ಸಕಲೇಶಪುರ-ಗ್ರಾಮೀಣ ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿಸುವ ನಿಟ್ಟಿನಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮಹತ್ವದ ಕೆಲಸ ಮಾಡುತ್ತಿದೆ-ಸಿಮೆಂಟ್ ಮಂಜು

ಸಕಲೇಶಪುರ-ಗ್ರಾಮೀಣ ಪ್ರದೇಶದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಅವರನ್ನು ಸಂಘಗಳ ಮೂಲಕ ಸಂಘಟಿಸಿ ದುಡಿದ ಹಣವನ್ನು ಉಳಿತಾಯ ಮಾಡುವುದು ಹಾಗೂ ಉಳಿತಾಯ ಮಾಡಿದ ಹಣವನ್ನು ಅವರಿಗೆ ಸಾಲದ ರೂಪದಲ್ಲಿ ನೀಡಿ ಅವರು ಆರ್ಥಿಕವಾಗಿ ಸದ್ರಡರಾಗುವ ನಿಟ್ಟಿನಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮಹತ್ವದ ಕೆಲಸ ಮಾಡುತ್ತಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಪಟ್ಟಣದ ಗುರುವೇ ಗೌಡ ಕಲ್ಯಾಣ ಮಂಟಪದಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಪದಾಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅನೇಕ ಅಭಿವೃದ್ಧಿ ಕಾರ್ಯಗಳನ್ನು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಪೂಜ್ಯರಾದ ಶ್ರೀ ಡಾ ವೀರೇಂದ್ರ ಹೆಗಡೆಯವರು ಯಶಸ್ವಿಯಾಗಿ ನಡೆಸುತ್ತಿದ್ದಾರೆ.ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ವಿವಿಧ ರೂಪದಲ್ಲಿ ಅವರಿಗೆ ಸಂಘದ ವತಿಯಿಂದ ಸಾಲ ನೀಡಲಾಗುತ್ತಿದೆ.ಇದರಿಂದ ಮಹಿಳೆಯರಲ್ಲಿ ಸಾದಿಸುವ ಛಲ ಹುಟ್ಟಿದೆ.ಹಲವು ರೂಪದಲ್ಲಿ ತಮ್ಮ ಕುಟುಂಬವನ್ನು ಅಭಿವೃದ್ಧಿಯತ್ತ ಒಯ್ಯಲು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಅವರಿಗೆ ಬೆನ್ನೆಲುಬಾಗಿ ನಿಂತಿದೆ.

ಜೊತೆಗೆ ಮದ್ಯವ್ಯರ್ಜನ ಶಿಭಿರಗಳನ್ನು ನಡೆಸುವ ಮೂಲಕ ರಾಜ್ಯದಾದ್ಯಂತ ಲಕ್ಷಾಂತರ ಜನ ಮದ್ಯ ವ್ಯಸನಿಗಳನ್ನು ಅದರಿಂದ ಆಚೆಗೆ ತರಲಾಗಿದೆ.ಈ ಕಾರಣಕ್ಕೆ ಬೀದಿ ಪಾಲಾಗಲಿದ್ದ ಎಷ್ಟೋ ಕುಟುಂಬಗಳು ಇಂದು ನೆಮ್ಮದಿಯ ಜೀವನ ನಡೆಸುತ್ತಿವೆ.ಸರಕಾರಗಳೇ ಮಾಡಲಾಗದ ಸಾಧನೆಯನ್ನು ಮಾಡುತ್ತಿರುವ ಡಾ ವೀರೇಂದ್ರ ಹೆಗ್ಗಡೆಯವರಿಗೆ ಎಷ್ಟು ಅಭಿನಂದನೆಗಳನ್ನು ತಿಳಿಸಿದರು ಸಾಲದು ಎಂದರು.

ಎಸ್ ಕೆ ಡಿ ಆರ್ ಡಿ ಪಿ ಪ್ರಾದೇಶಿಕ ನಿರ್ದೇಶಕ ಜಯರಾಮ್ ನೆಲ್ಲಿತ್ತಾಯ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಲಕ್ಷಾಂತರ ಕುಟುಂಬಗಳು ಆರ್ಥಿಕ ಸ್ವಾವಲಂಬಿಗಳಾಗಿವೆ ಎಂದರು.

ಎಸ್ ಕೆ ಡಿ ಆರ್ ಡಿ ಪಿ ಜಿಲ್ಲಾ ನಿರ್ದೇಶಕಿ ಮಮತಾ ಹರೀಶ್ ರಾವ್ ಮಾತನಾಡಿ ಸಂಘದ ಸದಸ್ಯರು ಪಡೆದ ಸಾಲವನ್ನು ಉದ್ದೇಶಿತ ಕಾರ್ಯಕ್ಕೆ ಸರಿಯಾಗಿ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಎಸ್ ಕೆ ಡಿ ಆರ್ ಡಿ ಪಿ ತಾಲೂಕು ಯೋಜನಾಧಿಕಾರಿ ಕೆ. ಪುರುಷೋತ್ತಮ್, ಜಿಲ್ಲಾ ಜನ ಜಾಗೃತಿ ಅಧ್ಯಕ್ಷ ಡಾ.ನವೀನ್ ಚಂದ್ರ ಶೆಟ್ಟಿ , ಜಿಲ್ಲಾ ವಿಜಕ್ಷಣಾಧಿಕಾರಿ ಅರುಣ್ ಮುಂತಾದವರು ಉಪಸ್ಥಿತರಿದ್ದರು.

—————-ರಕ್ಷಿತ್ ಎಸ್.ಕೆ

Leave a Reply

Your email address will not be published. Required fields are marked *

× How can I help you?