ಹೊಳೆನರಸೀಪುರ-ಹೊಳೆನರಸೀಪುರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ತಾ. ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಜವರೇಗೌಡ ಎಂ.ಚುನಾವಣಾಧಿಕಾರಿ ಸಪ್ನ ಕೆ.ಎಚ್. ಅವರಿಗೆ ನಾಮಪತ್ರ ಸಲ್ಲಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 24 -29ನೇ ಅವಧಿಗೆ ತಾಲೂಕು ಹಾಗೂ ಯೋಜನಾ ನಿರ್ದೇಶಕರ 33 ನಿರ್ದೇಶಕರ ಸ್ಥಾನಗಳಿಗೆ ಅಕ್ಟೋಬರ್ 28ರ ಸೋಮವಾರ ಬೆಳಗ್ಗೆ 9 ಗಂಟೆಯಿoದ ಸಂಜೆ 4 ಗಂಟೆ ತನಕ ಚುನಾವಣೆ ನಡೆಯಲಿದೆ.
ಅಕ್ಟೋಬರ್ 18 ಕಡೆಯ ದಿನವಾದ ಕಾರಣದಿಂದ ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ಅಭ್ಯರ್ಥಿಗಳು, ಸೂಚಕರು ಹಾಗೂ ಬೆಂಬಲಿಗರಿoದ ಸರ್ಕಾರಿ ನೌಕರರ ದಟ್ಟಣೆ ಹೆಚ್ಚಿತ್ತು.
ಇಲ್ಲಿಯವರೆಗೂ ಒಟ್ಟು 49 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
26 ಇಲಾಖೆಗಳ 1759 ಮತದಾರರು ಇದ್ದು, ಕೃಷಿ ಇಲಾಖೆಯಿಂದ ಒಬ್ಬರು, ಕಂದಾಯ ಇಲಾಖೆ 2, ಲೋಕೋಪಯೋಗಿ, ಜಲಸಂಪನ್ಮೂಲ ಹಾಗೂ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ 1, ಪಂಚಾಯತ್ ರಾಜ್ ಇಂಜಿನಿಯರಿoಗ್, ಪಿಎಂಜಿಎಸ್‌ವೈ ಯೋಜನೆ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲೀಕರಣ ಇಲಾಖೆ 1, ಸರ್ಕಾರಿ ಪ್ರಾಥಮಿಕ ಶಾಲೆಗಳು 3, ಸರ್ಕಾರಿ ಪ್ರೌಢಶಾಲೆಗಳು 1, ಸರ್ಕಾರಿ ಪದವಿ ಪೂರ್ವ ಕಾಲೇಜುಗಳು 2, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 4, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ 2, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಸಹಕಾರ ಸಂಘಗಳ ಲೆಕ್ಕಪರಿಶೋಧನೆ ಹಾಗೂ ಸಾಂಖ್ಯಿಕ ಇಲಾಖೆ 2, ಸಮಾಜ ಕಲ್ಯಾಣ, ಹಿಂದುಳಿದ, ಅರಣ್ಯ, ತೋಟಗಾರಿಕೆ, ಖಜಾನೆ, ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳು, ನೋಂದಣಿ, ಮುದ್ರಾಂಕ, ನ್ಯಾಯಾಂಗ, ಸೇರಿದಂತೆ ಒಟ್ಟು 33 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಅ.19 ರಂದು ನಾಮಪತ್ರ ಪರಿಶೀಲನೆ ಹಾಗೂ ನಂತರ ಅರ್ಹ ಅಭ್ಯರ್ಥಿಗಳ ಹೆಸರು ಪ್ರಕಟಣೆ ಹಾಗೂ ಅ.21 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಅ. 28ರ 4 ಗಂಟೆಯ ಚುನಾವಣೆಯ ನಂತರ ಮತ ಏಣಿಕೆ ಹಾಗೂ ಫಲಿತಾಂಶ ಪ್ರಕಟಣೆ ಮಾಡಲಾಗುತ್ತದೆ.
—————--ವಸಂತ್ ಕುಮಾರ್