ಚಿಕ್ಕಮಗಳೂರು-ಬಿಎಸ್ಎನ್ಎಲ್ ಹಾಗೂ ಬ್ಯಾಂಕ್ ಆಪರೇಟರ್ಗಳ ಹತ್ತಿರ ಜಿಲ್ಲಾ ಆಧಾರ್ ಸಂಯೋಜಕ ಹಣದ ಬೇಡಿಕೆಯಿಡುತ್ತಿದ್ದು ಕೂಡಲೇ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ನಗರ ಸಾಮಾಜಿಕ ಜಾಲತಾಣದ ಸಂಚಾಲಕ ಸಿ.ಎಸ್.ರಾಕೇಶ್ಕುಮಾರ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಗುರುವಾರ ಪತ್ರಿಕಾ ಹೇಳಿ ನೀಡಿ ಮಾತನಾಡಿ, ಸಂಯೋಜಕನ ವಿರುದ್ಧ ಜಿಲ್ಲಾಡಳಿತದ ಗಮನಕ್ಕೆ ಕಳೆದ ಎರಡ್ಮೂರು ವಾರಗಳ ಹಿಂದೆ ಮನವಿ ಕೂಡಾ ಸಲ್ಲಿಸಲಾಗಿತ್ತು. ಇದುವರೆಗೂ ಹಣ ಪಡೆದಿರುವ ಸಂಯೋಜಕರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ ಎಂದು ತಿಳಿಸಿದ್ದಾರೆ.
ಜಿಲ್ಲಾ ಆಧಾರ್ ಕಚೇರಿಯಲ್ಲಿ ಕಳೆದ ಐದು ವರ್ಷಗಳಿಂದ ಸಂಯೋಜಕರು ಕರ್ತವ್ಯ ನಿರ್ವಹಿಸುತ್ತಿ ದ್ದಾರೆ. ಆತನಿಗೆ ಆಧಾರ್ ಸಂಬoಧಿಸಿದ ವಿಚಾರದಲ್ಲಿ ಅನುಭವವಿಲ್ಲ. ಹುದ್ದೆಗೆ ಅರ್ಹತೆ ಹೊಂದಿರುವ ವಿದ್ಯಾರ್ಹತೆ ಇರುವುದಿಲ್ಲ ಎಂದು ಆರೋಪಿಸಿದ್ದಾರೆ.
ಆಧಾರ್ ಸಂಯೋಜಕರು ಆಧಾರ್ ತರಬೇತಿ ಮತ್ತು ಐಡಿಯನ್ನು ಸಕ್ರಿಯಗೊಳಿಸಲು ಹಣ ಪಡೆದಿರುತ್ತಾರೆ.ಯುಐಡಿ ನಿಯಮದ ಪ್ರಕಾರ ಯಾವುದೇ ಶುಲ್ಕವನ್ನು ಪಡೆಯುವಂತಿಲ್ಲ. ಆದರೆ ಜಿಲ್ಲಾ ಆಧಾರ್ ಸಂಯೋಜಕರು ಸ್ವಲ್ಪ ದಿನಗಳ ಹಿಂದೆ ಮೂಡಿಗೆರೆ, ತರೀಕೆರೆ, ಆಲ್ದೂರು ಹಾಗೂ ಬ್ಯಾಂಕ್ ಆಫ್ ಬರೋಡಾ ಆಪರೇಟರ್ಗಳಿಂದ ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಒಂದು ವೇಳೆ ಹಣ ನೀಡದಿದ್ದ ಪಕ್ಷದಲ್ಲಿ ಆಧಾರ್ ಐಡಿಯನ್ನು ನಿಷ್ಕ್ರೀಯಗೊಳಿಸುವುದಾಗಿ ಬ್ಲಾಕ್ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ಈ ವಿಚಾರವಾಗಿ ಆಪರೇಟರ್ಗಳು ಬಿಎಸ್ಎನ್ಎಲ್ ನಿರ್ವಹಣಾಧಿಕಾರಿ ಗೆ ಹಣ ಸಂದಾಯಗೊಳಿಸಿರುವ ಬಗ್ಗೆ ದಾಖಲಾತಿ ನೀಡಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಕೂಡಲೇ ಸಂಯೋಜಕರ ಮೇಲೆ ಕ್ರಮ ಜರುಗಿಸಿ ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
—————-ಸುರೇಶ್