ಕೆ.ಆರ್.ಪೇಟೆ-ಮಹರ್ಷಿ ವಾಲ್ಮೀಕಿ ಸೇರಿದಂತೆ ಬುದ್ದ,ಬಸವ, ಅಂಬೇಡ್ಕರ್,ಕನಕದಾಸ,ಕೆಂಪೇಗೌಡ,ಗಾಂಧಿಯವರನ್ನು ಜಾತಿ ಸಂಕೋಲೆಗೆ ಸಿಲುಕಿಸಬಾರದು-ಶಾಸಕ ಹೆಚ್.ಟಿ.ಮಂಜು

ಕೆ.ಆರ್.ಪೇಟೆ-ಮಹರ್ಷಿ ವಾಲ್ಮೀಕಿ ಸೇರಿದಂತೆ ಬುದ್ದ,ಬಸವ,ಅಂಬೇಡ್ಕರ್, ಕನಕದಾಸ, ಕೆಂಪೇಗೌಡ, ಗಾಂಧೀ ಅವರಂತಹ ಮಹನೀಯರನ್ನು ಜಾತಿ ಸಂಕೋಲೆಗೆ ಸಿಲುಕಿಸ ಬಾರದು.ಶ್ರೀ ಮಹರ್ಷಿ ವಾಲ್ಮೀಕಿ ಅವರ ತತ್ವ ಆದರ್ಶಗಳನ್ನು ನಾವು ಪಾಲಿಸಬೇಕು ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.

ತಾಲ್ಲೂಕು ಆಡಳಿತ,ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ನಾಯಕ ಸಂಘಟನೆಗಳ ಒಕ್ಕೂಟದ ವತಿಯಿಂದ ಪಟ್ಟಣದ ಶತಮಾನದ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಾಡಿನ ಜಾನಪದ ತಜ್ಞ ಹಾಗೂ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಪಿ.ಕೆ.ರಾಜಶೇಖರ್ ಪ್ರಧಾನ ಭಾಷಣ ಮಾಡಿ, ಆದಿ ಕವಿ ಮಹರ್ಷಿ ವಾಲ್ಮೀಕಿಯವರು ತಮ್ಮ ರಾಮಾಯಣ ಕೃತಿಯಲ್ಲಿ ಮಾನವೀಯತೆ, ಮಮತೆ, ಭ್ರಾತೃತ್ವ, ಕರುಣೆ, ತ್ಯಾಗ, ಧರ್ಮರಕ್ಷಣೆ, ರಾಜನೀತಿ ಸೇರಿದಂತೆ ಮಾನವನ ಉತ್ತಮ ಬದುಕಿಗೆ ಬೇಕಾದ ಶ್ರೇಷ್ಠ ಮೌಲ್ಯಗಳನ್ನು ಪ್ರತಿಬಾದಿಸುವ ಮೂಲಕ ಮನುಕುಲದ ಉದ್ದಾರಕ್ಕೆ ಮಾರ್ಗದರ್ಶನ ನೀಡಿದ್ದಾರೆ. ರಾಮಾಯಣವನ್ನು ಪ್ರತಿನಿತ್ಯ ಒಂದಿಲ್ಲೊoದು ರೀತಿಯಲ್ಲಿ ಎಲ್ಲರೂ ಪಾಲಿಸುತ್ತಿದ್ದೇವೆ.

ರಾಮಾಯಣ ರಚಿಸಿದ ಮಹಾ ಕವಿಯನ್ನು ಜಾತಿಯ ಸಂಕೋಲೆಗೆ ಸಿಲುಕಿಸಿ ಕೇವಲ ಒಂದು ಜಾತಿಗೆ ಸೀಮಿತಗೊಳಿಸಬಾರದು ಎಂದು ತಿಳಿಸಿದರು. ನಾವು ಮಹನೀಯರ ಆದರ್ಶಗಳನ್ನು ಪಾಲಿಸುವ ಕೆಲಸವಾಗಬೇಕು. ಗ್ರಾಮೀಣ ಭಾಗದ ಶಾಲಾ, ಕಾಲೇಜುಗಳಲ್ಲಿ ಮಹನೀಯರ ಜಯಂತಿಗಳನ್ನು ಆಚರಿಸುವ ಮೂಲಕ ಅವುಗಳನ್ನು ಪಾಲಿಸುವಂತೆ ಶಾಲಾ ಹಂತದಲ್ಲಿಯೇ ಕಲಿಸಬೇಕು ಎಂದು ಹೇಳಿದರು.

ಮಹಾಕವಿ ಮಹರ್ಷಿ ವಾಲ್ಮೀಕಿಯವರು ರಾಮನನ್ನ ಹಾಗೂ ಅವರ ಪಾತ್ರಗಳನ್ನು ಎಳೆ ಎಳೆಯಾಗಿ ಬಿಡಿಸಿಕೊಟ್ಟಿದ್ದಾರೆ.ರಾಮನ ಬಗ್ಗೆ ಪರಿಚಯಿಸಲು ವಾಲ್ಮೀಕಿ ಬರಬೇಕಾಯಿತು. ಹಾಗೆಯೇ ಕಲಿಯುಗದಲ್ಲಿ ಸಮಾನತೆ ತರಲು ಡಾ.ಬಿ.ಆರ್.ಅಂಬೇಡ್ಕರ್ ಅವರು ಬರಬೇಕಾಯಿತು ಎಂದು ಅಭಿಪ್ರಾಯ ಪಟ್ಟರು. ಇತಿಹಾಸದಲ್ಲಿ ಅನೇಕ ವಿಷಯಗಳನ್ನು ಕಲಿತಿದ್ದೇವೆ ಅದನ್ನು ಕಾನೂನಾತ್ಮಕವಾಗಿ ನಡೆಯಲು ಅಂಬೇಡ್ಕರ್ ಅವರು ದಾರಿ ತೋರಿಸಿದ್ದಾರೆ ಎಂದು ಪಿ.ಕೆ.ರಾಜಶೇಖರ್ ತಿಳಿಸಿದರು.

ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಕಾರ್ಯಕ್ರಮದ ನೇತೃತ್ವವನ್ನು ವಹಿಸಿ ವಾಲ್ಮೀಕಿ ಜಯಂತಿ ಕುರಿತು ಮಾತನಾಡಿದರು.

ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಎಸ್.ದಿವಾಕರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಸುಷ್ಮಾ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಚಂದ್ರಶೇಖರ್, ಪುರಸಭೆಯ ಮುಖ್ಯಾಧಿಕಾರಿ ರಾಜು, ಶಿಶು ಅಭಿವೃದ್ದಿ ಅಧಿಕಾರಿ ಅರುಣ್ ಕುಮಾರ್, ಜಿಲ್ಲಾ ನಾಯಕ ಸಂಘದ ಅಧ್ಯಕ್ಷ ಆರ್.ಜಗದೀಶ್ ಅಗ್ರಹಾರಬಾಚಹಳ್ಳಿ, ತಾಲ್ಲೂಕು ನಾಯಕ ಸಂಘಟನೆಗಳ ಪ್ರಮುಖರಾದ ನರಸನಾಯಕ್, ನರೇಂದ್ರನಾಯಕ್, ರಾಜನಾಯಕ್, ಬೊಮ್ಮೇನಹಳ್ಳಿ ಮಂಜುನಾಥ್, ವಿನೋದ್‌ಕುಮಾರ್, ಕೆ.ಎಸ್.ರಾಜು, ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಗೂ ನಾಯಕ ಸಮುದಾಯ ಮುಖಂಡರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

—————–ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?