ಕೆ.ಆರ್.ಪೇಟೆ-ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ-ಪದ್ಮೇಶ್ ತಂಡದ ಎಲ್. ಎಸ್. ಧರ್ಮಪ್ಪ, ಸಿ.ಎಸ್.ಅಶೋಕ್, ಹಳೆಯೂರು ಯೋಗೇಶ್ ರವರಿಂದ ನಾಮಪತ್ರ ಸಲ್ಲಿಕೆ

ಕೆ.ಆರ್.ಪೇಟೆ-ತಾಲ್ಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ,ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗದಿಂದ ನಾಲ್ಕು ನಿರ್ದೇಶಕರ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಪದ್ಮೇಶ್ ತಂಡದ ಎಲ್.ಎಸ್.ಧರ್ಮಪ್ಪ, ಸಿ.ಎಸ್.ಅಶೋಕ್, ಹಳೆಯೂರು ಯೋಗೇಶ್ ಹಾಗೂ ಪದ್ಮೇಶ್ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ತಾಲ್ಲೂಕು ಕಚೇರಿಗೆ ತೆರಳಿ ಗ್ರೇಡ್-2 ತಹಸೀಲ್ದಾರ್ ಲೋಕೇಶ್ ಅವರಿಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.

ಬಳಿಕ ಮಾತನಾಡಿದ ಪದ್ಮೇಶ್ ಅವರು ತಾಲ್ಲೂಕಿನಲ್ಲಿ ಈಗಾಗಲೇ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ, ಶಿಕ್ಷಣ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ನಮ್ಮ ತಂಡವು ಭರ್ಜರಿ ಗೆಲುವು ಸಾಧಿಸುವ ಮೂಲಕ ಅಧಿಕಾರ ನಡೆಸುತ್ತಿದೆ. ಇದೇ ರೀತಿ ಈಗ ನಡೆಯುತ್ತಿರುವ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಶಿಕ್ಷಕರ ವಿಭಾಗದಿಂದ ನಮ್ಮ ತಂಡದಿಂದ ಎಲ್.ಎಸ್.ಧರ್ಮಪ್ಪ, ಸಿ.ಎಸ್.ಅಶೋಕ್, ಹಳೆಯೂರು ಯೋಗೇಶ್ ಹಾಗೂ ರಾಜೇನಹಳ್ಳಿ ಪದ್ಮೇಶ್ ಅವರು ಸ್ಪರ್ಧೆ ಮಾಡಿದ್ದೇವೆ.

ಈ ದಿನ ನಮ್ಮ ಅಪಾರ ಬೆಂಬಲಿಗರೊಂದಿಗೆ ನಾಮಪತ್ರವನ್ನು ಸಲ್ಲಿಸಿದ್ದೇವೆ. ಇದು ನಮ್ಮ ಗೆಲುವಿನ ಮುನ್ಸೂಚನೆ ನೀಡಿದ್ದು ನಮ್ಮ ತಂಡ ಎಲ್ಲಾ ನಾಲ್ಕೂ ಮಂದಿ ಗೆಲುವು ಸಾಧಿಸುವುದು ಖಚಿತವಾಗಿದೆ. ಅದರೂ ಮೈಮರೆಯದೇ ಎಲ್ಲಾ ಮತದಾರರ ನೌಕರರನ್ನು ಬೇಟಿ ಮಾಡಿ ಮತಯಾಚನೆ ಮಾಡಲಿದ್ದೇವೆ.

ಹೆಚ್ಚಿನ ಮತಗಳ ಅಂತರದ ಮೂಲಕ ತಾಲ್ಲೂಕು ಸರ್ಕಾರಿ‌ ನೌಕರರ ಸಂಘದ ಅಧಿಕಾರದ ಚುಕ್ಕಾಣಿ ಹಿಡಿಯಲು ಎಲ್ಲಾ ಇಲಾಖೆಯ ನೌಕರರು ನಮ್ಮ ತಂಡದ ಎಲ್ಲಾ ಅಭ್ಯರ್ಥಿಗಳನ್ನು ಬೆಂಬಲಿಸಿ ಗೆಲ್ಲಿಸಿಕೊಡಬೇಕೆಂದು ಮನವಿ‌ ಮಾಡಿದರು.

