ಹಾಸನ:ಮನುಷ್ಯನ ಕಣ್ಣು ದೇವರು ನೀಡಿರುವ ಒಂದು ವಿಸ್ಮಯವಾದ ಅಂಗ- ಕಣ್ಣಿನ ದೃಷ್ಠಿ ತುಂಬಾ ಚೆನ್ನಾಗಿದ್ದವರು ಹೆಚ್ಚು ಬುದ್ಧಿವಂತ ರಾಗಿರುತ್ತಾರೆ-ಡಾ.ಕೆ. ಸಂದೀಪ್

ಹಾಸನ:ಮನುಷ್ಯನ ಕಣ್ಣು ದೇವರು ನೀಡಿರುವ ಒಂದು ವಿಸ್ಮಯವಾದ ಅಂಗವಾಗಿದ್ದು, ಕಣ್ಣಿನ ದೃಷ್ಠಿ ತುಂಬಾ ಚೆನ್ನಾಗಿದ್ದವರು ಹೆಚ್ಚು ಬುದ್ಧಿವಂತರಾಗಿರುತ್ತಾರೆ ಎಂದು ಕಣ್ಣಿನ ನರ ರೋಗ ತಜ್ಞ ಡಾ.ಕೆ. ಸಂದೀಪ್ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ರೋಟರಿ ಕ್ಲಬ್ ಹಾಸನ್,ರಾಯಲ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ವಾರದ ಸಭೆಯಲ್ಲಿ ನಡೆದ ಕಣ್ಣಿನ ಸಂರಕ್ಷಣೆ ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರು ಮೊಬೈಲ್, ಟಿ.ವಿ, ಕಂಪ್ಯೂಟರ್‌ಗಳನ್ನು ಬಳಸುವುದು ಕಡಿಮೆ ಮಾಡಿದರೆ ಒಳ್ಳೆಯದು. ಚಿಕ್ಕ ಮಕ್ಕಳಿಗೆ ಇಂದು ಕಣ್ಣಿನ ದೃಷ್ಠಿ ಸಮಸ್ಯೆ ಸಾಮಾನ್ಯವಾಗಿದೆ. ಈ ಹಿಂದೆ ಒಂದು ಶಾಲೆಯಲ್ಲಿ ಕನ್ನಡಕ ಧರಿಸುವವರ ಸಂಖ್ಯೆ ಅತ್ಯಂತ ಕಡಿಮೆ ಇರುತಿತ್ತು, ಆದರೇ ಇಂದು ಪರಿಸ್ಥಿತಿ ಬದಲಾಗಿದೆ. ಶಾಲೆಯಲ್ಲಿ ಕನ್ನಡಕ ಧರಿಸದೆ ಇರುವವರಿಗಿಂತ ಕನ್ನಡಕ ಹಾಕಿಕೊಳ್ಳುವವರ ಸಂಖ್ಯೆಯೇ ಹೆಚ್ಚಾಗಿದೆ. ಹಾಗಾಗಿ 15 ವರ್ಷದವರೆಗೆ ಮಕ್ಕಳನ್ನು ಮಣ್ಣಿನೊಂದಿಗೆ ಬೆರೆತು ಆಟ ಆಡುವಂತೆ ಮಾಡಬೇಕು.

ಮಕ್ಕಳಿಗೆ ಇಂದು ನಾವು ಮೊಬೈಲ್ಇಲ್ಲವೇ ಟಿವಿಗಳ್ಳಿಗೆ ಹೆಚ್ಚು ಅಂಟಿಕೊಳ್ಳುವoತೆ ಮಾಡಿದ್ದೇವೆ,ಮಕ್ಕಳನ್ನು ಕ್ರೀಡಾಂಗಣಗಳಿಗೆ ಕರೆತರುವ ಕೆಲಸವಾಗಬೇಕು.ಕಣ್ಣು ಬೆಳಕನ್ನು ಸೆರೆಹಿಡಿದು ಮೆದುಳಿಗೆ ರವಾನಿಸಿ ನಂತರ ಚಿತ್ರರೂಪದಲ್ಲಿ ನಮಗೆ ಕಾಣಿಸುವಂತೆ ಮಾಡುತ್ತದೆೆ. ಈ ಬೆಳಕು ಚಿತ್ರ ರೂಪದಲ್ಲಿ ಹೇಗೆ ಹೊರಬರುತ್ತದೆ ಎಂಬ ವಿಸ್ಮಯವನ್ನು ಕಂಡು ಹಿಡಿಯಲು ಇದುವರೆಗೂ ಯಾರಿಗೂ ಸಾಧ್ಯವಾಗಿಲ್ಲ. ಹಾಗಾಗಿ ಮನುಷ್ಯನ ಅಂಗಾoಗಗಳಲ್ಲಿ ಕಣ್ಣಿಗೆ ಅತ್ಯಂತ ಮಹತ್ವದ ಸ್ಥಾನವಿದೆ ಎಂದರು.

