ಕೊರಟಗೆರೆ/ಸಂಕೇನಹಳ್ಳಿ-ಗೊಲ್ಲ-ದ-ಲಿತ ಸಮುದಾಯಗಳ ನಡುವೆ ಜಮೀನಿಗಾಗಿ ಸಂಘರ್ಷ…!!?
ಕೊರಟಗೆರೆ:-ನೀಲಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಸಂಕೇನಹಳ್ಳಿ ಗ್ರಾಮದ ಸರ್ವೆ ನಂ.15 ಮತ್ತು 16ರಲ್ಲಿನ 25 ಎಕರೆಗೂ ಅಧಿಕ ಸರಕಾರಿ ಗೋಮಾಳಕ್ಕೋಸ್ಕರ ಅದೇ ಗ್ರಾಮದ ಹತ್ತಾರು ದಲಿತ ಮತ್ತು ಗೊಲ್ಲ ಸಮುದಾಯದ ಕುಟುಂಬಗಳ ನಡುವೆ ಕಳೆದ 40ವರ್ಷದಿಂದ ಸತತವಾಗಿ ತಿಕ್ಕಾಟ ನಡೆಯುತ್ತಲೆ ಬರುತ್ತಿದೆ.
ಹಿಂದಿನಿಂದಲೂ ಜಮೀನಿನ ಮೇಲೆ ಸಾಮ್ಯ ಸಾದಿಸಲು ಹೋರಾಟ ನಡೆಸಿದ್ದ ದಲಿತ ಹಾಗು ಗೊಲ್ಲ ಸಮುದಾಯದವರು ಮಂಗಳವಾರ ಜಮೀನಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೇರಿ ಹಕ್ಕನ್ನು ಪ್ರತಿಪಾದಿಸಿಕೊಳ್ಳಲು ಮುಂದಾದ ಘಟನೆ ನಡೆದಿದೆ.
ಗೊಲ್ಲ ಸಮುದಾಯದವರು ಕುರಿ ಹಾಗು ಜಾನುವಾರುಗಳೊಂದಿಗೆ ಬಂದು ಜಾನುವಾರುಗಳ ಮೇವಿಗಾಗಿ ಜಮೀನನ್ನು ಉಳಿಸಿಕೊಡಬೇಕು ಎಂದು ಪ್ರತಿಭಟನೆ ನಡೆಸಿದರೆ ದಲಿತರು ಬದುಕು ಕಟ್ಟಿಕೊಳ್ಳಲು ನಮಗೆ ಜಮೀನು ನೀಡಿ ಎಂದು ಬಿ ಆರ್ ಅಂಬೇಡ್ಕರ್ ಭಾವಚಿತ್ರವನ್ನು ಹಿಡಿದು ಘೋಷಣೆ ಕೂಗಿದರು.
ಸಂಕೇನಹಳ್ಳಿಯ ಈ ಜಮೀನಿಗಾಗಿ 1993ರಲ್ಲಿ ಗ್ರಾಮದ ಇಪ್ಪತ್ತಕ್ಕೂ ಅಧಿಕ ದಲಿತ ಕುಟುಂಬಗಳು ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸಿವೆ.ದಲಿತ ಕುಟುಂಬಗಳಿಗೆ ಅತ್ತ ಸರಕಾರ ಸಾಗುವಳಿ ಚೀಟಿ ಕೊಡುತ್ತಿಲ್ಲ ಇತ್ತ ಗ್ರಾಮಸ್ಥರು ಉಳುಮೆ ಮಾಡಲು ದಾರಿಯನ್ನೇ ಬಿಡುತ್ತಿಲ್ಲ.
ಇದೊಂದು ವಿವಾದ ದೊಡ್ಡ ಸಂಘರ್ಷಕ್ಕೆ ಕಾರಣವಾಗುವ ಮುನ್ನ ತಾಲೂಕು ಆಡಳಿತ ಹಾಗು ಶಾಸಕರು ಮದ್ಯ ಪ್ರವೇಶಿಸಿ ಎರಡು ಸಮುದಾಯಗಳಿಗೂ ನ್ಯಾಯ ಕೊಡಿಸುವ ಕೆಲಸವನ್ನು ತುರ್ತು ಮಾಡಬೇಕಿದೆ.
ಬೆಟ್ಟ-ಗುಡ್ಡಗಳೇ ದಲಿತರಿಗೆ ಸ್ಮಶಾನ..