ನಾವು‌ ಯಾರ ಬಗ್ಗೆಯೂ ಟೀಕೆ ಟಿಪ್ಪಣಿ‌ ಮಾಡಲು ಬಯಸುವುದಿಲ್ಲ. ತಾಲ್ಲೂಕಿನ ನೌಕರ ಬಂಧುಗಳಿಗೆ ಎಲ್ಲವೂ ಗೊತ್ತಿದೆ. ಯಾರನ್ನು ಅಧಿಕಾರಕ್ಕೆ ತರಬೇಕು ಎಂಬುದು ನೌಕರ ಬಂಧುಗಳಿಗೆ ತಿಳಿದಿದೆ.ಎಲ್ಲಾ ನೌಕರರಲ್ಲಿ ‌ಮನವಿ‌ ಮಾಡುವುದೇನೆಂದರೆ ನೌಕರರ ಕಷ್ಟ ಸುಖಗಳಿಗೆ ನಮ್ಮ ತಂಡ ಕ್ರೀಯಾಶೀಲವಾಗಿ ಸ್ಪಂಧಿಸುತ್ತಾ ಬಂದಿದೆ. ಇದನ್ನು ತಮ್ಮ ಮನದಲ್ಲಿಟ್ಟುಕೊಂಡು ಪ್ರಾಥಮಿಕ ಶಾಲಾ ವಿಭಾಗ ಸೇರಿದಂತೆ ಎಲ್ಲಾ ಇಲಾಖೆಯಿಂದ ನಮ್ಮ ತಂಡದಿಂದ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಬೇಕೆಂದು ಪದ್ಮೇಶ್ ಕೈ‌ಮುಗಿದು‌ ಮನವಿ‌‌ ಮಾಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್.ಆರ್.ಪೂರ್ಣಚಂದ್ರ ತೇಜಸ್ವಿ, ತಾಲ್ಲೂಕು ಶಿಕ್ಷಣ ಇಲಾಖಾ ನೌಕರರ ಸಂಘದ ಅಧ್ಯಕ್ಷ ಆರ್.ಕೆ.ರಮೇಶ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣಗೌಡ, ಸಂಘಟನಾ ಕಾರ್ಯದರ್ಶಿ ಜಿ.ಎಸ್.ಮಂಜು, ಶಿಕ್ಷಣ ಇಲಾಖಾ‌ ನೌಕರರ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಎ.ಹೆಚ್.ಯೋಗೇಶ್, ಎ.ಕೆ.ದೇವರಾಜು, ಕೋದಂಡರಾಮು, ಕೆ.ಆರ್.ಚಿಕ್ಕಸ್ವಾಮಿ,ಎಸ್.ಎಸ್.ಶಿವಕುಮಾರ್, ಎಸ್.ಕೆ.ಹೇಮಣ್ಣ, ಎಂ.ಪಿ.ಕಿರಣ್ ಕುಮಾರ್, ರಾಮಕೃಷ್ಣೇಗೌಡ, ಮಹೇಶ್ ಕುಮಾರ್, ಕುಮಾರಸ್ವಾಮಿ, ಸಂದ್ಯಾರಾಣಿ, ರೇವಮ್ಮ, ಕುಮಾರಿ, ದೈಹಿಕ ಶಿಕ್ಷಕರ ಸಂಘದ ಲೋಕೇಶ್, ನಾಗರಾಜು ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

—————————-ಶ್ರೀನಿವಾಸ್ ಕೆ.ಆರ್ ಪೇಟೆ

Leave a Reply

Your email address will not be published. Required fields are marked *

× How can I help you?