ಕೆ.ಆರ್.ಪೇಟೆ-ತಾಲೂಕು ಸರ್ಕಾರಿ ನೌಕರರ ಸಂಘದ ಚುನಾವಣೆ-ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆಯ ಎರಡು ನಿರ್ದೇಶಕರ ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ

ಕೆ.ಆರ್.ಪೇಟೆ-ತಾಲ್ಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆಯ(ಆರ್.ಡಿ.ಪಿ.ಆರ್) ಎರಡು ನಿರ್ದೇಶಕರ ಸ್ಥಾನಗಳಿಗೆ ಗ್ರಾಮ ಪಂಚಾಯತ್ ಪಿಡಿಓ-ಕಾರ್ಯದರ್ಶಿಗಳ ವಿಭಾಗದಿಂದ ಆನೆಗೊಳ ಪಿಡಿಓ ವಿ.ಎಂ.ರವಿಕುಮಾರ್, ತಾ.ಪಂ.ಅಧಿಕಾರಿಗಳ ವಿಭಾಗದಿಂದ ಯೋಜನಾಧಿಕಾರಿ ಮೋದೂರು ಶ್ರೀನಿವಾಸ್, ಹಾಗೂ ಜಿ.ಪಂ.ತಾಂತ್ರಿಕ ವಿಭಾಗದ 1ಸ್ಥಾನಕ್ಕೆ ರವಿಪ್ರಸನ್ನ ಅವರು ತಮ್ಮ ಅಪಾರ ಬೆಂಬಲಿಗರು ಹಾಗೂ ಗ್ರಾಮ ಪಂಚಾಯತ್ ಪಿಡಿಓ, ಕಾರ್ಯದರ್ಶಿಗಳು, ಲೆಕ್ಕ ಸಹಾಯಕ ನೌಕರರು ಹಾಗೂ ತಾಲ್ಲೂಕು ಪಂಚಾಯತ್ ನೌಕರರೊಂದಿಗೆ ತಾಲ್ಲೂಕು ಕಚೇರಿಗೆ ತೆರಳಿ ಚುನಾವಣಾಧಿಕಾರಿಗಳಾದ ಗ್ರೇಡ್-2 ತಹಸೀಲ್ದಾರ್ ಬಿ.ಆರ್.ಲೋಕೇಶ್ ಅವರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ತಾಲ್ಲೂಕು ಪಂಚಾಯತ್ ಯೋಜನಾಧಿಕಾರಿ (ಪ್ಲಾನಿಂಗ್ ಆಫೀಸರ್) ಮೋದೂರು ಶ್ರೀನಿವಾಸ್,ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆಯ ವತಿಯಿಂದ ಮೂರು ಸ್ಥಾನಗಳಿಗೆ ಮೂರು ಮಂದಿ ಮಾತ್ರ ನಾಮಪತ್ರ ಸಲ್ಲಿಸಿದ್ದೇವೆ.ಬೇರೆ ಯಾರೂ ಸಹ ನಾಮಪತ್ರ ಸಲ್ಲಿಸದೇ ಇರುವ ಕಾರಣ ಬಹುತೇಕ ಅವಿರೋಧ ಆಯ್ಕೆಯಾಗುವುದು ಖಚಿತವಾಗಿದೆ.

