ಚಿಕ್ಕಮಗಳೂರು-ಹಿಂದೂ ಸಮಾಜದ ಏಳಿಗೆಗೆ ಅನಾದಿಕಾಲದಲ್ಲಿಯೇ ಶ್ರಮಿಸಿದ್ದ ಶ್ರೀ ವಾಲ್ಮೀಕಿ ಮಹರ್ಷಿಗಳು-ನಂದೀಶ್ ಮದಕರಿ

ಚಿಕ್ಕಮಗಳೂರು-ಪವಿತ್ರ ರಾಮಾಯಣದ ಮಹಾಕಾವ್ಯವನ್ನು ರಚಿಸುವ ಮೂಲಕ ಹಿಂದೂ ಬಾಂಧವರ ಏಳಿಗೆಗೆ ಅನಾದಿಕಾಲದಲ್ಲಿ ಶ್ರಮಿಸಿದ ಮಹಾ ದಾರ್ಶನಿಕರು ಶ್ರೀ ಮಹರ್ಷಿ ವಾಲ್ಮೀಕಿ ಗುರುಗಳು ಎಂದು ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ನಂದೀಶ್ ಮದಕರಿ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಅಂಗವಾಗಿ ಗುರುವಾರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು.

ಸ್ವoತ ಪರಿಶ್ರಮದ ಮೂಲಕ ರಾಮಾಯಣವೆಂಬ ಮಹಾಕಾವ್ಯ ರಚಿಸಿ ಉನ್ನತ ಸ್ಥಾನಕ್ಕೇರಿದ ವಾಲ್ಮೀಕಿಯರ ಜೀವನ ಶೈಲಿ, ಸಾಧನೆ ಹಾಗೂ ತಳ ಸಮುದಾಯಗಳ ಮಂದಿಗೆ ತೋರಿದ ಸ್ಪೂರ್ತಿಯ ಚಿಲುಮೆ ಮರೆಯವಂಥದ್ದಲ್ಲ. ಹೀಗಾಗಿ ಅವರ ಜೀವನಚರಿತ್ರೆಯೇ ಇಂದಿನ ಯುವಪೀಳಿಗೆಗೆ ದಾರಿದೀಪ ಎಂದು ಬಣ್ಣಿಸಿದರು.

ಇತ್ತೀಚಿನ ದಿನಗಳಲ್ಲಿ ಪರಿಶಿಷ್ಟ ಪಂಗಡದ ಜನಾಂಗದ ಅಭಿವೃಧ್ದಿ ಮೀಸಲಿರಿಸಿದ್ಧ ಅನುದಾನವನ್ನು ರಾಜ್ಯ ಸರ್ಕಾರ ಪಕ್ಷದ ಕಾರ್ಯವೈಖರಿಗೆ ಬಳಸಿಕೊಂಡಿರುವುದು ನಾಚಿಕೇಡಿತನ ಸಂಗತಿ. ಈ ನಡುವೆ ವಾಲ್ಮೀಕಿ ಜಯಂತಿಯನ್ನು ಕಾಂಗ್ರೆಸ್ ಸರ್ಕಾರ ಆಚರಿಸಲು ನೈತಿಕ ಹಕ್ಕಿಲ್ಲ ಎಂದು ದೂರಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ವೇಳೆಯಲ್ಲಿ ಪ.ಪಂಗಡದ ಸಮುದಾಯ ಅಭಿವೃಧ್ದಿಗೆ ಸಾಕಷ್ಟು ಅನು ದಾನ ಬಿಡುಗಡೆಗೊಳಿಸಿ ಸಹಕರಿಸಿದೆ. ವಾಲ್ಮೀಕಿ ಅಭಿವೃದ್ದಿ ನಿಗಮ ಸ್ಥಾಪನೆ, ವಾಲ್ಮೀಕಿ ಜಯಂತಿ ಅಡಿಪಾ ಯ ಹಾಗೂ ಸಮುದಾಯಕ್ಕೆ ಶೇ.೩3ರಷ್ಟಿದ್ದ ಮೀಸಲಾತಿಯನ್ನು ಶೇ.7 ಕ್ಕೆ ಏರಿಸಿರುವ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂಬುದನ್ನು ಜನಾಂಗ ಮನಗಾಣಬೇಕು ಎಂದರು.

ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಸೀತಾರಾಮ ಭರಣ್ಯ ಮಾತನಾಡಿ, ರಾಮಾಯಣ ಮಹಾಕಾವ್ಯದ ವೈಶಿಷ್ಟ್ಯ ಮತ್ತು ಶತಶತಮಾನಗಳಿಂದ ಗಳಿಸಿರುವ ಜನಪ್ರಿಯತೆಯಿಂದಾಗಿ ಕಾವ್ಯದ ಕರ್ತೃ ಮಹರ್ಷಿ ವಾಲ್ಮೀಕಿಯವರು. ಕವಿಕುಲ ಸಾರ್ವಭೌಮರಾಗಿ ಸಾಹಿತ್ಯ ಲೋಕದಲ್ಲಿ ನಿತ್ಯವೂ ಆರಾಧಿಸಲ್ಪಡುತ್ತಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಸ್ಟಿ ಮೋರ್ಚಾ ಉಪಾಧ್ಯಕ್ಷ ಮೂರ್ತಿ, ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್, ಪ್ರಧಾನ ಕಾರ್ಯದರ್ಶಿಗಳಾದ ಮಧುಕುಮಾರ್, ಶಂಕರ್, ನಗರ ಪ್ರಧಾನ ಕಾರ್ಯದರ್ಶಿ ಯತೀಶ್, ಉಪಾಧ್ಯಕ್ಷ ಭರತ್, ಮುಖಂಡ ಕೇಶವಮೂರ್ತಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?