ಕೃಷ್ಣೇಗೌಡನು ಸಹ ಹುಡುಕಾಟದಲ್ಲಿ ನಿರತನಾಗಿರುತ್ತಾನೆ.ಎರಡು ದಿನ ಹುಡುಕಾಡಿದರು ನಾಗೇಶ್ ಸುಳಿವು ಸಿಕ್ಕಿರಲಿಲ್ಲ. ಇನ್ನೇನು ಹುಡಕಾಟ ನಿಲ್ಲಿಸಿ ಮರಳಬೇಕು ಎನ್ನುವಷ್ಟರಲ್ಲಿ ವ್ಯಕ್ತಿಯೊಬ್ಬರಿಗೆ ಬಿದಿರುತಳ ಸಮೀಪ ಹಸಿಮಣ್ಣಿನಲ್ಲಿ ಕಂಡ ಹೆಜ್ಜೆ ಗುರುತುಗಳು ಪ್ರಕರಣಕ್ಕೆ ತಿರುವು ನೀಡುತ್ತವೆ.

ಸಾಲ ವಾಪಾಸ್ ಕೇಳಿದ್ದಕ್ಕೆ ಕೊಂ,ದು ಮುಗಿಸಿದ್ದ ..

ಹೆಜ್ಜೆಯ ಗುರುತನ್ನು ಹುಡುಕಿ ಹೊರಟ ಖಾಕಿಗೆ ಬಿದಿರು ತಳದಿಂದ ಒಂದು ಕಿಲೋಮೀಟರ್ ದೂರದ ಕಡಿದಾದ ಸ್ಥಳದಲ್ಲಿ ಹೂಣಲ್ಪಟ್ಟಿದ್ದ ಅರೆ ಕೊಳೆತ ಸ್ಥೀತಿಯಲ್ಲಿದ್ದ ನಾಗೇಶ್ ಆಚಾರ್ ಶವ ಪತ್ತೆಯಾಗುತ್ತದೆ.ನಾಗೇಶ್ ಆಚಾರ್ ಪತ್ನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಕೃಷ್ಣೇಗೌಡ ನನ್ನ ಪತಿಗೆ ಐದು ಲಕ್ಷ ಹಣ ಕೊಡಲು ಇತ್ತು. ಸಾಲ ಕೇಳಿದ್ದಕ್ಕಾಗಿ ಕೊ,ಲೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದರು.ಇತ್ತ ನಾಪತ್ತೆಯ ನಾಟಕ ಸೃಷ್ಟಿಸಿ ಬಜಾವಾಗಲು ಪ್ಲಾನ್ ಮಾಡಿದ್ದ ಕೃಷ್ಣೇಗೌಡ ಮತ್ತು  ಜೀಪ್ ಡ್ರೈವರ್ ಪ್ರದೀಪ್ ಮತ್ತು ಉದಯ ಇವರುಗಳನ್ನು ಪೊಲೀಸರು ಬಂಧಿಸಿದ್ದರು.

ಸದ್ಯ ಪ್ರಕರಣದಲ್ಲಿನ 1ನೇ ಆರೋಪಿಯಾದ ಬಾಳೂರು ಕೃಷ್ಣೇಗೌಡನಿಗೆ ಜೀವಾವಧಿ ಶಿಕ್ಷೆ ಮತ್ತು  50 ಸಾವಿರ ರೂ ದಂಡ ಮತ್ತು 2ನೇ ಆರೋಪಿಯಾದ ಉದಯ ಬಿ ಸಿ ಈತನಿಗೆ 3 ವರ್ಷಗಳ ಕಠಿಣ ಶಿಕ್ಷೆ ಮತ್ತು ರೂ. 3 ಸಾವಿರ ದಂಡ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ.

ಪ್ರಕರಣದ ತನಿಖಾ ಸಹಾಯಕರಾಗಿ ಸಿ.ಪಿ.ಸಿ ವೈಭವ್ ಮತ್ತು ಸಿ.ಪಿ.ಸಿ ಮನು ಹಾಗೂ ನ್ಯಾಯಾಲಯದ ಕರ್ತವ್ಯನ್ನು ಎ.ಎಸ್.ಐ ಯತೀಶ್ ನಿರ್ವಹಿಸಿದ್ದರು.ಸರ್ಕಾರಿ ಅಭಿಯೋಜಕರಾದ ಹೆಚ್.ಎಸ್ ಲೋಹಿತಾಶ್ವಚಾರ್ ರವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

—————-ಆಶಾ ಸಂತೋಷ್ ಅತ್ತಿಗೆರೆ

Leave a Reply

Your email address will not be published. Required fields are marked *

× How can I help you?