ಬೇಲೂರು-ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ದೀನ-ದಲಿತರ,ದಮನಿತರ ಏಳ್ಗೆಗಾಗಿ ಶ್ರಮಿಸುತ್ತಿದ್ದು ಜನರ ನಾಡಿ ಮಿಡಿತಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಿದೆ.ನಾನು ಅಧಿಕಾರ ರಹಿತವಾಗಿದ್ದರು ತಾಲೂಕಿನ ಅಭಿವೃದ್ಧಿಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ಶ್ರೀ ಶನೇಶ್ವರ ಸ್ವಾಮಿ ಹಾಗು ತಾಲೂಕಿನ ಮತದಾರರ ಆಶೀರ್ವಾದದಿಂದ ಮುಂದಿನ ದಿನಗಳಲ್ಲಿ ತಾಲೂಕಿನ ಶಾಸಕನಾಗುವ ಕನಸ್ಸನ್ನು ಕಂಡಿದ್ದೇನೆ ಎಂದು ಮಾಜಿ ಸಚಿವರಾದ ಗಂಡಸಿ ಶಿವರಾಂ ತಿಳಿಸಿದರು.
ಬಿ.ಹೊಸಹಳ್ಳಿ (ಬಳ್ಳೂರು ಪಾಳ್ಯ) ಗ್ರಾಮದ ಶ್ರೀ ಶನೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬೇಲೂರು ತಾಲೂಕಿನ,ರಾಜ್ಯದ ಜನರ ಒಳಿತಿಗಾಗಿ ನಾನು ದೇವರಲ್ಲಿ ಪ್ರಾರ್ಥಿಸಿದ್ದೇನೆ.ಇಲ್ಲಿನ ಜನರ ಎಲ್ಲ ಕಷ್ಟ ಸುಖಗಳಿಗೂ ನಾನು ಸ್ಪಂದಿಸುತ್ತಿದ್ದು ಯಾವುದೇ ಸಮಸ್ಯೆಗಳಿದ್ದರೂ ನನ್ನನ್ನು ಭೇಟಿ ಮಾಡುವಂತೆ ತಿಳಿಸಿದರು.
ಹಿಂದುಳಿದಿರುವ ಬೇಲೂರು ತಾಲೂಕನ್ನು ಅಭಿವೃದ್ಧಿಯ ಪಥದತ್ತ ಒಯ್ಯುವುದು ನನ್ನ ಪರಮೋಚ್ಚ ಉದ್ದೇಶವಾಗಿದ್ದು ತನ್ನನು ಬೆಂಬಲಿಸುವಂತೆ ಅವರು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷರಾದ ಎಂ ಆರ್ ವೆಂಕಟೇಶ್ ಹಾಗು ತಾಲೂಕು ಕಾಂಗ್ರೆಸ್ ಅಧ್ಯಕ್ಷರಾದ ನಿಶಾಂತ್ ಎಂ ಜೆ ಇತರರು ಉಪಸ್ಥಿತರಿದ್ದರು.