ಚಿಕ್ಕಮಗಳೂರು-ಸಬ್ ರಿಜಿಸ್ಟರ್ ಮಂಜುನಾಥ್‌ಗೆ ಪತ್ರ ಬರಹಗಾರರ ಸಂಘದಿoದ ಆತ್ಮೀಯ ಬೀಳ್ಕೊಡುಗೆ

ಚಿಕ್ಕಮಗಳೂರು- ಜಿಲ್ಲಾ ಸಬ್ ರಿಜಿಸ್ಟರ್ ಅಧಿಕಾರಿಯಾದ ಮಂಜುನಾಥ್ ಅವರ ನಿಸ್ವಾರ್ಥ ಸೇವೆ ಮತ್ತು ಅವರ ವಿಶೇಷವಾದ ವ್ಯಕ್ತಿತ್ವ ಪಾರದರ್ಶಕತೆ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಜಿಲ್ಲಾ ಸಿವಿಲ್ ಇಂಜಿನಿಯರ್ ಸಂಘದ ಅಧ್ಯಕ್ಷ ಜಿ. ರಮೇಶ್ ಹೇಳಿದರು.

ಚಿಕ್ಕಮಗಳೂರು ಜಿಲ್ಲಾ ಸಬ್‌ರಿಜಿಸ್ಟರ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಇಲ್ಲಿಂದ ವರ್ಗಾವಣೆಗೊಂಡಿರುವ ಅಧಿಕಾರಿಗೆ ಜಿಲ್ಲಾ ಪತ್ರ ಬರಹಗಾರರ ಸಂಘದ ವತಿಯಿಂದ ನಗರದ ಖಾಸಗಿ ವಸತಿಗೃಹದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಂಜುನಾಥ್‌ರವರು ಚಿಕ್ಕಮಗಳೂರಿಗೆ ಸಬ್ ರಿಜಿಸ್ಟರ್ ಅಧಿಕಾರಿಯಾಗಿ ವರ್ಗಾವಣೆಗೊಂಡು ಬಂದ ನಂತರ ಕಛೇರಿ ಸಿಬ್ಬಂದಿ ಮತ್ತು ಪತ್ರ ಬರಹಗಾರರು ಹಾಗೂ ಸಾರ್ವಜನಿಕರ ನಡುವೆ ಸೌಹಾರ್ದತೆಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಸರಳ ವ್ಯಕ್ತಿತ್ವದಿಂದ ಕಚೇರಿ ಸಿಬ್ಬಂದಿಗಳ ಪ್ರೀತಿಗೆ ಪಾತ್ರರಾಗಿದ್ದು ಚಿಕ್ಕಮಗಳೂರಿನಲ್ಲಿ ಅವರ ಸೇವಾ ಅವಧಿ ಕಡಿಮೆ ಇದ್ದರೂ ಆಡಳಿತ ನಿರ್ವಹಣೆಯಿಂದ ಪತ್ರ ಬರಹಗಾರರು ಮತ್ತು ಕಚೇರಿ ಸಿಬ್ಬಂದಿಗಳ ಪ್ರೀತಿಗೆ ಪಾತ್ರರಾಗಿದ್ದರು. ಇಲ್ಲಿಂದ ಬಡ್ತಿ ಮೇಲೆ ವರ್ಗಾವಣೆಯಾಗಿದ್ದ ಮುಂದಿನ ಅವರ ಸೇವೆಗೆ ಶುಭವಾಗಲಿ ಎಂದು ಹಾರೈಸಿದರು.

ಪತ್ರ ಬರಹಗಾರರ ಸಂಘದ ಅಧ್ಯಕ್ಷ ಶ್ರೀಧರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಂಜುನಾಥ್ ಅವರು ಪತ್ರ ಬರಹಗಾರರ ಸಂಘದೊoದಿಗೆ ಉತ್ತಮ ಒಡನಾಟ ಹೊಂದಿದ್ದರು. ಪತ್ರ ಬರಹಗಾರರ ಕೆಲಸದಲ್ಲಿ ಸಣ್ಣ ಪುಟ್ಟ ಲೋಪದೋಷಗಳನ್ನು ತಿದ್ದುವ ಮೂಲಕ ಅವರು ಉತ್ತಮ ಮಾರ್ಗದರ್ಶಕರಾಗಿದ್ದರು. ಚಿಕ್ಕಮಗಳೂರಿನಲ್ಲಿ ಅವರು ಸಲ್ಲಿಸಿದ ಸೇವೆ ನಾವೆಂದಿಗೂ ಮರೆಯುವಂತಿಲ್ಲ.ಮುಂದಿನ ದಿನಗಳಲ್ಲಿ ಅವರ ಸೇವೆ ಬೇರೆ ಅಧಿಕಾರಿಗಳಿಗೆ ಮಾದರಿಯಾಗಲಿ ಎಂದು ತಿಳಿಸಿದರು.

ಪತ್ರ ಬರಹಗಾರರಾದ ಶಿವಶಂಕರ್, ಜಯಂತಿ, ಹಾಗೂ ಸಬ್ ರಿಜಿಸ್ಟರ್ ಕಚೇರಿಯ ಅಧಿಕಾರಿ ಪುಷ್ಪಲತ ಮಾತನಾಡಿ, ಮಂಜುನಾಥ್ ಅವರ ಸೇವೆಯನ್ನು ಶ್ಲಾಘಿಸಿದರು.

ಪತ್ರ ಬರಹಗಾರರ ಸಂಘದಿoದ ನೀಡಿದ ಸನ್ಮಾನ ಸ್ವೀಕರಿಸಿದ ಮಂಜುನಾಥ್, ಚಿಕ್ಕಮಗಳೂರಿನಲ್ಲಿ ನನ್ನ ಸೇವೆ ತೃಪ್ತಿ ನೀಡಿದೆ. ಇಲ್ಲಿನ ಕಚೇರಿ ಸಿಬ್ಬಂದಿ ಮತ್ತು ಪತ್ರ ಬರಹಗಾರರ ಸಹಕಾರ ಎಂದು ಮರೆಯುವಂತಿಲ್ಲ. ಚಿಕ್ಕಮಗಳೂರಿನಲ್ಲಿ ಸಲ್ಲಿಸಿದ ಸೇವೆ ನನಗೆ ವಿಶೇಷ ಅನುಭವ ನೀಡಿದ್ದು ಇದನ್ನು ತನ್ನ ವೃತ್ತಿ ಜೀವನದಲ್ಲಿ ಎಂದಿಗೂ ಮರೆಯುವಂತಿಲ್ಲ, ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನೆಂದು ಋಣಿಯಾಗಿರುತ್ತೇನೆಎಂದರು.

ಜಿ ರಮೇಶ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.

Leave a Reply

Your email address will not be published. Required fields are marked *

× How can I help you?