ಕೆ.ಆರ್.ಪೇಟೆ-ಡಾ,ಬಿ.ಆರ್ ಅಂಬೇಡ್ಕರ್ ಆದರ್ಶವನ್ನು ಅನುಸರಿ ಸುತ್ತಿರುವ ಅನುಯಾಯಿಗಳು ದೇಶದ ಹಿತವನ್ನು ಕಾಪಾಡಲು ದೀಕ್ಷೆ ಸ್ವೀಕರಿಸಬೇಕು-ಆಯುಷ್ಮಾನ್ ಗಂಗಾಧರ್

ಕೆ.ಆರ್.ಪೇಟೆ-1956ರ ಆ.14ರಂದು ಬೌದ್ಧ ಧರ್ಮವನ್ನು ಸ್ವೀಕಾರ ಮಾಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶವನ್ನು ಅನುಸರಿಸುತ್ತಿರುವ ಅನುಯಾಯಿಗಳು ದೇಶದ ಹಿತವನ್ನು ಕಾಪಾಡಲು ಮೊದಲು ದೀಕ್ಷೆ ಸ್ವೀಕರಿಸಬೇಕು.ನಂತರ ಜಾತಿರಹಿತ ಸಮಾಜದ ನಿರ್ಮಾಣಕ್ಕೆ ಕಂಕಣ ತೊಡಬೇಕು ಎಂದು ರಾಜ್ಯ ಬೌದ್ಧ ಧರ್ಮ ಯುವ ಘಟಕದ ಆಯುಷ್ಮಾನ್ ಗಂಗಾಧರ್ ತಿಳಿಸಿದರು.

ಕೆ.ಆರ್.ಪೇಟೆ ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿರುವ ಬುದ್ದ, ಬಸವ, ಅಂಬೇಡ್ಕರ್ ಯೋಗಶಾಲೆಯ ವತಿಯಿಂದ ಯೋಗಗುರು ಅಲ್ಲಮಪ್ರಭು ನೇತೃತ್ವದಲ್ಲಿ ಆಯೋಜಿಸಿದ್ದ ಬುದ್ದ ಧಮ್ಮ ಚಕ್ರ ಪರಿವರ್ತನಾ ದಿನ ಉದ್ಘಾಟಿಸಿ ಮಾತನಾಡಿದರು.

ಗೌತಮಬುದ್ಧ ಒಕ್ಕಲುತನ ಮನೆತನದ ರಾಜಕುಮಾರ, ಬೇಸಾಯಗಾರರೆಲ್ಲ ಬೌದ್ಧರಾಗಿದ್ದರು. ಬೌದ್ಧಧರ್ಮದಲ್ಲಿ ಭಾರತೀಯ ಸಂಸ್ಕೃತಿಯ ಆಳವಾದ ಚಿಂತನೆಗಳಿದ್ದವು. ಭಾರತೀಯ ಸಂಸ್ಕೃತಿಯ ಆರಾಧನೆಯನ್ನು ಬಾಬಾ ಸಾಹೇಬರು ಒಪ್ಪಿಕೊಂಡಿದ್ದರು. ಆದರೆ, ಹಿಂದೂ ಧರ್ಮದಲ್ಲಿನ ಮೇಲು-ಕೀಳು ಎಂಬ ಆಸಹ್ಯಕರ ವಾದ ವಾತಾವರಣದಿಂದ ಬೇಸತ್ತು ಶೋಷಿತರಿಗೆ ಧ್ವನಿಯು ಸಿಗಲಿ ಎಂಬ ಸದುದ್ದೇಶ ದಿಂದ ಬೌದ್ಧ ಧರ್ಮವನ್ನು ಸ್ವೀಕರಿಸಿದರು.

ಭಾರತೀಯ ಸಮಾಜ ಜಾತಿ ರಹಿತ ಸಮಾಜ ವಾಗಿರಬೇಕು. ದೇಶದಲ್ಲಿ ವಾಸಿಸುವ ಭಾರತೀಯರು ಒಗ್ಗಟ್ಟು ಪ್ರದರ್ಶಿಸಬೇಕು. ಯುವ ಜನತೆ ಸಮ ಸಮಾಜದ ನಿರ್ಮಾಣಕ್ಕೆ ಈಗಿನಿಂದಲೇ ಶ್ರಮಿಸಬೇಕೆಂದರು.

ನಾಗಾ ಜನರು ವಾಸಿಸುತ್ತಿದ್ದ ನಾಗ ನದಿಯ ತಟದಲ್ಲಿರುವ ನಾಗಪುರದಂತಹ ಪುಣ್ಯಭೂಮಿಯಲ್ಲಿ ಅಂಬೇಡ್ಕರ್ ಅವರು ಬೌದ್ಧ ಧಮ್ಮ ದೀಕ್ಷೆಯನ್ನು ಪಡೆದು ಅಮರರಾರದು. ಆದರೆ, ಬಾಬಾ ಸಾ ಹೇಬರ ಅನುಯಾಯಿಗಳು ಸಮಸಮಾಜದ ನಿರ್ಮಾಣಕ್ಕೆ ಕೈ ಜೋಡಿಸದೆ ಆಂತರಿಕ ಕಲಹದಿಂದ ಬಾಬಾ ಸಾಹೇಬರ ಅವರ ಆದರ್ಶಗಳನ್ನು ಹೊಸಕಿ ಹಾಕುತ್ತಿದ್ದಾರೆ. ಇದರ ಗಂಭೀರ ಚಿಂತನೆಯಾಗಬೇಕು. ಅವರ ಬಗ್ಗೆ ಬರೀ ಮಾತನಾಡಿದರೆ ಸಾಲದು. ಅವರ ಆದರ್ಶ ಮೈಗೂಡಿಸಿಕೊಳ್ಳುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಆಯುಷ್ಮಾನ್ ಗಂಗಾಧರ್ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್.ಪೂರ್ಣಚಂದ್ರ ತೇಜಸ್ವಿ, ತಾಲ್ಲೂಕು ಶಿಕ್ಷಣ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಆರ್.ಕೆ.ರಮೇಶ್, ತಾಲ್ಲೂಕು ಪ.ಜಾ-ಪ.ಪಂ. ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಹಳೆಯೂರು ಯೋಗೇಶ್, ತೆಂಡೇಕೆರೆ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಮುತ್ತುರಾಜ್, ಶಿಕ್ಷಕರಾದ ಪುಟ್ಟರಾಜು, ಜಿ.ಎಸ್.ಮಂಜು, ಜಯರಾಂ, ನಾಗಯ್ಯ, ಮಂಜುನಾಥ್, ಚನ್ನಾಪುರ ಸಿ.ಎಸ್.ಅಶೋಕ್, ಕಟ್ಟೆ ಮಹೇಶ್, ಭಾರತೀಪುರ ರವಿಕುಮಾರ್, ಲಕ್ಷ್ಮಣ್, ಸಮಾಜ ಕಲ್ಯಾಣ ಇಲಾಖೆಯ ಪ್ರಸನ್ನಕುಮಾರ್, ಪ್ರಬುದ್ಧ ಕರ್ನಾಟಕ ಸೇವಾ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಎಚ್.ಜೆ. ಕಾಂತರಾಜು, ಯೋಗ ಶಿಕ್ಷಕ ಅಲ್ಲಮಪ್ರಭು, ಶಿಕ್ಷಣ ಸಂಯೋಜಕ ವೀರಭದ್ರಯ್ಯ ಸೇರಿದಂತೆ ನೂರಾರು ಗಣ್ಯರು ಉಪಸ್ಥಿತರಿದ್ದರು.

——————ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?