ತುಮಕೂರು-ತುಮಕೂರು ತಾಲ್ಲೂಕು ಮತ್ತು ನಗರ ಸವಿತಾ ಸಮಾಜ,ತುಮಕೂರು ಜಿಲ್ಲಾ ಸವಿತಾ ಸಮಾಜ ಯುವಪಡೆ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಕ್ಷೌರಿಕರ ದಿನಾಚರ ಣೆಯನ್ನು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು,
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ರಾಮಕೃಷ್ಣ ಸೇವಾಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಗಳು ನೆರವೇರಿಸಿದರು.
ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಸ್ವಾಮೀಜಿಗಳು, ಸವಿತಾ ಸಮಾಜದವರು ಮೊದಲಿಗಿಂತಲೂ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯ ಕಡೆಗೆ ಸಾಗುತ್ತಿದ್ದಾರೆ.ಅದಕ್ಕೆ ತಾಜಾ ಉದಾಹರಣೆ ಇಂದು ಸವಿತಾ ಸಮಾಜದ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಾ ಪುರಸ್ಕಾರವಾಗಿದೆ.
ಸವಿತಾ ಸಮಾಜವು ಹಿಂದಿನ ಕಾಲದಲ್ಲಿ ವಿದ್ಯಾಭ್ಯಾಸದಿಂದ ದೂರವಿದ್ದರು.ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ವಿದ್ಯಾಬ್ಯಾಸದ ಕಡೆಗೆ ಹೆಚ್ಚು ಒಲವು ತೋರಿರುವುದು ಬಹಳ ಸಂತೋಷಕರ ಸಂಗತಿ.ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಅತ್ಯುನ್ನುತ ಶ್ರೇಣಿಗಳಲ್ಲಿ ಉತ್ತೀರ್ಣರಾಗುತ್ತಿರುವುದನ್ನು ಗಮನಿಸಿದರೆ ಸವಿತಾ ಸಮಾಜದ ಮಕ್ಕಳು ಆಧುನಿಕತೆ ಕಡೆ ಮುಖ ಮಾಡಿರುವುದಲ್ಲದೇ ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಸಹ ಅಲಂಕರಿಸಾಲು ಹೊರಟಿರುವುದು ಸ್ವಾಗತಾರ್ಹ ವಿಷಯವಾಗಿದೆ ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸ್ವದೇಶಿ ವಿಶ್ವಣ್ಣರವರು ಮಾತನಾಡಿ, ನಮ್ಮ ಸವಿತಾ ಸಮಾಜದವರು ಕುಲ ಕಸುಬಿನ ಜೊತೆಗೆ ಆಧುನಿಕತೆಯ ಕಡೆಗೂ ಸಹ ಗಮನಹರಿಸಬೇಕು.ಜೊತೆಗೆ ನಮ್ಮ ಜಾತಿಯ ಹೆಸರು ಹೇಳುವುದರಲ್ಲಿ ಯಾವುದೇ ನಾಚಿಕೆ ಮತ್ತು ಹಿಂಜರಿಕೆ ಪಡಬಾರದು,ನಮ್ಮ ಜಾತಿ ನಮಗೆ ಹೆಮ್ಮೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಟ್ವೆಲ್ರಂಗನಾಥ್ರವರು ತಮ್ಮ ಅಧ್ಯಕ್ಷೀಯ ಭಾಷಣವನ್ನು ಮಾಡುತ್ತಾ, ನಮ್ಮ ಸಮಾಜವು ಪ್ರತೀ ಹೋಬಳಿ ಮಟ್ಟದಲ್ಲಿ ಸಂಘಟನೆ ಯಾಗಬೇಕು.ನಮ್ಮ ಸಂಘದ ವತಿಯಿಂದ ಸುಮಾರು 100 ಜನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡುತ್ತಿರುವುದರೊಂದಿಗೆ ಸಂಗೀತ, ನೃತ್ಯ,ಕುಸ್ತಿ, ಅಬಾಕಸ್, ಕರಾಟೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವವರನ್ನು ಸನ್ಮಾನಿಸುತ್ತಿರುವುದು ನಮ್ಮ ಸುದೈವವಾಗಿದೆ ಎಂದರು.
