ಚಿಕ್ಕಮಗಳೂರು-ನಗರದ ವಿಜಯಪುರ ಕಾರ್ಯಪ್ಪ ಪಾರ್ಕ್,ರಸ್ತೆ ಗುಂಡಿ ಗೊಟರುಗಳಿಂದ ಕೂಡಿದ್ದು ವಾಹನಗಳು ಸಂಚರಿಸುವಾಗ ರಸ್ತೆಯ ಕೊಳಚೆ ನೀರು ಅಕ್ಕಪಕ್ಕದ ಮನೆ ಗಳಿಗೆ ರಾಚುತ್ತಿದ್ದು ಈ ಬಗ್ಗೆ ಹಲವು ಬಾರಿ ಸಂಬoಧಪಟ್ಟವರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲವೆoದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ಈ ರಸ್ತೆಯನ್ನು ಒಳಚರಂಡಿ ಕಲ್ಪಿಸುವ ನೆಪದಲ್ಲಿ ಸಂಪೂರ್ಣ ಹಾಳುಗೆಡವಿದ್ದು, ಈ ರಸ್ತೆ ಮಲ್ಲಂದೂರು ರಸ್ತೆ ಗೆ ಚೇತನ ನರ್ಸಿಂಗ್ ಹೋಂವರೆಗೆ ಸಂಪರ್ಕ ರಸ್ತೆಯಾಗಿದ್ದು ಕನಿಷ್ಟ ನೂರಾರು ಗುಂಡಿಗಳು ಬಿದ್ದಿದ್ದು ವಾಹನ ಸವಾರರು ಪಾದಚಾರಿಗಳು ಜೀವ ಬಿಗಿಹಿಡಿದು ಓಡಾಡುವ ಸ್ಥಿತಿ ನಿರ್ಮಾಣಗೊಂಡಿದೆ.
ಈ ರಸ್ತೆಗಳಲ್ಲಿ ಹಲವರು ಚರಂಡಿ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದು ಮನೆಗಳಿಗೆ ರಸ್ತೆಯಿಂದಲೇ ರ್ಯಾoಪ್ ನಿರ್ಮಾಣ ಮಾಡಿಕೊಂಡಿದ್ದಾರೆ.ಈ ಬಗ್ಗೆ ನಗರಸಭೆ ಹಾಗೂ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಗೊತ್ತಿದ್ದರೂ ಕಣ್ಣುಮುಚ್ಚಿ ಕುಳಿತಿರುವುದು ಏಕೆಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
30ಅಡಿ ಅಗಲದ ರಸ್ತೆಯನ್ನು ಹಲವು ಕಟ್ಟಡ ಮಾಲೀಕರು ಒತ್ತುವರಿ ಮಾಡಿರುವ ಕಾರಣ ಕೆಲವೆಡೆ 20 ಅಡಿಗೆ ಕುಸಿದಿದೆ. ಈ ಬಗ್ಗೆ ನಗರಸಭೆಗೆ ಗೊತ್ತಿದ್ದರೂ ಮೌನವಹಿಸಿ ರುವುದು ಆಶ್ಚರ್ಯಕರವಾಗಿದೆ..ಈ ರಸ್ತೆಯ ಕಾರ್ಯಪ್ಪ ಪಾರ್ಕ್ ಸಮೀಪ ಸಾರ್ವಜನಿಕ ನೀರಿನ ನಲ್ಲಿ ಇರುವ ಕಡೆ ಕಸ ಹಾಕಬಾರದು ಎಂದು ನಗರಸಭೆ ಸೂಚನಾ ಫಲಕ ಅಳವಡಿಸಿದ್ದರು,ಜನರು ಕಸ ತಂದು ಸುರಿಯುತ್ತಿದ್ದು ಇದರಿಂದ ಸೊಳ್ಳೆ ಹಾಗೂ ನಾಯಿಗಳ ಹಾವಳಿ ಜಾಸ್ತಿಯಾಗಿ ರೋಗರುಜಿನಗಳಿಗೆ ಕಾರಣ ವಾಗುತ್ತಿದೆ ಎಂದು ಸಾರ್ವಜನಿಕರು ನೋವು ತೋಡಿಕೊಂಡಿದ್ದಾರೆ.