ಪ್ರತಿಯೊಬ್ಬರು ನೇತ್ರದಾನ ಮಾಡುವ ಮೂಲಕ ಇತರರಿಗೆ ಬೆಳಕಾಗುವ ಕೆಲಸ ಮಾಡಬೇಕು. ಯಾವುದೇ ವ್ಯಕ್ತಿ ಮೃತಪಟ್ಟು 6 ಗಂಟೆಯೊಳಗೆ ತಮ್ಮ ಕಣ್ಣನ್ನು ದಾನ ಮಾಡಬಹುದು. ಕಣ್ಣು ದಾನ ಮಾಡಲು ರಕ್ತದ ಗುಂಪು ಹೊoದಬೇಕೆoಬುದಿಲ್ಲ. ಹಾಗಾಗಿ ಯಾರೇ ನೇತ್ರದಾನ ಮಾಡಿದರು, ಅದನ್ನು ಇತರರಿಗೆ ಅಳವಡಿಕೆ ಮಾಡಿಕೊಳ್ಳಬಹುದು. ಕಣ್ಣಿನ ಅಕ್ಷಿ ಪಟೀಲ ರೋಗಕ್ಕೆ ಮಧುಮೇಹ, ಬಿ.ಪಿ. ಕಾಯಿಲೆ ಕಾರಣವಾಗಿದ್ದು, ಕಣ್ಣಿನಲ್ಲಿ ಕಾಣಿಸಿಕೊಳ್ಳುವ ಸಣ್ಣ ಕಾಯಿಲೆಯನ್ನು ಕೂಡಲೇ ವೈದ್ಯರಿಗೆ ತೋರಿಸಿ ಪರಿಹರಿಸಿಕೊಳ್ಳಬೇಕು. ಹಾಗಾದರೆ ಮಾತ್ರ ಯಾವುದೇ ಕಾಯಿಲೆಯನ್ನು ಆರಂಭದ ಹಂತದಲ್ಲಿಯೇ ಕಾಯಿಲೆ ಗುಣಪಡಿಸಿ ಕೊಳ್ಳಬಹುದು.

ವರ್ಷಕ್ಕೆ ಒಮ್ಮೆ ಎಲ್ಲರೂ ತಮ್ಮ ಕಣ್ಣಿನ ಸ್ಥಿತಿಗತಿಯ ಬಗ್ಗೆ ಪರೀಕ್ಷಿಸಿ ಕೊಳ್ಳುತ್ತಿರಬೇಕು. ಇಲ್ಲವಾದರೆ 3 ವರ್ಷ ಕೊನೆಯದಾಗಿ ಕನಿಷ್ಠ ಪಕ್ಷ 5 ವರ್ಷಗಳಿಗೊಮ್ಮೆ ಆದರೂ ಕಣ್ಣನ್ನು ಪರೀಕ್ಷಿಸಿಕೊಳ್ಳಬೇಕು. ಕಣ್ಣಿನ ರೆಪ್ಪೆ ಕೂಡ ಹೃದಯದ ಬಡಿತವಿದ್ದಂತೆ ರೆಪ್ಪೆ ಕೂಡ ಒಂದು ನಿಮಿಷಕ್ಕೆ 22 ಸರಿ ಬಡಿಯುತ್ತಿರಬೇಕು. ಕಣ್ಣಿನ ಸಮಸ್ಯೆ ವಂಶಪಾರoಪರ್ಯವಾಗಿ ಬರುವ ಸಾಧ್ಯತೆ ಇದ್ದು, ಆರಂಭಿಕ ಹಂತದಿoದಲೇ ಇದನ್ನು ಸಂರಕ್ಷಣೆ ಮಾಡಿದರೆ ಪರಿಹರಿಸಿಕೊಳ್ಳಬಹುದು.

ಪ್ರಸ್ತುತ ಮನುಷ್ಯನ ಆಹಾರ ಪದ್ಧತಿಯಲ್ಲಿ 40 ವರ್ಷ ದಾಟಿದ ಬಹುತೇಕ ಮಂದಿ ಓದುವ ಕನ್ನಡಕ ಬಳಸಬೇಕಾಗುವುದು ಸಾಮಾನ್ಯವಾಗಿರುತ್ತದೆ ಡಾ.ಕೆ. ಸಂದೀಪ್ ತಿಳಿಸಿದರು.

ರೋಟರಿ ಕ್ಲಬ್ ಹಾಸನ್ ರಾಯಲ್ ಸಂಸ್ಥೆಯ ಅಧಕ್ಷ ಯು.ವಿ. ಸಚ್ಚಿನ್, ಕಾರ್ಯದರ್ಶಿ ಪುನೀತ್, ಖಜಾಂಚಿ ರವಿ ಕುಮಾರ್ ಪಿ., ವಲಯ ಸೇನಾನಿ ಡಾ.ವಿಕ್ರಂ, ಸದಸ್ಯರಾದ ಎಸ್. ಯೋಗೇಶ್, ಶ್ರೀಧರ್, ವೇಣುಗೋಪಾಲ್,ಹರ್ಷ, ಕೆ.ಸಿ. ನವೀನ್, ಡಾ.ಎಂ.ಡಿ. ನಿತ್ಯಾನಂದ, ಸತೀಶ್, ಎಸ್.ಕೆ. ಕುಮಾರ್,ವಿನಯ್, ಗಿರೀಶ್, ಅತಿಥ್, ದಿಲೀಪ್ ಕುಮಾರ್ ಎಚ್.ಕೆ., ಮಹೇಶ್, ಕಿರಣ್, ಶ್ರೀನಂದ ಹಾಗೂ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?