ಇತ್ತೀಚೆಗೆ ನಮ್ಮ ಸಮುದಾಯವು ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ. ಇದು ಸ್ವಾಗತಾರ್ಹ ವಿಷಯವಾಗಿದೆ ಎಂದು ಹೇಳಿದರು.ನಮ್ಮ ಸಮಾಜದ ಕುಲ ಕಸಬನ್ನು ಹಲವಾರು ಜನ ಆಧುನಿಕರಣ ಪಡಿಸಿಕೊಂಡು ತಮ್ಮ ಉದ್ಯಮವನ್ನು ಗಣನೀಯವಾಗಿ ಬೆಳಸಿಕೊಳ್ಳುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಸರ್ಕಾರದಿಂದ ಹಲವಾರು ಸಾಲ ಸೌಲಭ್ಯಗಳು ದೊರೆಯುತ್ತಿವೆ. ಈ ಸೌಲಭ್ಯಗಳು ನಮ್ಮ ಸಮಾಜದ ಎಷ್ಟೋ ಜನರಿಗೆ ಗೊತ್ತಿಲ್ಲ ಅದಕ್ಕಾಗಿ ನಮ್ಮ ಸಂಘಟನೆಯಿoದ ತುಮಕೂರು ನಗರದ ಗಾರ್ಡನ್ ರಸ್ತೆಯಲ್ಲಿ ಸವಿತಾ ಸಮಾಜದ ಜಿಲ್ಲಾ ಸಂಪರ್ಕ ಕೇಂದ್ರವನ್ನು ತೆರೆದಿದ್ದು ಇದರ ಸದುಪಯೋಗವನ್ನು ನಮ್ಮ ಸಮಾಜದ ಪ್ರತಿಯೊಬ್ಬರೂ ಸಹ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಾರ್ಮಿಕ ಇಲಾಖೆಯ ಅಧಿಕಾರಿಯಾದ ಕೆ.ತೇಜಾವತಿರವರು ಮಾತನಾಡಿ, ನಮ್ಮ ಇಲಾಖೆಯಿಂದ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ, ಇಲಾಖೆಯಿಂದ ನೀಡಲಾಗುವ ಕಾರ್ಮಿಕರ ಕಾರ್ಡ್, ಇ-ಶ್ರಮ್ ಕಾರ್ಡ್
ಮಾಡಿಸಿಕೊಂಡoತಹವರಿಗೆ ವಿಮಾ ಸೌಲಭ್ಯ, ಸಾಲ ಸೌಲಭ್ಯ, ಕಾರ್ಮಿಕರ ಮಕ್ಕಳಿಗೆ ಅನುಕೂಲಕರವಾಗುವಂತಹ ವಿವಿಧ ಯೋಜನೆಗಳು ಜಾರಿಯಲ್ಲಿದ್ದು ಅದನ್ನು ನೀವುಗಳು ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾಧಿಕಾರಿಗಳಾದ ಸೋನಿಯಾ ವರ್ಣೇಕರ್ರವರು ಮಾತನಾಡಿ, ನಮ್ಮ ಇಲಾಖೆಯ ವತಿಯಿಂದ ಹಾಸ್ಟಲ್ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಲಾಗುತ್ತಿದ್ದು, ಇದಕ್ಕೆ ನಿಮ್ಮ ಸಮಾಜದ ಸಮುದಾಯ
ಭವನಗಳನ್ನು ಬಳಸಿಕೊಂಡು ನಮ್ಮ ಇಲಾಖೆಯ ಸಹಕಾರವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡಸೇನೆ ಜಿಲ್ಲಾಧ್ಯಕ್ಷರಾದ ಧನೀಯಾ ಕುಮಾರ್, ಸ್ಪೂರ್ತಿ ಡೆವೆಲಪರ್ಸ್ ಮಾಲೀಕರಾದ ಎಸ್.ಪಿ.ಚಿದಾನಂದ್, ವಿ3 ವೆಂಚರ್ಸ್ ,ಮಾಲೀಕರಾದ ರವೀಶ್, ಬಿಜೆಪಿ ಓಬಿಸಿ ಘಟಕದ ಅಧ್ಯಕ್ಷರಾದ ಹನುಮಂತರಾಜು, ಹರಿಪ್ರಸಾದ್, ಸವಿತಾ ಸಮಾಜದ ರಾಜ್ಯಾ
ಕಾರ್ಯಧ್ಯಕ್ಷರಾದ ಕಿರಣ್ ಕುಮಾರ್ ಎಸ್, ಸವಿತಾ ಸಮಾಜದ ಮುಖಂಡರಾದ ಸುಪ್ರೀಂ ಸುಬ್ಬಣ್ಣ, ಜಿಲ್ಲಾ ಪ್ರತಿನಿಧಿ ನಾರಾಯಣ್,ಪ್ರತಿನಿಧಿ ಸುರೇಶ್, ರಾಜ್ಯ ಸವಿತಾ ಸಮಾಜದನಿರ್ದೇಶಕರಾದ ಹೆಚ್.ಡಿ.ರಾಮು, ಯುವ ಘಟಕದ ರಾಜ್ಯಧ್ಯಕ್ಷರಾದ ರವಿಕುಮಾರ್, ಸವಿತಾರತ್ನ ಪುರಸ್ಕೃತರಾದ ಲಕ್ಷ್ಮಿ ನಾರಾಯಣ್,ಒ.ಕೆ.ರಾಜು, ರಮೇಶ್ (ಗುಬ್ಬಿ), ಲೋಕೇಶ್ (ತುರುವೇಕೆರೆ), ನೀಲಕಂಠ(ಪಾವಗಡ), ಉಮೇಶ್ (ಕೊರಟಗೆರೆ), ಪ್ರದೀಪ್ (ಮಧುಗಿರಿ), ಹೇಮಂತ್(ಕುಣಿಗಲ್), ಉಮೇಶ್, ವರದರಾಜು, ಪ್ರವೀಣ್, ಪುನೀತ್, ಶ್ರೀಧರ್, ಪವನ್, ಯಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.