ಗೆಂಡೆಹಳ್ಳಿ-ಕಾಫಿ ಬೆಳೆಗಾರರ ಸಂಘದ ವತಿಯಿಂದ ಎಫ್.ಪಿ.ಓ ಸ್ಥಾಪನೆಯ ಬಗ್ಗೆ ಕಾಫಿ ಮಂಡಳಿ ಅಧ್ಯಕ್ಷರಾದ ಎಂ.ಜಿ ದಿನೇಶ್ ಹಾಗು ಡಾ,ನವೀನ್ ರವರ ನೇತೃತ್ವದಲ್ಲಿ ಸಮಾಲೋಚನಾ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಕಾಫಿ ಮಂಡಳಿ ಅಧ್ಯಕ್ಷರಾದ ಎಂ.ಜಿ ದಿನೇಶ್ ಹಾಗು ಡಾ,ನವೀನ್ ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಭೆಯಲ್ಲಿ ರಾಷ್ಟ್ರೀಯ ಕಾಫಿ ಮಂಡಳಿ ಸದಸ್ಯರಾದ ಜಿ.ಕೆ ಕುಮಾರ್,ಗೆಂಡೆಹಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ ರತನ್,ಹಾಸನ ಬೆಳೆಗಾರರ ಸಂಘದ ನಿರ್ದೇಶಕರಾದ ಜಿ.ಬಿ ವೆಂಕಟೇಶ್ ಸ್ಥಳೀಯ ಬೆಳೆಗಾರ ಸಂಘದ ಗೌರವಾಧ್ಯಕ್ಷರಾದ ಮಂಜೇಗೌಡ,ಕಾರ್ಯದರ್ಶಿ ವಿಕಾಸ್, ಉಪಾಧ್ಯಕ್ಷರಾದ ಅಗ್ಗಡಲು ದೀಪು,ಹೆಚ್.ಡಿ.ಪಿ.ಎ ನಿರ್ದೇಶಕರಾದ ಸಿದ್ದೇಗೌಡ ಹಾಗು ಸಂಘದ ಪದಾಧಿಕಾರಿಗಳು ಮತ್ತು ಸ್ಥಳೀಯ ಬೆಳೆಗಾರರು ಹಾಜರಿದ್ದರು.