ಚಿಕ್ಕಮಗಳೂರು-ಹುಬ್ಬಳ್ಳಿ ಗಲಭೆ-ಮೊಕದ್ದಮೆಗಳ ಹಿಂಪಡೆದ ರಾಜ್ಯ ಸರಕಾರ-ಪೋಲೀಸರ ನೈತಿಕ ಸ್ಥೈರ್ಯ ಕುಂದಿಸುತ್ತಿದೆ-ಹಿರೇಮ ಗಳೂರು ಪುಟ್ಟಸ್ವಾಮಿ ವಾಗ್ದಾಳಿ

ಚಿಕ್ಕಮಗಳೂರು:2022 ರ ಹುಬ್ಬಳ್ಳಿ ಗಲಭೆಯ ಪ್ರಕರಣದ ಮೊಕದ್ದಮೆಗಳನ್ನು ಹಿಂತೆಗೆ ದುಕೊಳ್ಳುವ ನಿರ್ಧಾರದ ಮೂಲಕ ರಾಜ್ಯ ಸರಕಾರ ಪೋಲೀಸರ ನೈತಿಕ ಸ್ಥೈರ್ಯವನ್ನು ಕುಂದಿಸುವ ಕೆಲಸವನ್ನು ಮಾಡಿದೆ.ಇದನ್ನು ಜಿಲ್ಲಾ ಬಿ.ಜೆ.ಪಿ ತೀವ್ರವಾಗಿ ಖಂಡಿಸುತ್ತದೆಯೆಂದು ಜಿಲ್ಲಾ ಬಿ.ಜೆ.ಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು,ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮುಸಲ್ಮಾನರ ಓಲೈಕೆ ಮಾಡುವ ರಾಜಕಾರಣ ಮಾಡುತ್ತಿದೆ.ಹುಬ್ಬಳ್ಳಿಯಲ್ಲಿ ಪೋಲೀಸ್ ಠಾಣೆ ಮೇಲೆ ಕಲ್ಲು ತೂರಿ ಬೆಂಕಿ ಹಚ್ಚಿ ಸುಡುವ ಯತ್ನದೊಂದಿಗೆ ಗಲಭೆ ಸೃಷ್ಠಿಸಿದ್ದು, ದೇಶ ದ್ರೋಹಿಗಳ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸದರಿ ಪ್ರಕರಣದಲ್ಲಿ ದಾಖಲಾಗಿದ್ದ ಎಲ್ಲಾ ಮೊಕದಮ್ಮೆಗಳನ್ನು ಹಿಂಪಡೆಯುವ ಮೂಲಕ ದೇಶದ್ರೋಹಿಗಳ ಪರ ಕಾಂಗ್ರೆಸ್ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಹುಬ್ಬಳ್ಳಿ ಪ್ರಕರಣದಲ್ಲಿ ಪೋಲೀಸರು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದು ಇಂದು ರಾಜ್ಯ ಸರ್ಕಾರ ತೆಗೆದುಕೊಂಡಿರುವ ತೀರ್ಮಾನವು ಪೋಲೀಸರ ಕಾರ್ಯ ದಕ್ಷತೆ ಹಾಗೂ ಮಾನಸಿಕ ಸ್ಥಿತಿಯನ್ನು ಕುಂದಿಸುವುದಾಗಿದೆ ಎಂದು ಹೇಳಿದ್ದಾರೆ.

