ಮುಂಬೈ-ಖಾಸಗಿ ಕಾರ್ಯಕ್ರಮದ ನಿಮಿತ್ತ ಮುಂಬೈ ಪ್ರವಾಸದಲ್ಲಿರುವ ಮೂಡಿಗೆರೆಯ ವಿಧಾನಸಭಾ ಪರಾಜಿತ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಅವರನ್ನು ಖ್ಯಾತ ಹೋಟೆಲ್ ಉದ್ಯಮಿ, ಕಾಮಗಾರಿ ಅಗಡಿಯಾ,ಮಹಾರಾಷ್ಟ್ರ ಪ್ರದೇಶ ಉಪಾಧ್ಯಕ್ಷರಾದ ಡಾ,ಶಿವ ಮೂಡಿಗೆರೆ ಯವರು ಆತ್ಮೀಯವಾಗಿ ಸನ್ಮಾನಿಸಿದರು.
ಸನ್ಮಾನಿಸಿ ಮಾತನಾಡಿದ ಡಾ,ಶಿವ ಮೂಡಿಗೆರೆ,ಅತ್ಯಂತ ಸಂಭಾವಿತ,ಸಮಾಜದ ಏಳ್ಗೆಯ ಬಗ್ಗೆ ದೂರದೃಷ್ಟಿಯುಳ್ಳ ದೀಪಕ್ ದೊಡ್ಡಯ್ಯ ನವರು ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದು ದುರದೃಷ್ಟಕರ.ಆ ಸೋಲಿಗೆ ಅನೇಕ ಕಾರಣಗಳಿದ್ದವು.
ಹಾಲಿ ಶಾಸಕರ ಕಾರ್ಯವೈಖರಿಗಳ ಬಗ್ಗೆ ಜನರಿಗೆ ಈಗಾಗಲೇ ಬೇಸರ ಮೂಡಿದ್ದು ದೀಪಕ್ ದೊಡ್ಡಯ್ಯ ರವರು ಶಾಸಕರಾಗುವುದನ್ನು ಎದುರುನೋಡುವಂತೆ ಮಾಡಿದೆ.
ಮುಂದಿನ ಬಾರಿ ದೀಪಕ್ ದೊಡ್ಡಯ್ಯನವರು ಶಾಸಕರಾಗಿ ವಿಧಾಸಭೆಯನ್ನು ಪ್ರವೇಶಿಸುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.ಇಂತಹವರಿಗೆ ಅಧಿಕಾರ ದೊರೆತರೆ ಇಂದಿಗೂ ಹಿಂದುಳಿದ ತಾಲೂಕಾಗಿಯೇ ಇರುವ ಮೂಡಿಗೆರೆ ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ಧಿ ಹೊಂದಲಿದೆ ಎಂದರು.
ದೀಪಕ್ ದೊಡ್ಡಯ್ಯನವರ ಜೊತೆಗೆ ಚಿಕ್ಕಮಗಳೂರು ಜಿಲ್ಲೆಯ ಇಲ್ಲಿರುವ ಉದ್ಯಮಿಗಳು ಅದರಲ್ಲೂ ವಿಶೇಷವಾಗಿ ಮೂಡಿಗೆರೆ ತಾಲೂಕಿನ ನಾವುಗಳು ಮುಂದಿನ ಚುನಾವಣೆಯಲ್ಲಿ ಎಲ್ಲ ರೀತಿಯ ಸಹಕಾರಗಳೊಂದಿಗೆ ನಿಲ್ಲುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದೀಪಕ್ ದೊಡ್ಡಯ್ಯನವರು ನಮ್ಮ ಜಿಲ್ಲೆಯ ಅದರಲ್ಲೂ ನಮ್ಮ ಮೂಡಿಗೆರೆ ತಾಲೂಕಿನ ಡಾ ಶಿವ ಮೂಡಿಗೆರೆಯವರು ಉದ್ಯಮಿಯಾಗಿ ಬಿಜೆಪಿ ಪಕ್ಷದ ಮುಖಂಡರಾಗಿ ಇಲ್ಲಿನ ಜನರ ಸೇವೆ ಸಲ್ಲಿಸುತ್ತಿರುವುದು ಅತ್ಯಂತ ಸಂತೋಷ ತಂದಿದೆ.ನಿಮ್ಮ ಸಹಕಾರವನ್ನು ನಾನು ಎಂದಿಗೂ ಬಯಸುತ್ತೇನೆ ಎಂದರು.
ಮೂಡಿಗೆರೆಯವರಾದ ಮುಂಬೈ ಉದ್ಯಮಿ ಮಂಜುನಾಥ್ ಗೌಡ ಹಾಗು ಕೋಣಗೆರೆ ನವೀನ್ ಗೌಡ ಅವರು ಇದ್ದರು.