ಚಿಕ್ಕಮಗಳೂರು:ಪರಸ್ಪರ ನೋವು ಮತ್ತು ನಲಿವಿನಲ್ಲಿ ಭಾಗವಹಿಸುವುದು,ಮಾನವೀಯತೆ ನಿಜವಾದ ಧರ್ಮ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಅಭಿಪ್ರಾಯಪಟ್ಟಿದ್ದಾರೆ
ನಗರದ ಹೊಟೆಲ್ ಗ್ರಾಂಡ್ ಕೃಷ್ಣದ ಸಭಾಂಗಣದಲ್ಲಿ ಬುಧವಾರ ಸಂಜೆ ಮಂಥನ ಸಂಸ್ಥೆ ಆಯೋಜಿಸಿದ್ದ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ “ಧರ್ಮ ಮತ್ತು ಸಂಸ್ಕೃತಿ”ಎoಬ ವಿಷಯ ಕುರಿತು ಮಾತನಾಡಿ, ಧರ್ಮ ಬೇರೆ, ಮತ ಬೇರೆ.ಧರ್ಮಕ್ಕೂ ಮತಕ್ಕೂ ಅಜಗಜಾಂತರ ವ್ಯತ್ಯಾಸಗಳು ಇವೆ ಎಂದರು.
ಧರ್ಮದ ಬಗ್ಗೆ ಮಾತನಾಡುವಾಗ ಕೋಲಾಹಲ ಮತ್ತು ಅಶಾಂತಿ ಸೃಷ್ಟಿಯಾಗುವ ಸಾಧ್ಯತೆಗಳು ಇರುತ್ತವೆ. ಧರ್ಮ ಎಂಬುದು ಸತ್ಯ ಆಧಾರಿತವಾಗಿದೆ. ಧರ್ಮಕ್ಕೆ ಮಿತಿ ಎಂಬುದು ಇರುವುದಿಲ್ಲ. ಧರ್ಮ ಹಿತ ಉಂಟು ಮಾಡುತ್ತದೆ. ಅಹಿತ ಉಂಟು ಮಾಡುವುದು ಅಧರ್ಮವಾಗುತ್ತದೆ ಎಂದು ಬಣ್ಣಿಸಿದರು.
ದೋಶ ರಹಿತ ಮನುಷ್ಯನ ವಿಕಾಸಕ್ಕೆ ಯಾವುದು ಬೇಕೋ ಅದು ಸಂಸ್ಕೃತಿ. ಸಂಸ್ಕೃತಿ ಮತ್ತು ಸಂಸ್ಕಾರದಿoದ ಮೌಲ್ಯ ಹೆಚ್ಚುತ್ತದೆ ಎಂದ ಅವರು, ನಮ್ಮ ಶಿಕ್ಷಣ ಮಾಧ್ಯಮ ಇಂಗ್ಲೀಷರು ಕೊಟ್ಟ
ಕನ್ನಡಕದಲ್ಲಿ ನೋಡುತ್ತಿರುವುದರಿಂದ ಸಂಸ್ಕೃತಿ, ಸಂಸ್ಕಾರದ ಕೊರತೆ ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಸಾಹಿತ್ಯ ಮತ್ತು ಶಿಕ್ಷಣ ವಲಯದ ಹಲವರು ಭಾಗವಹಿಸಿದ್ದರು. ಸುಮಾ ಪ್ರಸಾದ್ ವೈಯಕ್ತಿಕ ಗೀತೆ ಹಾಡಿದರು. ಮಂಥನ ಬಳಗದ ವಿಕ್ರಮ್ ಸ್ವಾಗತಿಸಿ, ನಿರೂಪಿಸಿದರು.