ಬೇಲೂರು-ಬಸ್ ನಿಲ್ದಾಣದ ಪ್ರವೇಶ ದ್ವಾರದ ಬಳಿ ದೊಡ್ಡ ಗುಂಡಿಯೊಂದು ನಿರ್ಮಾಣವಾಗಿದ್ದು ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಲೇವಡಿ ವ್ಯಕ್ತವಾಗಿದೆ.
ಬೇಲೂರು ನ್ಯೂಸ್ ಎಂಬ ಪ್ರಖ್ಯಾತ ವಾಟ್ಸ್ ಆಪ್ ಗುಂಪಿನಲ್ಲಿ ಬಿಜೆಪಿ ಮುಖಂಡರಾದ ಬಿ ಕೆ ಸುರೇಶ್ ರವರು ಈ ಗುಂಡಿಯ ಫೋಟೋ ತೆಗೆದು ಪೋಸ್ಟ್ ಮಾಡಿ,”ಬೇಲೂರು ಬಸ್ ನಿಲ್ದಾಣದ ಮುಂದೆ ಇದ್ದ ಗುಂಡಿಗೆ ತ್ಯಾಪೆ ಹಾಕಿ 15 ದಿನದಲ್ಲಿ ಕಿತ್ತು ಬಂದಿದೆ.ಈ ಕೆಲಸ ನಿರ್ವಹಿಸಲು ಭಾರತದ ಇಂಜಿನಿಯರ್ ಗಳಿಂದ ಸಾದ್ಯವಾಗುವುದಿಲ್ಲ.ಈಗ ಬೇಲೂರು ವಿಶ್ವ ಪರಂಪರೆ ಪಟ್ಟಿಗೆ ಸೇರಿರುವುದರಿಂದ ವಿಶ್ವ ಮಟ್ಟದಲ್ಲಿ ಟೆಂಡರ್ ಕರೆದು ರಿಪೇರಿ ಮಾಡಿಸುವುದು ಒಳ್ಳೆಯದು. ಇಲ್ಲದಿದ್ದರೆ ಇದು ರಸ್ತೆ ಕಾಮಗಾರಿ ನಡೆಸುವ ಸಂಸ್ಥೆಗೆ ಈ ಗುಂಡಿ ಕಾಮಧೇನು ಇದ್ದಂತೆ ಅಧಿಕಾರಿಗಳು ಪ್ರತಿ ತಿಂಗಳು ಮಣ್ಣು ಹಾಕಿ ಹಣ ತಿನ್ನಲು ಅನೂಕೂಲ ಮಾಡಿಕೊಡಬಹುದು ಎಂದು ಲೇವಡಿ ಮಾಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಪ್ರತಿಕ್ರಿಯಿಸಿರುವ ಜೆ.ಡಿ.ಎಸ್ ಯುವ ಮುಖಂಡ ಸತೀಶ್ ಚಿನ್ನೇನಹಳ್ಳಿ ಯವರು,ಇದು ಒಂದು ಪುರಾತನ ಗುಂಡಿ.ಇದು ಯಾವಗಲು ಮುಚ್ಚಿದ್ದೆ ಕಂಡಿಲ್ಲ.ಹಾಗಾಗಿ ಈ ಗುಂಡಿಯನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸುವುದೆ ಉತ್ತಮ.ಇಲ್ಲಿ ಕೊಡುವ ದುಡ್ಡಿನಿಂದ ಈ ಗುಂಡಿಮುಚ್ಚಲು ಸಾದ್ಯವಿಲ್ಲ.ಹಾಗಾಗಿ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಿದರೆ ಯಾವುದಾದರು ಎನ್ ಜಿ ಓ ದವರು ಸಹಾಯ ಮಾಡಬಹುದು ಎಂದು ಅಧಿಕಾರಿಗಳ ಕಾಲೆಳೆದಿದ್ದಾರೆ.
ವಿಜಯ್ ಎಂಬುವವರು,ನೆಂಟ್ರು ಮನೆಗೆ ಬಂದಾಗ ಕಾಲು ತೊಳೆಯಲು ನೀರು ಕೊಡುವ ಹಾಗೆ ಬಸ್ಸು ಬಸ್ ಸ್ಟಾಂಡ್ ಒಳಗೆ ಬರುವಾಗ ನೀರು ತಾಗಿಸಿ ಬರುವುದಕ್ಕೆ ಬಿಟ್ಟಿರುವುದು ಅಂತ ಕಾಣುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಒಟ್ಟಾರೆ,ಬೇಲೂರಿನ ಒಳಗೆ ಪ್ರವಾಸಿಗರ ಮುಂದೆ ಮರ್ಯಾದೆ ಕಳೆದುಕೊಳ್ಳಲು ಸಾಕಷ್ಟು ಸಮಸ್ಯೆಗಳಿದ್ದು ಅದರಲ್ಲೊಂದು ಈ ಗುಂಡಿಯು ಆಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಇನ್ನು ಮುಂದಾದರು ನಿದ್ರೆಯಲ್ಲಿರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಅದು-ಇದು ಸಬೂಬು ಹೇಳದೆ ಈ ಗುಂಡಿಯನ್ನು ಶಾಶ್ವತವಾಗಿ ಮುಚ್ಚುವ ಮನಸ್ಸು ಮಾಡುತ್ತಾರಾ? ಕಾದುನೋಡಬೇಕಾಗಿದೆ.