ರಾಜ್ಯದ ಶಕ್ತಿ ಕೆಂದ್ರ ವಿಧಾನ ಸೌಧದಲ್ಲಿ ಪಾಕಿಸ್ಥಾನ್ ಜಿಂದಾಬಾದ್,ಘೋಷಣೆ, ರಾಮೇಶ್ವರ ಕೆಫೆ ಮೇಲೆ ದಾಳಿ ರಾಜ್ಯದ ವಿವಿಧ ಕಡೆಗಳಲ್ಲಿ ಗಣೇಶೋತ್ಸವ ಮೆರವಣಿಗೆಯ ಮೇಲೆ ಕಲ್ಲು ತೂರಿ ಶಾಂತಿ ಕದಡುವ ಪ್ರಕರಣ ಸೇರಿದಂತೆ ಹಲವು, ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ನಿರ್ದಾಕ್ಷಿಣ್ಯ ಕಾನೂನು ಕ್ರಮದ ಬದಲಿಗೆ ಮೃಧು ದೋರಣೆ ಅನುಸರಿಸುತ್ತಿರುವುದು ಗಮನಿಸಿದಾಗ ಕಾಂಗ್ರೆಸ್ ದೇಶದ್ರೋಹಿಗಳ ಪರ ನಿಲ್ಲುತ್ತಿದೆ ಎಂಬ ಸoಶಯಗಳು ರಾಜ್ಯದ ಜನರನ್ನು ಬೀತಿಗೊಳ್ಳುವಂತೆ ಮಾಡಿದೆ.

ಹುಬ್ಬಳ್ಳಿ ಪ್ರಕರಣದ ಮೊಕದಮ್ಮೆಯ ಹಿಂಪಡೆದ ಬೆನ್ನ ಹಿಂದೆಯೇ ಬೆoಗಳೂರಿನ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಪ್ರಕರಣದ ಎಲ್ಲಾ ಮೊಕದಮ್ಮೆ ಹಿಂಪಡೆಯಲು ರಾಜ್ಯ ಸರ್ಕಾರ ಸಿದ್ದತೆ ಮಾಡಿಕೊಂಡಿದೆ,ಎಂಬ ಮಾಹಿತಿಗಳು ಎಲ್ಲಾ ಕಡೆಗಳಲ್ಲಿ ಕೇಳಿ ಬರುತ್ತಿದ್ದು ಒಂದು ಕೋಮಿಗೆ ಸೇರಿದ ವ್ಯಕ್ತಿಗಳು ಭಾಗವಹಿಸಿದ್ದ ಪ್ರಕರಣಗಳನ್ನು ಹಿಂಪಡೆಯಲು ಯತ್ನಿಸಿರುವ ರಾಜ್ಯ ಸರ್ಕಾರದ ಕ್ರಮ ವಿವೇಚನಾ ರಹಿತವಾಗಿದ್ದು.ಅಪರಾಧಿಗಳಿಗೆ ನಾವು ಇಂತಹದ್ದೇ ದುಷ್ಕ್ರತ್ಯ ಮಾಡಿಯೂ ಕಾನೂನಿನಿಂದ ತಪ್ಪಿಸಿಕೊಳ್ಳಬಹುದು ಎಂಬ ಸಂದೇಶ ರವಾನೆ ಯಾಗಿದೆ.ಹೀಗಾದರೆ ಕಾನೂನು ಸುವ್ಯವಸ್ಥೆಯ ಸ್ಥಿತಿ ಏನಾಗಲಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರ ದೇಶದ್ರೋಹಿ ಚಟುವಟಿಕೆ ನಡೆಸಿದವರ ಪ್ರಕರಣ ವಾಪಾಸ್ ಪಡೆಯಲು ಮುಂದಾಗಿರುವುದು ಮುಸಲ್ಮಾನರ ಓಲೈಕೆ ಮಾಡುವ ರಾಜಕಾರಣ ಮಾಡುತ್ತಿರುವುದು, ಸ್ಪಷ್ಟವಾಗಿ ಗೋಚರಿಸುತ್ತಿದ್ದು ಜಿಲ್ಲಾ ಬಿಜೆಪಿ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸುವುದರ ಜೊತೆಗೆ ವಿರೋಧಿಸುತ್ತದೆ ಎಂದಿರುವ ಅವರು ವಾಪಾಸ್ ಪಡೆದಿರುವ ಹುಬ್ಬಳ್ಳಿ ಪ್ರಕರಣಗಳ ಮೊಕದಮ್ಮೆಗಳನ್ನು ಮರು ಸ್ಥಾಪಿಸುವಂತೆ ಜಿಲ್ಲಾ ಬಿಜೆಪಿ ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.

———————–ಪ್ರಕಾಶ್ ಕೆ ಕೋಟಿಗನಹಳ್ಳಿ

Leave a Reply

Your email address will not be published. Required fields are marked *

× How can I help you?