ಮೂಡಿಗೆರೆ-ಎಷ್ಟೆ ಅನುಭವ ಹಾಗೂ ವಿಚಾರಗಳನ್ನು ಅರಿತಿದ್ದರೂ ಕೂಡಾ ತರಬೇತಿ ಪಡೆದು ವೃತ್ತಿ ನಿರ್ವಹಿಸಿದರೆ ಯಶ ಸಾಧ್ಯ-ಲೋಕಪ್ಪಗೌಡ

ಮೂಡಿಗೆರೆ-ಸಮಾಜದಲ್ಲಿ ಎಷ್ಟೆ ಅನುಭವ ಹಾಗೂ ವಿಚಾರಗಳನ್ನು ಅರಿತಿದ್ದರೂ ಕೂಡಾ ತರಬೇತಿ ಪಡೆದು ವೃತ್ತಿ ನಿರ್ವಹಿಸಿದರೆ ಯಶ ದೊರೆಯುತ್ತದೆ ಎಂದು ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಬಿ.ಸಿ.ಲೋಕಪ್ಪಗೌಡ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಲ್ಯಾಂಪ್ಸ್ ಸಹಕಾರ ಸಂಘದಿoದ ಮೂಡಿಗೆರೆ ಲ್ಯಾಂಪ್ಸ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ಧ ಲ್ಯಾಂಪ್ಸ್ ಸಹಕಾರ ಸಂಘದ ಸದಸ್ಯರುಗಳಿಗೆ ಆದಾಯ ಉತ್ಪನ್ನ ಮತ್ತು ವ್ಯವಹಾರ ಕುರಿತು ವಿಶೇಷ ಸಹಕಾರ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯದಲ್ಲಿ 23ಲ್ಯಾಂಪ್ಸ್ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನವು ದೊರೆಯುತ್ತಿರುವುದರಿಂದ ಸೌಲಭ್ಯವನ್ನು ಸದಸ್ಯರುಗಳಿಗೆ ದೊರಕಿಸಿಕೊಡುವಲ್ಲಿ ಲ್ಯಾಂಪ್ಸ್ ಸಹಕಾರ ಸಂಘಗಳು ಸಮರ್ಥಕವಾಗಿ ಆಡಳಿತ ನಿರ್ವಹಣೆ ಮಾಡಬೇಕಿದೆ ಎಂದು ಹೇಳಿದರು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಮೂಡಿಗೆರೆ ಲ್ಯಾಂಪ್ಸ್ ಅಧ್ಯಕ್ಷ ವಿಜೇಂದ್ರ, ಗಿರಿಜನರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗಾಗಿಯೇ ಲ್ಯಾಂಪ್ಸ್ ಸಹಕಾರ ಸಂಘಗಳನ್ನು ಸ್ಥಾಪಿಸಲಾಗಿದೆ. ಈ ನಿಟ್ಟಿನಲ್ಲಿ ಸದಸ್ಯರಿಗೆ ತರಬೇತಿಯನ್ನು ಏರ್ಪಡಿಸಲಾಗಿದ್ದು ಸಂಪೂರ್ಣ ಪ್ರಯೋಜನವನ್ನು ಪಡೆದುಕೊoಡು ಮುಂದುವರೆಯಬೇಕು ಎಂದರು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಜಿ.ಕೆ. ದಿವಾಕರ, ಹಿಂದುಳಿದ ಬುಡಕಟ್ಟು ಜನಾಂಗದವರೇ ಲ್ಯಾಂಪ್ಸ್ನ ಸದಸ್ಯರಾಗಿದ್ದು ಕೌಶಲ್ಯಾಭಿವೃದ್ಧಿ ಹಾಗೂ ಸಂಘದಲ್ಲಿ ಸದಸ್ಯರ ವ್ಯವಹಾರದ ಬಗ್ಗೆ ತರಬೇತಿಯನ್ನು ಏರ್ಪಡಿಸಿದ್ದು ಸಹಕಾರ ಸಂಘಗಳ ಮೂಲಕ ಆರ್ಥಿಕಾಭಿವೃದ್ಧಿ ಸಾಧಿಸಿ ದೇಶದ ಅರ್ಥವ್ಯವಸ್ಥೆಯ ಬೆನ್ನೆಲುಬಾಗಿ ನಿಲ್ಲುವಂತಾಗಲು ಸರ್ಕಾರಗಳು ಯೋಜನೆಗಳನ್ನು ರೂಪಿಸಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮೂಡಿಗೆರೆ ಲ್ಯಾಂಪ್ಸ್ ಉಪಾಧ್ಯಕ್ಷೆ ಎಂ.ಪಿ.ರೇಖಾ, ವಲಯಾರಣ್ಯಾಧಿಕಾರಿ ಚರಣ್ ಕುಮಾರ್, ನಿವೃತ್ತ ಉಪನಿರ್ದೇಶಕ ರಿಯಾಜ್ ಅಹ್ಮದ್, ಲ್ಯಾಂಪ್ಸ್ ಸಹಾಯಕ ಯೋಜನಾಧಿಕಾರಿ ಆನಂದ್ ತಳವಾರ, ಜಿಲ್ಲಾ ಸಹಕಾರ ಯೂನಿಯನ್ ಕಾರ್ಯನಿರ್ವಹಣಾಧಿಕಾರಿ ಹೆಚ್.ಕೆ.ಯಶಸ್ಸು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?