ಅದೇ ರೀತಿ ಈಗಾಗಲೇ ವಿವಿಧ ಇಲಾಖೆಗಳಿಗೆ ಮೀಸಲಾಗಿರುವ 12ನಿರ್ದೇಶಕರ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಪ್ರಸ್ತುತ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಾನೂ ಸಹ ಪ್ರಭಲ ಅಕಾಂಕ್ಷಿಯಾಗಿರುತ್ತೇನೆ.ಇದಕ್ಕೆ ಪ್ರಾಥಮಿಕ ಹಂತವಾಗಿ ನಮ್ಮ ಇಲಾಖೆಯ ಮೂರು ಮಂದಿ ನಿರ್ದೇಶಕರನ್ನು ಆಯ್ಕೆ ಮಾಡಿಕೊಂಡಿರುತ್ತೇವೆ ತಾಲ್ಲೂಕಿನ ಎಲ್ಲಾ ಇಲಾಖೆಗಳ ಅಭ್ಯರ್ಥಿಗಳು ತಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪ್ರತ್ಯೇಕ ಗುಂಪು ತಾಲ್ಲೂಕಿನಲ್ಲಿ ರಚನೆಯಾಗಿರುತ್ತದೆ.ಎಲ್ಲಾ ಇಲಾಖೆಗಳ ಪ್ರತಿನಿಧಿಗಳು ನಮ್ಮ ಗುಂಪಿಗೆ ಬೆಂಬಲ ನೀಡಿ ತಾಲ್ಲೂಕಿನ ಸರ್ಕಾರಿ ನೌಕರರ ಹಿತರಕ್ಷಣೆ ಮತ್ತು ಸೇವೆ ಮಾಡಲು ಅವಕಾಶ ಕಲ್ಪಿಸುವಂತೆ ತಾಲ್ಲೂಕಿನ ಸಮಸ್ತ ಸರ್ಕಾರಿ ನೌಕರ ಬಂಧುಗಳಲ್ಲಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಉದ್ಯೋಗಖಾತ್ರಿ ಸಹಾಯಕ ನಿರ್ದೇಶಕ ಉಮಾಶಂಕರ್, ತಾ.ಪಂ. ಸಹಾಯಕ ನಿರ್ದೇಶಕ ಡಾ.ನರಸಿಂಹರಾಜು, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್ ಪ್ರವೀಣ್, ರವಿ, ತಾಲ್ಲೂಕು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶೀಳನೆರೆ ನವೀನ್, ಮಾದಾಪುರ ಬಿ.ಪಿ.ಚಂದ್ರು, ರಂಗನಾಥಪುರ ಕ್ರಾಸ್ ವಿನೋದ್, ಮುರುಕನಹಳ್ಳಿ ಸಯ್ಯದ್ ಮುಜಾಕಿರ್, ಮಡುವಿನಕೋಡಿ ಶ್ರೀನಿವಾಸ್, ಬಂಡಿಹೊಳೆ ಶಿವಕುಮಾರ್, ವಿಠಲಾಪುರ ಹೆಚ್.ಎಸ್.ರವಿಕುಮಾರ್, ಅಕ್ಕಿಹೆಬ್ಬಾಳು ಜಯಕುಮಾರ್, ಹಿರೀಕಳಲೆ ನವೀನ್‌ಕುಮಾರ್, ತೆಂಡೇಕೆರೆ ಸತೀಶ್‌ಕುಮಾರ್, ಗಂಜಿಗೆರೆ ಗೀತಾ, ಸಿಂಧುಘಟ್ಟ ವಾಣಿ, ಮಾಕವಳ್ಳಿ ಶೈಲಜಾ, ಮಡುವಿನಕೋಡಿ ಅಭಿನಯ, ಅಗ್ರಹಾರಬಾಚಹಳ್ಳಿ ಹರ್ಷವರ್ಧನ್, ಆಲಂಬಾಡಿಕಾವಲು ಶಿವಕುಮಾರ್, ಅಘಲಯ ದಿನೇಶ್, ಭಾರತೀಪುರ ದಿನೇಶ್‌ಕುಮಾರ್, ಐಕನಹಳ್ಳಿ ವಿಜಯಕುಮಾರ್, ಲಕ್ಷ್ಮೀಪುರ ಸುರೇಶ್‌ಬಾಬು, ಕಿಕ್ಕೇರಿ ಚೆಲುವರಾಜು, ಮಂದಗೆರೆ ಸುವರ್ಣ, ಬಲ್ಲೇನಹಳ್ಳಿ ನೂತನ್, ಐಚನಹಳ್ಳಿ ಕಾರ್ತೀಕ್, ಬಳ್ಳೇಕೆರೆ ಪ್ರವೀಣ್‌ಕುಮಾರ್, ಸಂತೇಬಾಚಹಳ್ಳಿ ಯೋಗೇಶ್, ಹರಿಹರಪುರ ನಾಯಿದಾಅಕ್ತರ್, ಲಕ್ಷ್ಮೀ ಪುರ ಸುರೇಶ್‌, ಸೋಮನಹಳ್ಳಿ ಶಿವಸ್ವಾಮಿ, ಹರಳಹಳ್ಳಿ ಬಸವಶೆಟ್ಟಿ, ಹಿರೀಕಳಲೆ ನವೀನ್‌ಕುಮಾರ್, ಕಾರ್ಯದರ್ಶಿಗಳಾದ ಅಕ್ಕಿಹೆಬ್ಬಾಳು ರಾಮು, ಬೂಕನಕೆರೆ ಮಹೇಶ್, ಮಂದಗೆರೆ ಗಣೇಶ್, ಆಲಂಬಾಡಿಕಾವಲು ಇಮ್ರಾನ್‌ಷರೀಪ್, ರಂಗನಾಥಪುರ ಕ್ರಾಸ್ ತಮ್ಮಣ್ಣಾಚಾರ್, ಹೀರೀಕಳಲೆ ಪಿ.ಬಿ.ರವಿ, ಸೋಮನಹಳ್ಳಿ ರೇಣುಕಾ, ತೆಂಡೇಕೆರೆ ಕುಮಾರ್, ದಬ್ಬೇಘಟ್ಟ ಮಧು, ಗಂಜಿಗೆರೆ ದೇವರಾಜೇಗೌಡ, ವಿಠಲಾಪುರ ಸಲ್ಮಾಭಾನು, ಹರಿಹರಪುರ ಮಹದೇವಯ್ಯ, ಅಘಲಯ ನಾಗರತ್ನ, ಬಳ್ಳೇಕೆರೆ ಮಂಜುನಾಥ್, ಸಾರಂಗಿ ನಂದಿನಿ, ಶೀಳನೆರೆ ನಾಗರತ್ನ, ಶೀಳನೆರೆ ಬಾಬು, ಕಿಕ್ಕೇರಿ ಪಾಪೇಗೌಡ, ವಾಸು, ಆನೆಗೊಳ ನವೀನ್‌ಕುಮಾರ್, ಲಕ್ಷ್ಮೀ ಪುರ ಯೋಗೇಶ್, ಮಂದಗೆರೆ ಲೋಕೇಶ್, ಅಗ್ರಹಾರಬಾಚಹಳ್ಳಿ ಚಂದ್ರಕುಮಾರ್ ಸೇರಿದಂತೆ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು. ಲೆಕ್ಕ ಸಹಾಯಕರು ಉಪಸ್ಥಿತರಿದ್ದು ಅಭ್ಯರ್ಥಿಗಳಾದ ವಿ.ಎಂ.ರವಿಕುಮಾರ್, ಮೋದೂರು ಶ್ರೀನಿವಾಸ್ ಮತ್ತು ರವಿ ಪ್ರಸನ್ನ ಅವರುಗಳಿಗೆ ತಮ್ಮ ಬೆಂಬಲ ಘೋಷಣೆ ಮಾಡಿದರು.

——————-ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?