ಅಲ್ಲದೇ ಪಾರ್ಕ್ ಒಳಗೆ ಹಗಲು ರಾತ್ರಿ ಪುಂಡರ ಹಾವಳಿ ಸಹ ಹೆಚ್ಚಾಗಿದ್ದು ಪೊಲೀಸರು ಈ ಬಗ್ಗೆ ಕ್ರಮ ಕೈಗೊಂಡು ಪುಂಡರ ಹಾವಳಿಯನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಲ್ಲಂದೂರು ರಸ್ತೆಯ ಚೇತನಾ ಮೆಡಿಕಲ್ ನಿಂದ ಕಾರ್ಯಪ್ಪ ಉದ್ಯಾನವನವರೆಗೆ ರಸ್ತೆಗೆ ಅಡಚಣೆ ಮಾಡಿಕೊಂಡು 2 ಬದಿ ವಾಹನ ನಿಲುಗಡೆ ಮಾಡುತ್ತಿದ್ದು ಇದರಿಂದ ಶಾಲಾ ವಾಹನಗಳು,ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ.
ಈ ರಸ್ತೆಯ 2 ಬದಿಗಳಲ್ಲಿ ಹಲವರು ಬೇರೆ ಕಡೆಯಿಂದ ವಾಹನ ಗಳನ್ನು ತಂದು ನಿಲ್ಲಿಸಿ ಹೋಗುತ್ತಿದ್ದು ವಾಹನ ಮಾಲೀಕರು ವಾರಗಟ್ಟಲೇ ಆ ಕಡೆ ಸುಳಿಯದಿರುವುದರಿಂದ ಅಲ್ಲಿನ ನಿವಾಸಿಗಳು ನರಕಯಾತನೆ ಅನುಭವಿಸುವಂತಾಗಿದೆ.
ಕೆಲವು ಮನೆ ಮಾಲೀಕರು ಚರಂಡಿ ಮುಚ್ಚಿ ಮನೆ ನಿರ್ಮಾಣ ಮಾಡಿಕೊಂಡಿರುವುದರಿoದ ಅವರು ಮನೆ ತೊಳೆದ ಕೊಳಚೆ ನೀರು ರಸ್ತೆ ಯಲ್ಲಿ ದಿನನಿತ್ಯ ಹರಿಯುತ್ತಿದ್ದು ಈ ಬಗ್ಗೆ ನಗರಸಭೆ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ಸ್ಥಳೀಯರು ತಂದರು ಕ್ರಮ ಜರುಗಿಸದೇ ನಿರ್ಲಕ್ಷ್ಯ ವಹಿಸಿದ್ದಾರೇ.
ಈ ರಸ್ತೆ ಡಾಂಬರೀಕರಣ ಕಾಣದೇ ಹಲವು ವರ್ಷಗಳು ಕಳೆದಿದ್ದು ಈ ಬಗ್ಗೆ ನಗರಸಭೆ ಆಯುಕ್ತರು ಹಾಗೂ ವಾರ್ಡ್ ಸದಸ್ಯ ಲಕ್ಷ್ಮಣ್ ಅವರ ಗಮನಕ್ಕೆ ತಂದಿದ್ದು ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಡಾಂಬ ರೀಕರಣ ಆಗಿಲ್ಲವೆoದು ಸಬೂಬು ಹೇಳುತ್ತಿದ್ದು ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಡಾoಬರೀಕರಣ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ರಸ್ತೆ ಅವ್ಯವಸ್ಥೆ, ಕಟ್ಟಡ ಮಾಲೀಕರಿಂದ ರಸ್ತೆ ಒತ್ತುವರಿ, ಅಡ್ಡಾದಿಡ್ಡಿ ವಾಹನ ನಿಲುಗಡೆ ಇತ್ಯಾದಿಗಳ ಬಗ್ಗೆ ಸಂಬoಧಪಟ್ಟವರು ಯಾವುದೇ ಸಬೂಬು ಹೇಳದೇ ಕ್ರಮ ಕೈಗೊಂಡು ಸಾರ್ವಜನಿಕರಿಗೆ ವರ್ಷಾನುಗಟ್ಟಲೇ ಅನುಭವಿಸುತ್ತಿರುವ ಕಿರಿ, ಕಿರಿ ತಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ.