ಮೈಸೂರಿನ ವಿಂಟೇಜ್‌ ಹಾರ್ವೆಸ್ಟ್‌ ಸಂಸ್ಥೆಯ ವತಿಯಿಂದ ಇಳಯರಾಜ ಅವರಿಗೆ ಮೈಸೂರು ಇನ್ಲೇ ಕಲೆಯ ಭಾವಚಿತ್ರ ಕೊಡುಗೆ

ಮೈಸೂರು:ಇತ್ತೀಚೆಗಷ್ಟೇ ಯುವದಸರಾದಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಆಗಮಿಸಿದ್ದ ಸಂಗೀತ ಮಾಂತ್ರಿಕ ಇಳಯರಾಜ ಅವರಿಗೆ ಮೈಸೂರಿನ ವಿಂಟೇಜ್‌ ಹಾರ್ವೆಸ್ಟ್‌ ಸಂಸ್ಥೆಯ ಕಲಾವಿದರ ತಂಡವು 5 ಅಡಿ ಉದ್ದದ ಮೈಸೂರು ಇನ್ಲೇ ಕಲೆಯಲ್ಲಿ ಮೂಡಿಬಂದ ಅವರ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿತು.

ಮೈಸೂರು ಜಿಲ್ಲೆಯಲ್ಲಿ ಮೈಸೂರು ಶೈಲಿಯ ಚಿತ್ರಕಲೆ, ರೇಷ್ಮೆ, ಮಲ್ಲಿಗೆಯು ಪ್ರಸಿದ್ಧಿ ಪಡೆದಿರುವಂತೆ ಮೈಸೂರಿನ ಇನ್ಲೇ ಆರ್ಟ್‌ ಸಹ ಅದರದ್ದೇ ಆದ ಜನಪ್ರಿಯತೆ, ಇತಿಹಾಸ ಹೊಂದಿದೆ. ಅಲ್ಲದೆ ಮೈಸೂರು ಇನ್ಲೇ ಆರ್ಟ್‌ಗೆ ಜಿ ಐ ಟ್ಯಾಗ್‌ ಸಹ ಲಭ್ಯವಾಗಿದೆ. ಈ ಶೈಲಿ ಬಳಸಿಕೊಂಡು ಮೈಸೂರಿನ ವಿಂಟೇಜ್‌ ಹಾರ್ವೆಸ್ಟ್‌ ತಂಡ ಈ ವಿಶಿಷ್ಟ ಚಿತ್ರಕಲೆಯನ್ನು ತಯಾರಿಸಿದ್ದು, ಇಳಯರಾಜ ಅವರು ಕಲಾವಿದರ ಕೈಯಲ್ಲಿ ಮೂಡಿಬಂದ ತಮ್ಮ ಭಾವಚಿತ್ರವನ್ನು ನೋಡಿ ಪುಳಕಿತರಾದರು.

ಮೈಸೂರಿನ ಪ್ರತಿಷ್ಠಿತ ಕಾವಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಶ್ರವಣ ಕುಮಾರ್‌ ಅವರು ಈ ಕಲೆಯ ರೂವಾರಿ. ಇವರೊಂದಿಗೆ ಕುಮುದಾ, ನಿರ್ಮಲಾ, ಮಿರ್‌ ರಹ್ಮತ್‌ ಆಲಿ, ಅನ್ಸಾರ್‌ ಆಲಿ, ಧನಲಕ್ಷ್ಮೀ, ಆನಂದ್‌, ಆಂಥೋನಿ, ಕುಮಾರ್, ಸಿದ್ದಪ್ಪಾಜಿ ಹಾಗೂ ಜಗದೀಶ್‌ ಸೇರಿ ಈ ಸುಂದರ ಚಿತ್ರಕಲೆಯನ್ನು ತಯಾರಿಸಿದ್ದಾರೆ.

ಭಾವಚಿತ್ರವನ್ನು ಉಡುಗೊರೆಯಾಗಿ ನೀಡುವ ವೇಳೆ ವಿಂಟೇಜ್‌ ಹಾರ್ವೆಸ್ಟ್‌ ಸಂಸ್ಥೆಯ ಸದಸ್ಯರು ಮತ್ತಿತರರು ಹಾಜರಿದ್ದರು.

———————-ಮಧುಕುಮಾರ್

Leave a Reply

Your email address will not be published. Required fields are marked *

× How can I help you?