ಕೆ ಆರ್ ಪೇಟೆ:ಇದೇ ತಿಂಗಳ 28 ರಂದು ಸರ್ಕಾರಿ ನೌಕರರ ತಾಲ್ಲೂಕು ಘಟಕಕ್ಕೆ ನಡೆಯುವ ಚುನಾವಣೆಗೆ ಪ್ರಾಥಮಿಕ ಶಾಲಾ ವತಿಯಿಂದ ನಾನು ಹಾಗು ನನ್ನ ಬಣದ ಸ್ಪರ್ಧಿಗಳಾದ ಆನಂದಕುಮಾರ್,ಗಿರೀಶ್ ಹಾಗೂ ಶಿವಲಿಂಗೇಗೌಡ ಅವರು ಶುಕ್ರವಾರ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಲಿದ್ದೇವೆ ಎಂದು ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ ಕೆ ಶಿವರಾಮೇಗೌಡ ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿಯ ಬೊಮ್ಮೇನಹಳ್ಳಿ ಸಮೀಪವಿರುವ ಶ್ರೀ ಮುತ್ತುರಾಯಸ್ವಾಮಿ ದೇವಾಲಯದಲ್ಲಿ ಅವರ ಬೆಂಬಲಿಗರ ಜೊತೆಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಮಾತನಾಡಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಅನೇಕ ಸಾಧನೆಗಳನ್ನು ಮಾಡಿದ್ದೇನೆ.ಅವು ನಿಮ್ಮ ಕಣ್ಣು ಮುಂದೆ ಇವೆ.ಇನ್ನೂ ಅನೇಕ ಕೆಲಸಗಳು ಬಾಕಿ ಇವೆ.ನನ್ನ ಕನಸುಗಳು ನೂರಾರು ಇವೆ.ಆದ್ದರಿಂದ ನಮ್ಮ ತಂಡಕ್ಕೆ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟರೆ ಬಾಕಿ ಉಳಿದಿರುವ ಕೆಲಸಗಳನ್ನು ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ದೊರಕಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.
ಆನಂದಕುಮಾರ್, ಗಿರೀಶ್, ಶಿವಲಿಂಗೇಗೌಡ ಸೇರಿದಂತೆ ನೂರಾರು ಬೆಂಬಲಿಗರೊಂದಿಗೆ ಇದೇ ಶುಕ್ರವಾರ ತಾಲ್ಲೂಕು ಕಚೇರಿಯಲ್ಲಿ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರವನ್ನು ಸಲ್ಲಿಸುತ್ತಿದ್ದೇವೆ ಅಂದು ನಮಗೆ ಶಕ್ತಿ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿ ಸಿ ಎಸ್ ಕುಮಾರ್,ಪಿ ಜೆ ಕುಮಾರ್, ರವಿಕುಮಾರ್, ಮಹೇಶ್, ದೇವರಾಜು,ಮಹೇಶ್,ಟಿ ಬಿ ರವಿಕುಮಾರ್, ತಮ್ಮಯ್ಯ,ನಾಗೇಂದ್ರ, ರವಿ ಜಿ ಎನ್,ರಾಮಚಂದ್ರು,ರವಿಕುಮಾರ್,ಜಯಕುಮಾರ್,ಲೋಕೇಶ್ ಪ್ರಭುಸ್ವಾಮಿ,ಶಿವಸ್ವಾಮಿ,
ಚಲುವರಾಜು,ಗೋವಿಂದರಾಜು,ಮೋಹನಕುಮಾರಿ,ಸಹನ,ಅನುಸೂಯ,ಅನಿತಾ ಸೇರಿದಂತೆ ಇತರರು ಸೇರಿದಂತೆ ಉಪಸ್ಥಿತರಿದ್ದರು.
————-–ಮನು ಮಾಕವಳ್ಳಿ ಕೆ ಆರ್ ಪೇಟೆ