ಚಿಕ್ಕಮಗಳೂರು-ಕುಟುಂಬದ ಸಾಧನೆಯ ಹಾದಿಯಲ್ಲಿ ಹೆಣ್ಣಿನ ಪಾತ್ರ ಮಹತ್ವವಾದದ್ದು ಎಂದು ಸಾಯಿ ಏಂಜೆಲ್ಸ್ ಪ್ರೌಢಶಾಲಾ ಶಿಕ್ಷಕಿ ನೇತ್ರಾವತಿಮಹೇಶ್ ಅಭಿಪ್ರಾಯಿಸಿದರು.
ಅಕ್ಕಮಹಾದೇವಿ ಮಹಿಳಾ ಸಂಘದ ವಿಜಯಪುರ ಬಡಾವಣೆಯ ಶರಣೆ ಅಕ್ಕ ನಾಗಲಾಂಬಿಕೆ ಗುಂಪು ಶ್ರೀ ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಸೀಗೆಹುಣ್ಣಿಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಪ್ರತಿಯೊಬ್ಬರಿಗೂ ಅಗತ್ಯ. ಇಂದು ಪ್ರತಿಯೊಬ್ಬ ಹೆಣ್ಣುಮಕ್ಕಳು ಸುಶಿಕ್ಷಿತಳಾಗಿದ್ದಾಳೆ. ಕುಟುಂಬದಲ್ಲಿ ತಂದೆ-ತಾಯಿಗಳೆ ಆಧಾರ. ಸಂಸ್ಕೃತಿ ಸಂಸ್ಕಾರ ಮಕ್ಕಳಿಗೆ ಚಿಕ್ಕವಯಸ್ಸಿನಲ್ಲೆ ಹೇಳಿಕೊಟ್ಟಾಗ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಎಂದರು.
ದಸರಾ ಹಬ್ಬದ ಹತ್ತುದಿನವೂ ಶಕ್ತಿದೇವತೆಯಾದ ಶ್ರೀದುರ್ಗೆಯನ್ನು ಹತ್ತು ಅವತಾರಗಳಲ್ಲಿ ಆರಾಧಿಸುತ್ತಾರೆ. ದುಷ್ಟರ ಶಿಕ್ಷೆ, ಶಿಕ್ಷರ ರಕ್ಷೆಯ ಪ್ರತೀಕವಾದ ದಸರಾ ಹಬ್ಬವನ್ನು ಕಳೆದ ವಾರ ಆಚರಿಸಿದೆವು ಎಂದ ನೇತ್ರಾ, ಅಕ್ಕಮಹಾದೇವಿಯ ಸಂಘ ಎಲ್ಲ ಶರಣೆಯರು ಒಂದಿಲ್ಲೊoದು ಕ್ಷೇತ್ರದಲ್ಲಿ ಸಮಾಜದ ಶಕ್ತಿದೇವತೆಗಳು ಎಂದು ಹೇಳಿದರು.
15ವರ್ಷದ ಹಿಂದೆ ಅಧ್ಯಕ್ಷೆಯಾಗಿದ್ದ ಗೌರಮ್ಮಬಸವೇಗೌಡರು ಒಬ್ಬ ಶಕ್ತಿದೇವತೆಯಾಗಿ ಈ ಅಕ್ಕಮಹಾದೇವಿ ಮಹಿಳಾ ಸಂಘವನ್ನು ಕಟ್ಟಿದ್ದು ಮರೆಯಲಾಗದು.12ಶತಮಾನದಲ್ಲಿ ಅನುಭವ ಮಂಟಪದಲ್ಲಿ ಹೆಣ್ಣಿಗೆ ಮೀಸಲಾತಿ ಮತ್ತು ಪ್ರಾಮುಖ್ಯತೆಯನ್ನು ನೀಡಲಾಗಿತ್ತು. ಬಸವಣ್ಣ, ಅಲ್ಲಮಪ್ರಭು ಮೊದಲ ವಚನಗಾರ್ತಿ ಅಕ್ಕಮಹಾದೇವಿಯನ್ನು ಅಂದೆ ಗೌರವಾದರಗಳಿಂದ ಬಿಂಬಿಸಿದ್ದರು. ಶರಣೆಯರು ವಚನಗಳ ಮೂಲಕ ಸಮಾಜದ ಅಂಕುಡೊoಕುಗಳನ್ನು ತಿದ್ದುವಂತಹ ಕಾರ್ಯ ಆಗಲೇ ನಡೆದಿತ್ತು.ಯಾವುದೇ ಕ್ಷೇತ್ರದಲ್ಲಿ ಮಹಿಳೆ ಮುಂದೆಬರಲು ಸಮಾಜದ ಪ್ರೋತ್ಸಾಹದ ಜೊತೆಗೆ ಕುಟುಂಬದ ಸಹಕಾರ ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಯಮುನಾಸಿ.