ಮೂಡಿಗೆರೆ;ವಿವಾಹಿತ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೂಡಿಗೆರೆ ತಾಲೂಕು ಬಾಳೂರು ಪೋಲೀಸ್ ಠಾಣಾ ವ್ಯಾಪ್ತಿಯ ಮಾವಿನಕೊಡಿಗೆ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.
ಸುಭೀಕ್ಷಾ (೨೮) ಎಂಬುವವರು ಸೋಮವಾರ ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದು, ಮೃತಳ ತಂದೆ ಚಿನ್ನೇಗೌಡ ತನ್ನ ಮಗಳಿಗೆ ಪತಿ, ಮಾವ ಮತ್ತು ಅವರ ಅತ್ತೆ ವರದಕ್ಷಣೆ ಕಿರುಕುಳ ಕೊಡುತ್ತಿದ್ದರು, ತನ್ನ ಮಗಳ
ಸಾವಿನ ಬಗ್ಗೆ ಅನುಮಾನವಿದೆ, ಈ ಬಗ್ಗೆ ತನಿಖೆ ನಡೆಬೇಕು ಎಂದು ಬಾಳೂರು ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಸುಭೀಕ್ಷಾ ಪತಿ ಎಂ.ಸಿ.ಪ್ರವೀಣ, ಮಾವ ಚಂದ್ರೇಗೌಡ ವಿರುದ್ದ
ಪ್ರಕರಣ ಧಾಖಲಿಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು,ಮೂಡಿಗೆರೆ ತಹಸೀಲ್ದಾರ್ ಮತ್ತು ಬೆರಳಚ್ಚು ತಜ್ಞರ
ಪರಿಶೀಲನೆಯ ನಂತರ ಮೃತ ಶರೀರವನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಕಳಸ ತಾಲೂಕು ಸಂಸೆ ಗ್ರಾಮದ ಮಲವಂತಿಗೆ ಗ್ರಾಮದ ಚಿನ್ನೇಗೌಡ ಅವರ ಮಗಳು ಸುಭೀಕ್ಷಾ ಅವರೊಂದಿಗೆ ೨೦೨೦ರ ಮೇ ೨೯ರಂದು ಮರ್ಕಲ್ ಗ್ರಾಮದ ಚಂದ್ರೇಗೌಡರ ಪುತ್ರ ಪ್ರವೀಣ್ ಅವರ ವಿವಾಹವಾಗಿತ್ತು. ದಂಪತಿಗೆ ೩ವರ್ಷದ ಮಗುವಿದ್ದು ಸುಭೀಕ್ಷಾ ಸಾವಿಗೆ ಪತಿಯ ಮನೆಯವರ ಕಿರುಕುಳವೇ ಕಾರಣ ಎಂದು ಆಕೆಯ ಪೋಷಕರು ದೂರಿದ್ದು ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
——————-ವಿಜಯ್ ಕುಮಾರ್-ಹಿರಿಯ ವರದಿಗಾರರು