ಸಂಕೇನಹಳಿಯಲ್ಲಿ 75ಕ್ಕೂ ಅಧಿಕ ದಲಿತ ಕುಟುಂಬಗಳಿವೆ.ಮೃತಪಟ್ಟ ದಲಿತರಿಗೆ ಬೆಟ್ಟಗುಡ್ಡ,ತಿಪ್ಪೆ,ಚರಂಡಿಯೇ ಸ್ಮಶಾನವಾಗುತ್ತಿವೆ.ಕಂದಾಯ ಇಲಾಖೆಯಿಂದ 2021ರಲ್ಲಿ 20ಗುಂಟೆ ಜಮೀನು ಸ್ಮಶಾನಕ್ಕಾಗಿ ಮಂಜೂರಾಗಿದ್ದರು ಅದಿನ್ನು ಗ್ರಾಮ ಪಂಚಾಯತಿಗೆ ಹಸ್ತಾಂತರವಾಗಿಲ್ಲ.ಕೃಷಿ ಮಾಡಲು ಆಸಕ್ತರಿರುವ ಬಡ ಕುಟುಂಬಗಳಿಗೆ ಜಮೀನುಗಳಿಲ್ಲ
ದೇಹದಲ್ಲಿ ಶಕ್ತಿ ಇರುವವರೆಗೂ ಇತರ ಮನೆಗಳಲ್ಲಿ ಕೂಲಿ ಮಾಡಿ ಬದುಕಬಹುದು ಆಮೇಲೆ ಜೀವನ ಹೇಗೆ ?
ಈ ಜಮೀನಿನಲ್ಲಿ ಸರಕಾರ ನಮಗೂ ಪಾಲು ಕೊಟ್ಟರೆ ಹೊಟ್ಟೆಗೆ ಬೇಕಾದದ್ದನ್ನು ಬೆಳೆದುಕೊಳ್ಳಬಹುದು..
———————————————-ಸತೀಶ್
ಕೋಟ್ ಬಳಸಿ ಸಾರ್..
ದಲಿತ ಕುಟುಂಬಗಳು ಗೋಮಾಳದ ಜಮೀನಿನಲ್ಲಿ ಉಳುಮೆ ಮಾಡಲು ಸಂಕೇನಹಳ್ಳಿಯ ಗೊಲ್ಲ ಸಮುದಾಯದ ಜನರು ಬೀಡುತ್ತಿಲ್ಲ.ನಾವು ಬಿತ್ತನೆ ಮಾಡಿದರೇ ನಮ್ಮ ಹೊಲಕ್ಕೆ ಕುರಿಗಳನ್ನ ಬೀಡ್ತಾರೇ.40ವರ್ಷದಿಂದ ಜಮೀನು ಮತ್ತು ಸ್ಮಶಾನಕ್ಕಾಗಿ ದಲಿತ ಕುಟುಂಬಗಳು ಹೋರಾಟ ನಡೆಸುತ್ತೀವೆ.
————–ಮಾರುತಿ. ದಲಿತ ಯುವಕ. ಸಂಕೇನಹಳ್ಳಿ
ನಮ್ಮ ಪೂರ್ವಜರ ಮನವಿಯಂತೆ ಜಾನುವಾರು ಮೇವಿಗಾಗಿ 30ಎಕರೇ ಮೀಸಲಿಟ್ಟು ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೇ.ಕೆಪಿಟಿಸಿಎಲ್ ಘಟಕದಿಂದ ಸಮಸ್ಯೆ ಮತ್ತೇ ಉದ್ಬವವಾಗಿದೆ.ನಮಗೇ ಗೋಮಾಳದಲ್ಲಿ ಕುರಿ-ದನ ಮೇಯಿಸಲು ಬಿಡುತ್ತಿಲ್ಲ.ನಮಗೂ ಅಧಿಕಾರಿವರ್ಗ ಅನುಕೂಲ ಕಲ್ಪಿಸಬೇಕಿದೆ.
——————–ಚಿಕ್ಕರಾಮಯ್ಯ. ಗೊಲ್ಲ ಸಮುದಾಯದ ಯುವಕ. ಸಂಕೇನಹಳ್ಳಿ.
ಗೋಮಾಳದ ಜಮೀನನ್ನ ಜಾನುವಾರುಗಳ ಮೇವಿಗಾಗಿ ಜಿಲ್ಲಾಧಿಕಾರಿ 1974ರಲ್ಲಿ ಮೀಸಲು ಇಟ್ಟಿದ್ದಾರೆ.ಸಾಗುವಳಿ ಚೀಟಿಗಾಗಿ ಸಂಕೇನಹಳ್ಳಿ ರೈತರಿಂದ ಅರ್ಜಿಗಳು ಬಂದಿವೆ.ನಾನೇ ಖುದ್ದಾಗಿ ಜಮೀನಿಗೆ ಬೇಟಿ ನೀಡಿ ಸಂಕೇನಹಳ್ಳಿ ಗ್ರಾಮಸ್ಥರ ಜೊತೆ ಮಾತನಾಡಿ ಸಮಸ್ಯೆ ಸರಿಪಡಿಸುತ್ತೇನೆ.
ಕೆ ಮಂಜುನಾಥ,ತಹಶೀಲ್ದಾರ್,ಕೊರಟಗೆರೆ
ವರದಿ-ಶ್ರೀನಿವಾಸ್ ಕೊರಟಗೆರೆ