ಶೆಟ್ಟಿ ಮಾತನಾಡಿ, ಸಂಸ್ಥಾಪಕ ಅಧ್ಯಕ್ಷರಾಗಿದ್ದ ಗೌರವಮ್ಮಬಸವೇಗೌಡ ಅವರು ಹಗಲುರಾತ್ರಿ ಎನ್ನದೆ ಮನೆಮನೆಗೂ ಹೋಗಿ ಮಹಿಳೆಯರನ್ನು ಒಂದೂಗೂಡಿಸುವ ಕೆಲಸ ಮಾಡಿ ಅಕ್ಕಮಹಾದೇವಿ ಮಹಿಳಾ ಸಂಘ ಸ್ಥಾಪಿಸಿದರು.ಕಳೆದ 15ವರ್ಷಗಳಿಂದ ಎಲ್ಲರ ಸಹಕಾರದಿಂದ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸುವ ವೇದಿಕೆಯಾಗಿದ್ದು ಮುಂದಿನ ಡಿಸೆಂಬರ್ ತಿಂಗಳು ಕಾರ್ಯಕಾರಿ ಸಮಿತಿಯ ಚುನಾವಣೆ ನಡೆಯಲಿದ್ದು 11 ಗುಂಪಿನ ಎಲ್ಲರೂ ಸದಸ್ಯರ ಸಹಕರಿಸಬೇಕಾಗಿ ಕೋರಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಂಡ ಮುಖಂಡೆ ಪಾರ್ವತಿvಬಸವರಾಜು ನಮ್ಮ ಗುಂಪಿನ ಎಲ್ಲ ಸದಸ್ಯನೀಯರು ಅತ್ಯುತ್ತಮವಾದ ಸಹಕಾರ ನೀಡಿದ್ದು, ಮುಂದೆಯೂ ಸಹ ಇದೇ ರೀತಿ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಸೇವಾಕಾರ್ಯಗಳಲ್ಲಿ ಸಹಕರಿಸುವಂತೆ ಮನವಿ ಮಾಡಿಕೊಂಡರು.
ಸದಸ್ಯರಾದ ಮಂಜುಳಾಉದಯ್ ಸ್ವಾಗತಿಸಿ, ವನಜಾಕ್ಷಿಮೋಕ್ಷನಾತ್ ವಂದಿಸಿದರು. ಆಶಾಮಲ್ಲೇಸ್ ನಿರೂಪಿಸಿದ್ದು, ಸುಮಿತ್ರಾಶಾಸ್ತ್ರೀ ಅತಿಥಿಗಳನ್ನ ಪರಿಚಯಿಸಿದರು.
ಶೈಲಜಾಬಸವರಾಜ್ ಮತ್ತು ಅನುರಾಧರೇಣುಕ ವೇದಘೋಷ ಮಾಡಿದ್ದು, ಶ್ಯಾಮಲಾರಮೇಶ್ ಪ್ರಾರ್ಥಿಸಿದರು. ಶರಣೆ ಅಕ್ಕನಾಗಮ್ಮ ಚರಿತ್ರೆ ರೇಣುಕಾಕುಮಾರ್ ಪರಿಚಯಿಸಿದರು. ಗಾಯತ್ರಿ, ವೀಣಾರುದ್ರೇಶ್ ಮತ್ತು ಪ್ರೇಮಾ ತಂಡ ನಾಡಗೀತೆ, ಸಿದ್ಧವೀರಮ್ಮ ವಚನಗಾಯನ ಹಾಡಿದರು. ಸಹಕಾರ್ಯಧರ್ಶಿ ನಾಗಮಣಿಕುಮಾರ್, ನಿರ್ದೇಶಕರುಗಳಾದ ಹೇಮಲತಾ, ಗೀತಾಜಗದೀಶ್, ಹಿರಿಯರಾದ ಶಿಕ್ಷಕಿ ಶಿವಮ್ಮ ಮತ್ತಿತರರು ವೇದಿಕೆಯಲ್ಲಿದ್ದರು.
ಸದಸ್ಯೆ ಅನ್ನಪೂರ್ಣ ನಿರ್ದೇಶನದ ಚಂಪಕಾ ತಂಡದ ‘ನಾಟಿಅತ್ತೆ-ಐ.ಟಿ.ಸೊಸೆ’ ಹಾಸ್ಯ ನಾಟಕ ನಡೆಯಿತು. ಭಾರತಿಲೋಕೇಶ್, ಸರಳಾದೇವರಾಜ್ ತಂಡದ ಜಾನಪದನೃತ್ಯ. ಆಕರ್ಷಕವಾಗಿತ್ತು. ವಿವಿಧ ಆಟೋಟಸ್ಪರ್ಧಾ ವಿಜೇತರಿಗೆ ಪಾರ್ವತಿ ಬಸವರಾಜು ಬಹುಮಾನ ವಿತರಿಸಿದರು.