ಮೈಸೂರು:ಕಲಾಭೂಮಿ ಸಂಸ್ಥೆಯ ವತಿಯಿಂದ ಅಕ್ಟೋಬರ್ 20ರಂದು ಬೆಳಗ್ಗೆ 9:00 ರಿಂದ ರಾತ್ರಿ 9:00 ರವರಿಗೂ ಹೂಟಗಳ್ಳಿ ಬಿ.ಎನ್ ರಾವ್ ಸಭಾಂಗಣದಲ್ಲಿ ‘ಸ್ವರ ಸಂಭ್ರಮ’ ರಾಜ್ಯಮಟ್ಟದ ಕರೋಕೆ ಗಾಯನ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಪ್ರಚಾರ ಸಾಮಗ್ರಿಗಳನ್ನು ಶಾಸಕರಾದ ಟಿ.ಎಸ್ ಶ್ರೀವತ್ಸ ತಮ್ಮ ಗ್ರಹ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.
ಇಂದಿನ ಒತ್ತಡ ಮತ್ತು ಕಲುಷಿತ ವಾತಾವರಣದ ಜೀವನದಲ್ಲಿ ಸಂಗೀತ ಮನಸ್ಸಿನ ಆರೋಗ್ಯವನ್ನು ಕಾಪಾಡುತ್ತದೆ.ಆದ್ದರಿಂದ ಮನಸ್ಸಿನ ಆರೋಗ್ಯಕ್ಕೆ ಸಂಗೀತವೇ ಮದ್ದು. ಸಂಗೀತಕ್ಕೆ ಅಗಾಧ ಶಕ್ತಿಯಿದ್ದು,ಎಂಥವರನ್ನೂ ತಲೆದೂಗುವಂತೆ ಮಾಡುತ್ತದೆ.ಹೀಗಾಗಿ ಜಿಗುಪ್ಸೆ ಎನಿಸಿದಾಗ ಸಂಗೀತವನ್ನು ಆಲಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಜನತೆಯಲ್ಲಿ ಮನವಿ ಮಾಡಿದರು.
ನಂತರ ಮಾತನಾಡಿದ ಚಿತ್ರ ನಿರ್ದೇಶಕರು ಹಾಗೂ ನಿರ್ಮಾಪಕರಾದ ಆಸ್ಕರ್ ಕೃಷ್ಣ, ಸ್ವರ ಸಂಭ್ರಮ ಕಾರ್ಯಕ್ರಮವು ಉದಯೋನ್ಮುಖ ಹಾಗೂ ಪರಿಣಿತ ಗಾಯಕ/ಗಾಯಕಿಯರಿಗೆ ಕನ್ನಡ ಚಿತ್ರರಂಗದ ಸಾಧಕರು, ಕಲಾವಿದರು ಹಾಗೂ ತಂತ್ರಜ್ಞರ ಸಮ್ಮುಖದಲ್ಲಿ ಹಾಡುವ ಅವಕಾಶ ಒದಗಿಸಲಿದೆ.
ಇದು ರಾಜ್ಯ ಮಟ್ಟದ ಕರೋಕೆ ಗಾಯನ ಕಾರ್ಯಕ್ರಮವಾಗಿದ್ದು ವೇದಿಕೆಯಲ್ಲಿ ಹಾಡು ಹೇಳಲು ಇಚ್ಛಿಸುವವರು 9206694999/ 8660073484 ನಂಬರಿಗೆ ಸಂಪರ್ಕಿಸಿ ನೊಂದಾಯಿಸಿ ಕೊಳ್ಳಬಹುದು ಎಂದು ಹೇಳಿದರು.
ಕಾರ್ಯಕ್ರಮದ ಆಯೋಜಕರಾದ ಬಿ ನಿಂಗರಾಜ್, ಬಿಜೆಪಿ ನಗರ ಉಪಾಧ್ಯಕ್ಷ ಜೋಗಿ ಮಂಜು, ಪ್ರದೀಪ್ ಕುಮಾರ್, ಎಸ್ ಎನ್ ರಾಜೇಶ್, ಕಿಶೋರ್, ಕೀರ್ತಿ, ಹಾಗೂ ಇನ್ನಿತರರು ಹಾಜರಿದ್ದರು.
——————–ಮಧುಕುಮಾರ್