ಮೈಸೂರು-43 ನೇ ಕರ್ನಾಟಕ ರಾಜ್ಯ ಮಕ್ಕಳ ತಜ್ಞರ ಸಮ್ಮೇಳನವು ಬನ್ನಿಮಂಟಪದ ಜೆ.ಎಸ್.ಎಸ್ ವೈದ್ಯಕೀಯ ಕಾಲೇಜಿನ ಶ್ರೀ ರಾಜೇಂದ್ರ ಸಭಾಂಗಣದಲ್ಲಿ ನಡೆಯಿತು.
ಐ.ಎ.ಪಿ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಜಿ.ವಿ.ಬಸವರಾಜರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕರ್ನಾಟಕ ರಾಜ್ಯ ಐ.ಎ.ಪಿ ಅಧ್ಯಕ್ಷರಾದ ಡಾ.ಎಸ್.ಎನ್.ಮೋತಿ ಮತ್ತು ಕಾರ್ಯದರ್ಶಿ ಡಾ.ಶಶಿಕಿರಣ್ ಅವರು ತಮ್ಮ ಅಧಿಕಾರಾವಧಿಯಲ್ಲಿಐ.ಎ.ಪಿ ಮಾಡಿದ ಸಾಧನೆಯ ಮುಖ್ಯಾಂಶಗಳು ಮತ್ತು ಐ.ಎ.ಪಿ ಕರ್ನಾಟಕದ ಭವಿಷ್ಯದ ಭರವಸೆಯ ಕುರಿತು ಮಾತನಾಡಿದರು.
ಮುಖ್ಯ ಅತಿಥಿ ಶ್ರೀ ದೇಶಿಕೇಂದ್ರ ಸ್ವಾಮೀಜಿ ಅವರು ಮಕ್ಕಳ ಸಮುದಾಯಕ್ಕೆ ನೀಡಿದ ಸಂದೇಶವನ್ನು ಜೆಎಸ್ಎಸ್ ಎಹೆಚ್ಇಆರ್ನ ಪ್ರೊಚಾನ್ಸಲರ್ ಡಾ.ಬಿ.ಸುರೇಶ್ ಓದಿ ತಿಳಿಸಿದರು.
ಆದಿಚುಂಚನಗಿರಿ ವೈದ್ಯಕೀಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ಎ.ಶೇಖರ್ ಈ ಸಂದರ್ಭದಲ್ಲಿ ಮಾತನಾಡಿ ಯುವ ಪೀಳಿಗೆಗೆ ಸಂದೇಶವನ್ನು ನೀಡಿದರು.
ಡಾ ಎಚ್ ಬಸವನಗೌಡಪ್ಪ, ಪ್ರಾಂಶುಪಾಲ ಜೆಎಸ್ಎಸ್ ವೈದ್ಯಕೀಯ ಕಾಲೇಜು ಇ ಸ್ಮರಣಿಕೆ ಬಿಡುಗಡೆ ಮಾಡಿದರೆ,ಐಎಪಿ ಉಪಾಧ್ಯಕ್ಷರಾದ ಡಾ.ಸಿಂಗಾರವೇಲು 25ನೇ ವರ್ಷದ ಪೆರಿನಾಟಾಲಜಿ ನಿಯತಕಾಲಿಕ ಬಿಡುಗಡೆ ಗೊಳಿಸಿದರು.
ಡಾ.ಎಸ್.ಎನ್.ಮೋತಿ ಸಮ್ಮೇಳನದ ಬುಲೆಟಿನ್ ಅನ್ನು ಅನಾವರಣಗೊಳಿಸಿದರು.
ಐ.ಎ.ಪಿ ಮೈಸೂರು ಅಧ್ಯಕ್ಷ ಡಾ.ಪ್ರಶಾಂತ್ ಎಂ.ಆರ್,ಮೈಸೂರು ಜಿಲ್ಲಾ ಕಾರ್ಯದರ್ಶಿ ಡಾ.ಶಂಕರ್ ಪ್ರಸಾದ್. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೆ ಸಂದರ್ಭದಲ್ಲಿ 2025 ರ ಐ.ಎ.ಪಿ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ಡಾ ಎಸ್ ವಿ ಪಾಟೀಲ್ ಅವರಿಗೆ ಡಾ ಎಸ್ ಎನ್ ಮೋತಿ ಅವರು ಅಧಿಕಾರ ಹಸ್ತಾಂತರಿಸಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಸುಮಾರು 1000ಕ್ಕೂ ಹೆಚ್ಚು ಮಕ್ಕಳ ತಜ್ಞರು ಭಾಗವಹಿಸಿದ್ದರು.
————————–—ಮಧುಕುಮಾರ್