ಮುಂಡಗೋಡ:ಅರಣ್ಯ ಇಲಾಖೆ ರಕ್ಷಿತ ಅರಣ್ಯದಲ್ಲಿ ಸಾಗುವಾನಿ ಮರ ಕಡಿದು ಅಕ್ರಮ ಸಾಗಣೆ ಮಾಡುತ್ತಿದ್ದ ಖದೀಮರ ಹೆಡೆಮುರಿ ಕಟ್ಟಿದೆ.
ತಾಲೂಕಿನಲ್ಲಿನ ಅರಣ್ಯ ಕಳ್ಳತನ ಪ್ರಕರಣ ಗಳ ಬಗ್ಗೆ ತೀವ್ರ ನಿಗಾವಣೆ ನಡೆಸುತ್ತಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ತಾಲೂಕಿನ ಸನವಳ್ಳಿ ವ್ಯಾಪ್ತಿಯಲ್ಲಿ ಬರುವ ಬಪ್ಪಲ ಗುಂಡಿ ಅರಣ್ಯದಲ್ಲಿ ಗಸ್ತು ನಡೆಸುತ್ತಿರುವಾಗ ಅನಧಿಕೃತವಾಗಿ 4 ಸಾಗುವಾನಿ ಮರಗಳನ್ನು ಕಟಾವಣೆ ಮಾಡಿ ಸಾಗಿಸಲು ಹೊಂಚು ಹಾಕುತ್ತಿದ್ದ ಆರೋಪಿಗಳ ಬಂಧಿಸಿ ಮಾಲನ್ನು ವಶಕ್ಕೆ ಪಡೆಯುವಲ್ಲಿ ಯಶ ಕಂಡಿದ್ದಾರೆ.
ಬಸವರಾಜ್. ರುದ್ರಪ್ಪ ಅಡಿಯವರ ಸಾಕಿನ್, ಬಸನಕಟ್ಟಿ ಗ್ರಾಮ, ಶಿಗ್ಗಾವಿ ತಾಲೂಕು, ಹಾಗೂ ಮಂಜುನಾಥ್ ಮುದುಕಪ್ಪ ಅಗಡಿ ಸಾಕಿನ, ಬಸನಕಟ್ಟಿ ಗ್ರಾಮ ಎಂಬುವವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಕೊಡಲಿ ಹಾಗೂ ಕೈ ಕರಗಸವನ್ನು ಜಪ್ತು ಮಾಡಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಈ ಕಾರ್ಯಾಚರಣೆಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು,ರವಿ ಎಂ ಹುಲ್ಕೋಟಿ ಅವರ ಮಾರ್ಗದರ್ಶನದಲ್ಲಿ,ವಲಯ ಅರಣ್ಯಾಧಿಕಾರಿ ವಾಗೀಶ ಬಿ.ಜೆ ಇವರ ನೇತೃತ್ವದಲ್ಲಿ ಶಂಕರ್ ಬಾಗೇವಾಡಿ, ಗಿರೀಶ್ ಕೊಲೆಕರ್, ಕುಮಾರಿ ಸುನೀತಾ, ಹಾಗೂ ಅರಣ್ಯ ಪಾಲಕರುಗಳಾದ ರಾಜು ಪರಿಟ, ಮಲ್ಲಪ್ಪ ತುಲಜಣ್ಣನವರ, ದೇವರಾಜ್ ಅಡಿನ್ ನಡೆಸಿದ್ದಾರೆ.