ಮೂಡಿಗೆರೆ:ಶಿಥಿಲಾವಸ್ಥೆಗೆ ತಲುಪಿರುವ ಶಾಲಾ ಕಾಲೇಜುಗಳ ಕಟ್ಟಡಗಳು ಮೈಮೇಲೆ ಕುಸಿದು ಬೀಳುವ ಭಯದ ವಾತಾವರಣದಲ್ಲಿ ವಿಧ್ಯಾರ್ಥಿಗಳು ಶಿಕ್ಷಣ ಪಡೆಯಬಾರದೆಂಬ ಉದ್ದೇಶದಿoದ ಅಂತಹ ಎಲ್ಲ ಶಾಲಾ ಕಾಲೇಜು ಕಟ್ಟಡಗಳ ಬದಲಿಗೆ ಹೊಸತಾಗಿ ಕಟ್ಟಡ ನಿರ್ಮಿಸಲು ಸರ್ಕಾರ ಮುಂದಾಗಿದೆ ಎಂದು ಶಾಸಕಿ ನಯನಾ ಮೋಟಮ್ಮ ತಿಳಿಸಿದರು.
ಅವರು ಬುಧವಾರ 50 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಿರುವ ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಶಿಲಾನ್ಯಾಸ ನೆರವೇರಿಸಿ ಮಾತನಾಡಿ 50ರಿಂದ 60 ವರ್ಷದ ಹಿಂದೆ ನಿರ್ಮಿಸಲಾದ ಶಾಲಾ ಕಾಲೇಜು ಕಟ್ಟಡಗಳಲ್ಲಿ ಇದುವರೆಗೂ ಶೈಕ್ಷಣಿಕ
ಚಟುವಟಿಕೆಗಳು ನಡೆದಿದೆ.ಬಹುತೇಕ ಹಳೆಯ ಕಟ್ಟಡಗಳು ಈಗ ಶಿಥಿಲಗೊಂಡಿವೆ.ಅoತಹ ಕಟ್ಟಡಗಳನ್ನು ಗುರುತಿಸಿ ಅಗತ್ಯವಿದ್ದಲ್ಲಿ ತೆರೆವುಗೊಳಿಸಿ ಹೊಸ ಕಟ್ಟಡ ನಿರ್ಮಿಸಲಾ ಗುವುದು.
ಜೊತೆಗೆ ದುರಸ್ತಿಗೊಳಿಸಬಹುದಾದ ಹಂತದಲ್ಲಿರುವ ಕಟ್ಟಡದ ದುರಸ್ತಿ ಕಾರ್ಯವೂ ಮಾಡಲಾಗಿದೆ.ಭಾರಿ ಮಳೆಯಿಂದಾಗಿ ಕೆಲ ಶಾಲಾ ಕಟ್ಟಡಗಳು ಕುಸಿದ ಕಾರಣ ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಶಿಕ್ಷಣ ಇಲಾಖೆಯಿಂದ ಈ ಬಾರಿ ನೂತನ ಕಟ್ಟಡ ನಿರ್ಮಿಸಲು
ಅನುದಾನ ಬಿಡುಗಡೆಯಾಗಿದೆ.ಶಿಕ್ಷಣ ಸಂಸ್ಥೆಗಳ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆಸಿದಲ್ಲಿ ಸಹಿಸುವುದಿಲ್ಲ. ಮಳೆಯ ನೀರು ಸೋರಿಕೆಯಾಗದಂತೆ ಉತ್ತಮ ಗುಣಮಟ್ಟದ ಕೆಲಸವಾ ಗಬೇಕು.ಕಟ್ಟಡದ ಛಾವಣಿ ತಲೆಮೇಲೆ ಬೀಳುವ ಭಯದ ವಾತಾವರಣದಲ್ಲಿ ವಿಧ್ಯಾರ್ಥಿಗಳು ಶಿಕ್ಷಣ ಪಡೆಯುವಂತಾಗಬಾರದು. ಕಳಪೆ ಕಾಮಗಾರಿಯಾಗದಂತೆ ಗುಣಾತ್ಮಕ ಕಾಮಗಾರಿ ನಡೆಸುವಂತೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು ಎಂದು ಗುತ್ತಿಗೆದಾರ ಮತ್ತು ಅಧಿಕಾರಿಗಳನ್ನು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಪ.ಪಂ.ಸದಸ್ಯರಾದ ಕೆ.ವೆಂಕಟೇಶ್,ಹೊಸ್ಕೆರೆ ರಮೇಶ್, ಎಂ.ಎ.ಹoಝ, ನಾಮನಿರ್ಧೇಶಿತ ಸದಸ್ಯರಾದ ಅಜ್ಮಲ್, ಮಾಜಿ ಸದಸ್ಯ ಟಿ.ಎ.ಮದೀಶ್, ಪ.ಪೂ ಕಾಲೇಜು ಪ್ರಾಚಾರ್ಯ ಪೂರ್ಣೇಶ್, ಕಾಲೇಜು ಅಭಿವೃದ್ದಿ ಸದಸ್ಯರಾದ ಯಾಕೂಬ್ ಗೋಣೀಗದ್ದೆ,ಕುನ್ನಹಳ್ಳಿ ರವಿ, ನಗರ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಜೈನ್,ಲೋಕೋಪಯೋಗಿ ಎಇಇ ಚೆನ್ನಕೇಶವ,
ಗುತ್ತಿಗೆದಾರ ಸಚಿನ್ ಮತ್ತಿತರರಿದ್ದರು.
—————-ವಿಜಯ್ ಕುಮಾರ್