ರಾಮನಾಥಪುರ-ಮಹಿಳೆಯರು ತಮ್ಮ ಮನೆ ಮುಂದೆ ತುಳಸಿಗಿಡ ನೆಟ್ಟು ಪ್ರತಿ ನಿತ್ಯ ಪೂಜಿಸಬೇಕು.ಈ ಮೂಲಕ ನಮ್ಮ ಸಂಸ್ಕೃತಿ,ಸಂಸ್ಕಾರವನ್ನು ಪಾಲಿಸುವುದರ ಜೊತೆಗೆ ಅದನ್ನು ತಮ್ಮ ಮುಂದಿನ ಪೀಳಿಗೆಗೂ ಮುಂದುವರೆಯುವಂತೆ ನೋಡಿಕೊಳ್ಳಬೇಕು ಎಂದು ರಾಘವೇಂದ್ರ ಮಠದ ವ್ಯವಸ್ಥಾಪಕರು ವೆ. ಕನಕಾಚಾರ್ಯರು ತಿಳಿಸಿದರು.
ರಾಮನಾಥಪುರ ಶ್ರೀ ರಾಘವೇಂದ್ರ ಮಠದಲ್ಲಿ ಗುರುವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಶ್ರೀ ರಾಘವೇಂದ್ರಸ್ವಾಮಿ ಉತ್ಸವ ಮೂರ್ತಿ ಉತ್ಸವ,ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನೆರೆದಿದ್ದ ಭಕ್ತರಿಗೆ ಆಶೀರ್ವಚನ ನೀಡಿದರು.
ದೇವಾಲಯಗಳ ಅಭಿವೃದ್ದಿಗೆ ಪ್ರತಿಯೊಬ್ಬರು ಸಹಕರಿಸಬೇಕು.ಸಮಾಜದಲ್ಲಿ ಭಕ್ತಿ ಧರ್ಮ ಧಾರ್ಮಿಕ ಪ್ರಜ್ಞೆ ಮೂಡಿಸುವುದಕ್ಕಾಗಿ ಶ್ರೀ ರಾಘವೇಂದ್ರಸ್ವಾಮಿಗಳು ಅವತರಿಸಿದ್ದರು.ಸನಾತನ ಧರ್ಮದ ಏಳಿಗೆಗಾಗಿ ಅಂದೇ ಅವರು ಹಲವು ಯೋಜನೆಗಳ ರೂಪಿಸಿದ್ದರು.ಸನಾತನ ಧರ್ಮದ ಉಳಿವಿಗಾಗಿ ನಾವು ನೀಡುವ ಸಣ್ಣ-ಪುಟ್ಟ ಕೊಡುಗೆಗಳೇ ಶ್ರೀಗಳಿಗೆ ಅರ್ಪಿಸುವ ಭಕ್ತಿ ಕಾಣಿಕೆಗಳಾಗಿವೆ ಎಂದರು.
ಈ ಸಂದರ್ಭದಲ್ಲಿ ಭಾಗವಹಿಸಿದ್ದ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.
——-ಶಶಿಕುಮಾರ್ ಅರಕಲಗೂಡು