ಎಚ್.ಡಿ.ಕೋಟೆ:ಮಾದಾಪುರ ಗ್ರಾಮ-ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ ನೆರವೇರಿಸಿದ ಶಾಸಕ ಅನಿಲ್ ಚಿಕ್ಕಮಾದು

ಎಚ್.ಡಿ.ಕೋಟೆ:ಮಾದಾಪುರ ಗ್ರಾಮದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ನೂತನವಾಗಿ ನಿರ್ಮಿಸಲಾಗಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿದರು.

ಸರಗೂರಿನಲ್ಲಿ ತಾಯಿ ಮಕ್ಕಳ ಆಸ್ಪತ್ರೆ ಮತ್ತು ಎಚ್.ಡಿ. ಕೋಟೆ ಪಟ್ಟಣಕ್ಕೆ ಮಾತ್ರ ಸೀಮಿತವಾದ ಆಸ್ಪತ್ರೆಯನ್ನು ನಿರ್ಮಿಸಲು ರೂಪುರೇಷೆ ಮಾಡಿಕೊಳ್ಳಲಾಗುತ್ತಿದೆ.ಜೆಎಲ್‌ಆರ್ ವತಿಯಿಂದ ಮಾದಾಪುರ ಆರೋಗ್ಯ ಕೇಂದ್ರಕ್ಕೆ ಸುಸಜ್ಜಿತ ಆಂಬುಲೆನ್ಸ್ ನೀಡಲಾಗುವುದು ಎಂದರು.

ಅದೇ ರೀತಿ ಮಾದಾಪುರದಿಂದ ಕೆ.ಬೆಳತ್ತೂರು ಮಾರ್ಗದ ರಸ್ತೆಗೆ ಮುಂದಿನ 15 ದಿನದಲ್ಲಿ ಭೂಮಿ ಪೂಜೆ ನೆರವೇರಲಿದೆ.ಮೈಸೂರು ಮಾನಂದವಾಡಿ ಸಂಪರ್ಕ ಕಲ್ಪಿಸಲು ರಸ್ತೆಗೆ ನಾಲ್ಕು ಪಥಗಳ ರಸ್ತೆಯನ್ನು ನಿರ್ಮಿಸಲು ಯೋಜನಾ ವರದಿ ತಯಾರಾಗುತ್ತಿದ್ದು, ಕೇಂದ್ರ ಸಚಿವರಾದ ನಿತಿನ್ ಗಡ್ಕರಿಯವರಿಗೆ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಟಿ. ರವಿಕುಮಾರ್ ಮಾತನಾಡಿ ಮೈಸೂರು ಮಾನಂದವಾಡಿ ರಸ್ತೆಯಲ್ಲಿರುವ ಮಾದಾಪುರ ಗ್ರಾಮದ ವ್ಯಾಪ್ತಿಯಲ್ಲಿ 9 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದ್ದ ಹಿನ್ನಲೆ ಈ ಭಾಗಕ್ಕೆ ಒಂದು ಉತ್ತಮ ಆಸ್ಪತ್ರೆಯ ಅಗತ್ಯವಿದ್ದ ಕಾರಣ ₹1.80 ಲಕ್ಷಗಳ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರ್ಮಿಸಲಾಗಿದ್ದು, ಶಸ್ತ್ರಚಿಕಿತ್ಸಾ ಕೊಠಡಿ, ಪುರುಷರ ವಾರ್ಡ್, ಮಹಿಳೆಯರ ವಾರ್ಡ್, ಹೆರಿಗೆ ಕೊಠಡಿ, ಮೂರು ಹಾಸಿಗೆಯುಳ್ಳ ಪ್ರತ್ಯೇಕ ವಾರ್ಡ್‌ಗಳುಳ್ಳ ಕೊಠಡಿಗಳನ್ನು ನಿರ್ಮಿಸಲಾಗಿದೆ, ಕಚೇರಿ, ಲ್ಯಾಬ್, ಶೌಚಾಲಯ ಸೇರಿದಂತೆ ಉತ್ತಮ ರೀತಿಯಲ್ಲಿ ನಿರ್ಮಾಣಗೊಂಡಿದ್ದು ಉತ್ತಮ ಸೇವೆ ನೀಡಲಿದೆ ಎಂದರು.

————–ಶಿವು ಕೋಟೆ

Leave a Reply

Your email address will not be published. Required fields are marked *

× How can I help you?