ಮಂಡ್ಯ-ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಹೊಳಲು ಆರೋಗ್ಯ ಕೇಂದ್ರ ಮತ್ತು ಆಶಾಕಿರಣ ಕಾರ್ಯಕ್ರಮದಡಿ ಮುಂದುವರಿದ ದ್ವಿತೀಯ ಹಂತದ ನೇತ್ರ ತಪಾಸಣಾ ಶಿಬಿರವು ಈ ದಿನ ಹೊಳಲು ಆಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ ಜರುಗಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಡಾಕ್ಟರ್ ರವಿಕುಮಾರ್,ಪ್ರತಿಯೊಬ್ಬರೂ ಈ ಕಾರ್ಯಕ್ರಮವನ್ನು ಸದುಪಯೋಗ ಪಡೆದುಕೊಳ್ಳಬೇಕು. ದೃಷ್ಟಿದೋಷ ಇರುವವರು ಈ ಶಿಬಿರದಲ್ಲಿ ಭಾಗವಹಿಸಿ ಖರ್ಚಿಲ್ಲದೆ ಕಣ್ಣುಗಳ ರಕ್ಷಣೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಜೊತೆಗೆ ನೇತ್ರದಾನದ ಮಹತ್ವದ ಬಗ್ಗೆ ಮಾತನಾಡಿದ ಅವರು, “ನೇತ್ರದಾನ ಮಹಾದಾನ”ವೆಂದು ತಿಳಿದು ನೇತ್ರದಾನ ಮಾಡುವುದರ ಮುಖಾಂತರ ಇನ್ನೊಬ್ಬರ ಬದುಕಿಗೆ ಆಶಾಕಿರಣವಾಗುವ ಕೆಲಸವನ್ನು ನಾವು ನೀವೆಲ್ಲರೂ ಮಾಡೋಣ ಎಂದು ಶಿಭಿರಾರ್ಥಿಗಳಿಗೆ ಸಲಹೆ ನೀಡಿದರು.
ನೇತ್ರಾಧಿಕಾರಿ ಡಾ. ಪವನ್ ಸಿಂಗ್ ಮಾತನಾಡಿ,ಈ ಕಾರ್ಯಕ್ರಮವನ್ನು ಪ್ರತಿಯೊಬ್ಬರಿಗೂ ಅನುಕೂಲವಾಗಲೆಂದು ಹಮ್ಮಿಕೊಳ್ಳಲಾಗಿದೆ.ದೃಷ್ಟಿದೋಷ ಹಾಗೂ ಕಣ್ಣಿನ ತೊಂದರೆ ಇರುವವರು ಇಲ್ಲಿ ಚಿಕಿತ್ಸೆ ಪಡೆದು ಸಮಸ್ಯೆ ನಿವಾರಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಡಾಕ್ಟರ್ ದುರ್ಗಾoಬ , ಆರೋಗ್ಯ ಸುರಕ್ಷಾಧಿಕಾರಿಯಾದ ಗೀತಾ ಎಂ. ಸಮುದಾಯ ಆರೋಗ್ಯ ಅಧಿಕಾರಿಯಾದ ಡಾಕ್ಟರ್ ಚೈತ್ರ, ಡಾ. ರುಕ್ಮಿಣಿ , ಹಾಗೂ ಶುಶ್ರುಷ ಅಧಿಕಾರಿಯಾದ ರೇಷ್ಮಾ, ಮಹೇಶ್, ಇತರರು ಉಪಸ್ಥಿತರಿದ್ದರು.
————ಕೆ.ಪಿ. ಕುಮಾರ್ ,ಹೊಳಲು