ಮೂಡಿಗೆರೆ:ಗ್ರಾಮೀಣಭಾಗದ ಬಡ ವಿಧ್ಯಾರ್ಥಿಗಳಿಗೆ ಶಾಲಾ ಪರಿಕರ ಖರೀದಿಸಲು ಆರ್ಥಿಕವಾಗಿ ತೊಂದರೆಯಾಗುವ ಕಾರಣ ವಿಧ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯುವ ಸಾಧ್ಯತೆಯಿದೆ.ಸಮಾಜ ಸೇವಾ ಸಂಘ ಸಂಸ್ಥೆಗಳು ಆಯಾ ಗ್ರಾಮದ ಬಡಕುಟುಂಬಗಳನ್ನು ಗುರುತಿಸಿ ಅವರಿಗೆ ಶಾಲಾ ಸಮವಸ್ತ್ರ ಹಾಗೂ ಶೈಕ್ಷಣಿಕ ಪರಿಕರಗಳನ್ನು ನೀಡಲು ಮುಂದಾದರೆ ಬಡವರ ಮಕ್ಕಳು ಕೂಡಾ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ವಿಮುಕ್ತಿ ಚಾರಿಟಬಲ್ ಟ್ರಸ್ಟ್ ನಿರ್ಧೇಶಕ ಫಾದರ್ ಎಡ್ವಿನ್ ಡಿ’ಸೋಜಾ ತಿಳಿಸಿದರು.
ಕಪೂಚಿನ್ ಕೃಷಿಕ ಸೇವಾ ಕೇಂದ್ರ ಮತ್ತು ವಿಮುಕ್ತಿ ಚಾರಿಟಬಲ್ ಟ್ರಸ್ಟ್, ಬಣಕಲ್ ಇವರ ವತಿಯಿಂದ ಭಾನುವಾರ ಲ್ಯಾಂಪ್ಸ್,ಸಹಕಾರ ಭವನದಲ್ಲ್ಲಿ ಹಮ್ಮಿಕೊಳ್ಳಲಾಗಿದ್ದ ಬಡ ವಿಧ್ಯಾರ್ಥಿಗಳಿಗೆ ನೋಟ್ ಪುಸ್ತಕ,ಪೆನ್ನು, ಪೆನ್ಸಿಲ್, ಊಟದ ಬಾಕ್ಸ್ ಮತ್ತು ಬ್ಯಾಗ್‌ಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೃಷಿಕ ಸೇವಾ ಕೇಂದ್ರ ಮತ್ತು ನಮ್ಮ ವಿಮುಕ್ತಿ ಚಾರಿಟಬಲ್ ಟ್ರಸ್ಟ್, ಬಣಕಲ್ ಇವರ ವತಿಯಿಂದ ಈ ಪರಿಕರಗಳನ್ನು ವಿತರಿಸಲಾಗುತ್ತಿದೆ ವಿದ್ಯಾರ್ಥಿಗಳಿಗೆ ಶುಭವಾಗಲಿ ಎಂದು ಅವರು ಹಾರೈಸಿದರು.ಶಾಲಾ ಆಡಳಿತ ಮಂಡಳಿ ಕೂಡಾ ಬಡ ಮಕ್ಕಳ ವಿಧ್ಯಾಭ್ಯಾಸದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಅವರಿಗೆ ಸಹಕಾರ ನೀಡಿದಲ್ಲಿ ಅಂತಹ ಶೀಕ್ಷಣ ಸಂಸ್ಥೆಗಳ ಗೌರವ ಹೆಚ್ಚಾಗಲಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ನವೀನ್ ಕುಮಾರ್ ಮಾತನಾಡಿ ವಿಧ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದoತೆ
ನೋಡಿಕೊಳ್ಳಬೇಕಾಗಿರುವುದು ನಾಗರಿಕ ಸಮಾಜದ ಕರ್ತವ್ಯವಾಗಿದೆ.ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ವಿಧ್ಯಾರ್ಥಿಗಳಿಗೂ
ಶೈಕ್ಷಣಿಕ ಪರಿಕರಗಳನ್ನು ನೀಡುತ್ತಿರುವುದರಿಂದ ಬಡ ಕುಟುಂಬದ ಮಕ್ಕಳ ಸಮಸ್ಯೆಗೆ ಮುಕ್ತಿ ದೊರಕಿದೆ ಎಂದು
ಹೇಳಿದರು.
ಹಳೇ ಮೂಡಿಗೆರೆ ಗ್ರಾ.ಪಂ.ಮಾಜಿ ಅಧ್ಯಕ್ಷೆ ಜ್ಯೋತಿ ಸಾಲ್ದಾನ, ನಾಗಲಾಪುರ ಶಾಲೆಯ ಮುಖ್ಯ ಶಿಕ್ಷಕ ಸುರೇಶ್,
ಕಾಫಿನಾಡು ಸಮಾಜ ಸೇವಾ ಸಂಘದ ಅಧ್ಯಕ್ಷ ಹಸೈನಾರ್,ಶಿಕ್ಷಕರಾದ ಆದರ್ಶ, ದೀಕ್ಷಿತ್, ರಮೇಶ್, ನಾಗೇಶ್, ಉಷಾ,
ಮುಖಂಡರಾದ ಸೋನಿಯಾ, ಅಭಿಜಿತ್, ಪ್ರದೀಪ್, ರಾಜು, ಶಬಾನ,ಕೀರ್ತನಾ, ಶಶಿಕಲಾ, ಚೈತ್ರಾ, ಶ್ರಾವ್ಯ ಮತ್ತಿತರರಿದ್ದರು.
———————–ವಿಜಯ್ ಕುಮಾರ್