ತುಮಕೂರು:ವಿದ್ಯಾರ್ಥಿಗಳ ಕುತೂಹಲ ಮತ್ತು ಉತ್ಸಾಹ ತಂತ್ರಜ್ಞಾನ ಕ್ಷೇತ್ರವನ್ನು ಇಂಜಿನಿಯರಿoಗ್ ಮುನ್ನಡೆಸುತ್ತದೆ. ವಿದ್ಯಾರ್ಥಿಗಳು ತರಗತಿಗಳಲ್ಲಿ ಪಡೆಯುವ ಜ್ಞಾನವು ಭವಿಷ್ಯದಲ್ಲಿ ಅವರ ಪ್ರಗತಿಗೆ ಅಡಿಪಾಯವಾಗಬಹುದುಎಂದು ನೆದರ್ಲ್ಯಾಂಡಿನ ಯುನೆಸ್ಕೋದ ಲರ್ಲಿಂಗ್ ಟೆಕ್ನಾಲಜಿ ಯುನಿವರ್ಸಿಟಿಯ ಪ್ರೊಫೆಸರ್ ಡಾ.ಫಿಯಟ್‌ಕಾಮರ್ ತಿಳಿಸಿದರು.
ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರದಂದು ಕಂಪ್ಯೂಟರ್ ಸೈನ್ಸ್ ಹಾಗೂ ಇನ್ಪೊಮೇಷನ್ ಸೈನ್ಸ್ ವಿಭಾಗದಿಂದ ಆಯೋಜಿಸಿಲಾಗಿದ್ದ ಅಂತರರಾಷ್ಟ್ರೀಯ ಮಟ್ಟದ ‘ಸಾಫ್ಟ್ ವಿಎಫ್ಟಿ ಸಿಸ್ಟಮ್ ಅಂಡ್ ಟೆಕ್ನಾಲಾಜಿ ಎಸ್‌ಎಸ್‌ಐಟಿ ಕಾನ್-2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದತ್ತಾಂಶ ಮತ್ತು ಯಾಂತ್ರೀಕೃತಗೊoಡ ಪ್ರಪಂಚದಲ್ಲಿ, ಅನ್ವೇಷಣೆಗಳ ಪಾತ್ರವು ಹೆಚ್ಚು ನಿರ್ಣಾಯಕ ಎಂದರು.
ತಂತ್ರಜ್ಞಾನ ಮಾಹಿತಿ ವಿನಿಮಯದಂತಹ ಸಮ್ಮೇಳನಗಳು, ಜ್ಞಾನ-ಆಲೋಚನೆಗಳು ಮತ್ತು ಸಂಶೋಧನೆಯ ವಿನಿಮಯಕ್ಕೆ ಪ್ರಮುಖ ವೇದಿಕೆಯಾಗಿಕಾರ್ಯನಿರ್ವಹಿಸುತ್ತವೆ. ಸ್ಫೂರ್ತಿ ಮತ್ತು ಹೊಸ ಪಾಲುದಾರಿಕೆಗಳ ಪೋಷಣೆಗಾಗಿ ಒಂದು ವಿಶಾಲ ಅವಕಾಶವನ್ನು ತಂತ್ರಜ್ಞಾನದ ಭವಿಷ್ಯಜಗತ್ತಿನಾದ್ಯಂತ ದೊರಕಿಸುತ್ತದೆ ಎಂದು ಪ್ರೊಫೆಸರ್ ಡಾ.ಫಿಯಟ್‌ಕಾಮರ್ ತಿಳಿಸಿದರು.
ಸಾಹೇ ವಿವಿಯ ಉಪ ಕುಲಪತಿಗಳಾದ ಡಾ.ಕೆ.ಬಿ.ಲಿಂಗೇಗೌಡ ಮಾತನಾಡಿ, ಅಂತರರಾಷ್ಟ್ರೀಯ ಮಟ್ಟದ ಮಾಹಿತಿ ತಂತ್ರಜ್ಞಾನದ ವಿಚಾರ ಸಂಕಿರಣಗಳು ನಡೆಯುತ್ತಿರುವುದು ಶ್ಲಾಘನೀಯ. ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಮುಂಬರು ದಿನಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಈಗಾಗಲೇ ಇಂಜಿನಿಯರ್ ವಿದ್ಯಾಥಿಗಳು ವಿಶ್ವ ಮಟ್ಟದಲ್ಲಿ ಬೇರೆ ಬೇರೆ ವಿಚಾರದಲ್ಲಿ ಸಾಧನೆ ಮಾಡಿದ್ದು ಇದೀಗ ಎಲೆಕ್ಟ್ರಾನಿಕ್ಸ್, ಇಂಜಿನಿಯರಿoಗ್ ಕಮ್ಯೂನಿಕೇಷನ್ ವಿಭಾಗದಲ್ಲೂ ಮಹತ್ತರವಾದ ಸಾಧನೆಯತ್ತ ದಾಪುಗಾಲು ಹಾಕುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುಆರ್ ಅಂತರರಾಷ್ಟ್ರೀಯ ಬಾಹ್ಯಕಾಶ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಹಿಮಾನಿಸಾನಿ, ಹೆಚ್‌ಓಡಿ ಇಸಿಇ, ಎನ್‌ಎಂಐಟಿ ಡಾ.ಪರಮೇಶಚಾರಿ, ಸಾಹೇ ವಿವಿ ರಿಜಿಸ್ಟಾರ್ ಡಾ.ಎಂ.ಜೆಡ್. ಕುರಿಯನ್, ಎಸ್‌ಎಸ್‌ಐ.ಟಿ ಪ್ರಾಂಶುಪಾಲರಾದ ಎಂ.ಎಸ್.ರವಿಪ್ರಕಾಶ್, ನೂತನ ಸಿದ್ದಾರ್ಥ ಸ್ಕೂಲ್ ಆಫ್ ಇಂಜಿನಿಯರಿoಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಜೀವ್‌ಕುಮಾರ್, ಡೀನ್ ಡಾ.ರೇಣುಕಾಲತಾ, ಪ್ರಾಧ್ಯಾಪಕರಾದ ಡಾ.ಅನ್ನಪೂರ್ಣ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.