ಕೊರಟಗೆರೆ-ಮಹರ್ಷಿ ವಾಲ್ಮೀಕಿ ಪುತ್ಥಳಿ ಪ್ರತಿಷ್ಠಾಪನೆ ಗೊಂದಲ-ಆಹೋರಾತ್ರಿ ಪ್ರತಿಭಟನೆ-ಎಸ್.ಎಸ್.ಆರ್ ವೃತ್ತದಲ್ಲಿಯೇ ಪ್ರತಿಮೆ ನಿರ್ಮಿಸಲು ಆಡಳಿತ ಒಪ್ಪಿಗೆ?

ಕೊರಟಗೆರೆ-ಆದಿ ಕವಿ ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿ ಪ್ರತಿಷ್ಠಾಪಿಸುವ ವಿಚಾರದಲ್ಲಿ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

ಬುಧವಾರ ರಾತ್ರಿ ನಗರದಲ್ಲಿನ ಎಸ್.ಎಸ್.ಆರ್ ವೃತ್ತದಲ್ಲಿ ವಾಲ್ಮೀಕಿಯವರ ಪುತ್ಥಳಿ ಪ್ರತಿಷ್ಠಾಪನೆ ಮಾಡಲಾಗಿತ್ತು.ಆದರೆ ಆಡಳಿತ ಅದನ್ನು ಅನಧಿಕೃತವೆಂದು ತೆರವುಗೊಳಿಸಿದ ಕಾರಣಕ್ಕೆ ಆಕ್ರೋಶ ಗೊಂಡ ನೂರಾರು ಜನರು ಅದೇ ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಪ್ರತಿಮೆ ಪುನರ್ ಪ್ರತಿಷ್ಠಾಪಿಸುವಂತೆ ಆಗ್ರಹಿಸಿದರು.

ಅಹೋರಾತ್ರಿ ನಡೆದ ಪ್ರತಿಭಟನೆಯ ಕಾವು ಇಂದು ಬೆಳಗಿನ ಜಾವಕ್ಕೆ ತೀವ್ರತೆ ಪಡೆದುಕೊಂಡು ತಾಲೂಕು ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿತ್ತು.

ಪೊಲೀಸರು ಮಧ್ಯಪ್ರವೇಶಿಸಿ ಮಾತುಕತೆ ನಡೆಸಿದರಾದರೂ ಪ್ರತಿಭಟನಾನಿರತರು ಪ್ರತಿಭಟನೆ ಕೈಬಿಡಲು ಒಪ್ಪಲಿಲ್ಲ.ಇದೆ ಸ್ಥಳದಲ್ಲಿ ಪ್ರತಿಮೆ ಮರುಸ್ಥಾಪನೆಯಾಗುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲವೆಂದು ಪಟ್ಟುಹಿಡಿದು ಕುಳಿತರು. .

ಅಧಿಕಾರಿಗಳ ಮಧ್ಯ ಪ್ರವೇಶ

ಪ್ರತಿಭಟನೆಯ ತೀವ್ರತೆಯನ್ನು ಅರಿತ ತಹಶೀಲ್ದಾರ್ ಮಂಜುನಾಥ್ ಕೆ, ಪೊಲೀಸ್ ಅಡಿಷನಲ್ ಎಸ್ ಪಿ ಮರಿಯಪ್ಪ,ಡಿ ವೈ ಎಸ್ ಪಿ ಚಂದ್ರಶೇಖರ್, ಮಧುಗಿರಿ ಡಿ.ವೈ.ಎಸ್.ಪಿ ರಾಮಚಂದ್ರಪ್ಪ ಸೇರಿದಂತೆ ಪ್ರಮುಖ ಇಲಾಖೆಯ ಅಧಿಕಾರಿಗಳು ವಾಲ್ಮೀಕಿ ಜನಾಂಗದ ಮುಖಂಡರೊಂದಿಗೆ ಸಂಧಾನ ನಡೆಸಿ ಅದೇ ಸ್ಥಳದಲ್ಲಿ ಪಟ್ಟಣ ಪಂಚಾಯಿತಿ ಅನುಮೋದನೆಯೊಂದಿಗೆ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪಿಸಲು ಅವಕಾಶ ಕಲ್ಪಿಸುವ ಭರವಸೆಯನ್ನು ಪ್ರತಿಭಟನಾ ನಿರತರಿಗೆ ನೀಡಿ ಪ್ರಕರಣವನ್ನ ಸುಖಾಂತ್ಯ ಗೊಳಿಸಿದರು.

ಎಸ್.ಎಸ್.ಆರ್ ವೃತ್ತಕ್ಕೆ ವಾಲ್ಮೀಕಿ ಹೆಸರಿಡಲು ಒತ್ತಾಯ

ವಾಲ್ಮೀಕಿ ಪುತ್ಥಳಿ ಅನಾವರಣಗೊಳಿಸಲು ಒತ್ತಾಯಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ವಾಲ್ಮೀಕಿ ಜನಾಂಗದ ಮುಖಂಡರು ಪುತ್ಥಳಿ ಅನಾವರಣಕ್ಕೆ ಇದೇ ಸ್ಥಳವನ್ನು ಗುರುತಿಸಬೇಕು.ಜೊತೆಗೆ ಈ ವೃತ್ತವನ್ನ ವಾಲ್ಮೀಕಿ ವೃತ್ತವೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ಸಂದರ್ಭದಲ್ಲಿ ವಾಲ್ಮೀಕಿ ಜನಾಂಗದ ಮುಖಂಡರಾದ ಕೆ ಆರ್ ಓಬಳರಾಜ್, ಲಕ್ಷ್ಮೀನಾರಾಯಣ್, ಪುಟ್ಟನರಸಪ್ಪ, ರಮೇಶ್, ಕುದುರೆ ಸತ್ಯಣ್ಣ, ಮಹೇಶ್, ರಂಗರಾಜು, ಕವಿತಾ, ವಿನಯ್ ಕುಮಾರ್, ಗಂಗಾಧರಪ್ಪ, ಜ್ಯೋತಿ, ಉಷಾ , ಲಕ್ಷ್ಮೇಶ್, ರಂಗನಾಥ್ , ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

————–ಶ್ರೀನಿವಾಸ್ ಕೊರಟಗೆರೆ

Leave a Reply

Your email address will not be published. Required fields are marked *

× How can I help you?