ಹಾಸನ-ನಗರದ ಸರ್ಕಾರಿ ಕಲಾ,ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು -ಸ್ವಾಯತ್ತ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶಾಂತ ಪಿ.ಆರ್ ಅವರು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟಿನಿಂದ ಕುಲಪತಿಗಳಿಗೆ ದತ್ತವಾದ ಅಧಿಕಾರಕ್ಕನುಗುಣವಾಗಿ ಮತ್ತು ಪರೀಕ್ಷಾ ಮಂಡಳಿಯ ಶಿಫಾರಸ್ಸಿನ ಮೇರೆಗೆ ಪಿ.ಹೆಚ್.ಡಿ ಪದವಿ ಪಡೆದಿದ್ದಾರೆ.
ಇವರು ಮೈಸೂರಿನ ಮಹಾರಾಜ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ.ಜಿ.ಹೆಚ್. ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ “ಕರ್ನಾಟಕದ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳಾ ಚುನಾಯಿತ ಪ್ರತಿನಿಧಿಗಳು ವಿಶೇಷವಾಗಿ ಹಾಸನ ಜಿಲ್ಲೆಯ ಒಂದು ಅಧ್ಯಯನ” ಎಂಬ ಮಹಾಪ್ರಬಂಧವನ್ನು ರಾಜ್ಯಶಾಸ್ತ್ರ ವಿಷಯದಲ್ಲಿ ಪಿ.ಹೆಚ್.ಡಿ ಪದವಿಗಾಗಿ ಅಂಗೀಕರಿಸಲಾಗಿದೆ.
ಶಾಂತ ಪಿ.ಆರ್ ಅವರು ಹಾಸನ ತಾಲ್ಲೂಕು ಕಸಬಾ ಹೋಬಳಿ, ಪಿರಮನಹಳ್ಳಿ ಗ್ರಾಮದ ನಿವೃತ್ತ ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ ಪೆಕ್ಟರ್ ದಿ. ರಂಗೇಗೌಡ ಪಿ ಹಾಗೂ ಪ್ರೇಮಮ್ಮ ಹೆಚ್.ಆರ್. ಅವರ ಪುತ್ರಿ. ನಂದೀಶ್ ಅವರ ಪತ್ನಿ.ಕಾಲೇಜಿನ ಪ್ರಾಂಶುಪಾಲರು ಸಿಬ್ಬಂದಿ ವರ್ಗದವರು ಕುಟುಂಬದವರು ಅಭಿನಂದಿಸಿದ್ದಾರೆ.