ಮೂಡಿಗೆರೆ:ಕಾಂಗ್ರೆಸ್‌ಗೆ ಮಾನಮರ್ಯಾದೆ ಇದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ರಾಜೀನಾಮೆ ಪಡೆದು ಪಕ್ಷದ ಮಾರ್ಯಾದೆ ಉಳಿಸಿಕೊಳ್ಳಲಿ ಎಂದು ಉಪಸಭಾಪತಿ ಎಂ.ಕೆ.ಪ್ರಾಣೇಶ್ ಒತ್ತಾಯಿಸಿದರು.
ಸೋಮವಾರ ಪಟ್ಟಣದ ಲಯನ್ಸ್ ವೃತ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ
ಪ್ರತಿಭಟನೆಯಲ್ಲಿ ಮಾತನಾಡಿದ ಅವರು,ತುಳಿತಕ್ಕೊಳಗಾದವರ ಉದ್ದಾರ ಮಾಡುತ್ತೇನೆಂದು ಹೇಳಿಕೊಳ್ಳುತ್ತಿರುವ ಸಿಎಂ ಆ ಸಮುದಾಯದ ಅಭಿವೃದ್ದಿಗೆ ಮೀಸಲಿರಿಸಿದ್ದ ೨೪ ಸಾವಿರ ಕೋಟಿ ರೂಗಳನ್ನು ಗ್ಯಾರಂಟಿ ಯೋಜನೆ ಬಳಸಿ ಎಸ್ಸಿ ಎಸ್ಟಿಗೆ ಮೋಸಮಾಡಿದ್ದಾರೆ.ಅಲ್ಲದೆ ವಾಲ್ಮೀಕಿ ನಿಗಮದಲ್ಲಿ ೮೭ಕೋಟಿ ರೂ ಹಗರಣ ನಡೆದಿದೆ ಎಂದು ಸ್ವತ: ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ.ಮೂಡದಿoದ ತಮ್ಮ ಪತ್ನಿ ಹೆಸರಿನಲ್ಲಿ ೧೩ನಿವೇಶನ ಪಡೆದುಕೊಂಡು ತುಳಿತ ಕ್ಕೊಳಗಾದವರಿಗೆ ಮೋಸವೆಸಗಿದ್ದಾರೆ.ಮೂಡದಲ್ಲಿ ಭ್ರಷ್ಟಾಚಾರ ನಡೆದಿದ್ದರೂ ತನಿಖೆಗೆ ವಹಿಸಲಿಲ್ಲ.ಕಾಂಗ್ರೆಸ್ ಸರ್ಕಾರದ ಎಲ್ಲಾ ಭ್ರಷ್ಟಾಚಾರಗಳೂ ಈಗ ಹೊರಜತ್ತಿಗೆ ತಿಳಿದಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು,
ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರವೆಸಗುತ್ತಿರುವ ಸಿಎಂ ಸಿದ್ದರಾಮಯ್ಯ ಮೂಡ ಹಗರಣದಲ್ಲಿ ಸಿಲುಕಿದ್ದರಿಂದ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ.ಸಿಎಂ ಸಿದ್ದರಾಮಯ್ಯನವರಿಗೆ ಕಿಂಚಿತ್ತಾದರೂ
ಮರ್ಯಾದೆಯಿದ್ದಲ್ಲಿ ನೈತಿಕಹೊಣೆ ಹೊತ್ತು ಕೂಡಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು
ಉಪಸಭಾಪತಿ ಎಂ.ಕೆ.ಪ್ರಾಣೇಶ್ ಆಗ್ರಹಿಸಿದರು.
ಬಿಜೆಪಿ ಮುಖಂಡ ಜೆ.ಎಸ್.ರಘು ಮಾತನಾಡಿ,ಮೂಡದಲ್ಲಿ ಭ್ರಷ್ಟಾಚಾರ ಮಾಡಿ ಬಡವರಿಗೆ ಸಿಗಬೇಕಾದ ನಿವೇಶನ ನಿಮ್ಮ ಹೆಂಡತಿಹೆಸರಿಗೆ ಮಾಡಿಕೊಂಡು ತಾವು ಭ್ರಷ್ಟರೆಂದು ಸಾಬೀತು ಪಡಿಸಿದ್ದೀರಿ. ಈ ಸರ್ಕಾರವನ್ನು ಹೀಗೆಯೇ ಬಿಟ್ಟರೆ ಜನರ ಹಣವೆನ್ನೆಲ್ಲಾ ಕೊಳ್ಳೆ ಹೊಡಯುತ್ತಾರೆ ಎಂದು ದೂರಿದರು.
ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಮಾತನಾಡಿ ರಾಜ್ಯಪಾಲರ ವಿರುದ್ದ ಕಾಂಗ್ರೆಸ್ ಹೋರಾಟ ನಡೆಸುತ್ತಿರುವುದು
ಸಂವಿಧಾನ ವಿರೋಧಿ ನಡೆಯಾಗಿದೆ.ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರ ಕೆಲವೇ ದಿನಗಳಲ್ಲಿ ಪತನಗೊಳ್ಳಲಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ ಮಾತನಾಡಿ ಮೂಡ ಹಗರಣದ ಎಲ್ಲ ದಾಖಲೆಗಳು ದೊರಕಿದ್ದರಿಂದಲೇ
ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆಯೇ ಹೊರತು ಸುಮ್ಮನೆ ನೀಡಿಲ್ಲ. ಈಗಲಾದರೂ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷದ ಮರ್ಯಾದೆ ಉಳಿಸಿಕೊಳ್ಳಲಿ ಎಂದು ಕಿಡಿ ಕಾರಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಟಿ.ಎಂ.ಗಜೇoದ್ರ,ನಯನ್ ತಳವಾರ,ಬಿ.ಎನ್.ಜಯಂತ್, ಡಿ.ಎಸ್.ಸುರೇಂದ್ರ,ಪಿ.ಜಿ.ಅನುಕುಮಾರ್, ವಿನಯ್ ಹಳೇಕೋಟೆ, ಧನಿಕ್, ತಾರೇಶ್,ಪರೀಕ್ಷಿತ್ ಜಾವಳಿ, ಸಚಿನ್, ಸಂದೀಪ್, ಕಮಲಾಕ್ಷಮ್ಮ, ಗೌರಮ್ಮ, ರವಿ ಒಡೆಯರ್, ಪ್ರಕಾಶ್ ಗಟ್ಟದಹಳ್ಳಿ ಮತ್ತಿತರoರಿದ್ದರು.
—————————-ವಿಜಯ್ ಕುಮಾರ್ -ಹಿರಿಯ ವರದಿಗಾರರು