ಬೇಲೂರು-ಕಾಂಗ್ರೆಸ್ ಮುಖಂಡ ಕುಡುಮನಹಳ್ಳಿ ಮಂಜುನಾಥ್ ಹೃದಯಾಘಾತದಿಂದ ನಿಧನ-ಕಂಬನಿ ಮಿಡಿದ ಗಣ್ಯರು

ಬೇಲೂರು-ತಾಲೂಕಿನ ಕುಡುಮನಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡರಾದ ಮಂಜುನಾಥ್ ರವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಅವರಿಗೆ 52 ವರ್ಷ ವಯಸ್ಸಾಗಿತ್ತು.

ಇಂದು ಬೆಳಗ್ಗೆ 6 .30 ರ ಸುಮಾರಿಗೆ ಹೃದಯಾಘಾತಕ್ಕೆ ಒಳಗಾಗಿ ಮನೆಯಲ್ಲಿಯೇ ಕುಸಿದು ಬಿದ್ದ ಮಂಜುನಾಥ್ ರನ್ನು ಕುಟುಂಬಸ್ಥರು ಬೇಲೂರು ಸರಕಾರಿ ಆಸ್ಪತ್ರೆಗೆ ಕೊಂಡೊಯ್ದರಾದರು ಅಷ್ಟರ ಒಳಗೆ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಕಳ್ಳೇರಿ ಗ್ರಾಮಪಂಚಾಯತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದ ಶ್ರೀಯುತರು ಸಮಾಜ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು.

ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಗ್ರಾಮದ ರುದ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಿತು.

ಬೇಲೂರು ಹಳೇಬೀಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಯ್ಯದ್ ತೌಫಿಕ್,ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷರಾದ ಎಂ ಆರ್ ವೆಂಕಟೇಶ್,ತಾಲೂಕು ಕಾಂಗ್ರೆಸ್ ಅಧ್ಯಕ್ಷರಾದ ನಿಶಾಂತ್,ಮುಖಂಡರಾದ ಜಮಾಲುದ್ದೀನ್,ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀನಿವಾಸ್,ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಅಶೋಕ್,ಸಚಿನ್ ತಲಗೋಡು,ಮುಖಂಡರುಗಳಾದ ಕಗ್ಗೇಗೌಡ,ಕೃಷ್ಣೇಗೌಡ,ಜಿಲ್ಲಾ ಕಿಸಾನ್ ಘಟಕದ ಉಪಾಧ್ಯಕ್ಪ ಮಲ್ಲೇಶ್, ಮೃತರ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಮಾಜಿ ಸಚಿವರಾದ ಬಿ ಶಿವರಾಂ ರವರು ಕುಡುಮನಹಳ್ಳಿಯ ಮಂಜುನಾಥ್ ರವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದ್ದು ಅವರ ಕುಟುಂಬಕ್ಕೆ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಹಲವಾರು ಗಣ್ಯರು ಮಂಜುನಾಥ್ ರವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Leave a Reply

Your email address will not be published. Required fields are marked *

× How can I help you?