ಕೊರಟಗೆರೆ:-ಪಟ್ಟಣ ಪಂಚಾಯಿತಿ ನೂತನ ಸ್ಥಾಯಿ ಸಮಿತಿ ಅದ್ಯಕ್ಷರಾಗಿ ಹೇಮಲತ ಮಂಜುನಾಥ್‍ರವರು ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣ ಪಂಚಾಯತಿಯಲ್ಲಿ ಅದ್ಯಕ್ಷೆ ಅನಿತರವರ ಅದ್ಯಕ್ಷತೆಯಲ್ಲಿ ಶುಕ್ರವಾರದಂದು ನಡೆದ ವಿಶೇಷ ಸಭೆಯಲ್ಲಿ ಸ್ಥಾಯಿ ಸಮಿತಿ ಅದ್ಯಕ್ಷರನ್ನಾಗಿ 12 ವಾರ್ಡಿನ ಕಾಂಗ್ರೆಸ್ ಪಕ್ಷದ ಸದಸ್ಯೆ ಹೇಮಲತ ಮಂಜುನಾಥ್ ರವರನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರರವರ ಲಿಖಿತ ಸೂಚನೆ ಮೇರೆಗೆ ಸರ್ವಾನುಮತದಿಂದ ಆಯ್ಕೆಮಾಡಲಾಯಿತು.
ಜೊತೆಗೆ ಕಾಂಗ್ರೆಸ್ ಸದಸ್ಯರಾದ ಕೆ.ಆರ್.ಓಬಳರಾಜು, ನಾಗರಾಜು, ಜೆ.ಡಿ.ಎಸ್ ಪಕ್ಷದ ಪುಟ್ಟನರಸಯ್ಯ, ಬಿ.ಜೆ.ಪಿಯ ಪ್ರದೀಪ್‍ಕುಮಾರ್ ರವರನ್ನು ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಪ.ಪಂ ನಲ್ಲಿ ಒಟ್ಟು 15 ಸದಸ್ಯರ ಬಲಾಬಲವಿದ್ದು,ಆಯ್ಕೆ ಪ್ರಕ್ರಿಯೆಯ ಸಮಯದಲ್ಲಿ 13ಜನ ಸದಸ್ಯರುಗಳಷ್ಟೇ ಹಾಜರಿದ್ದರು.
ಆಯ್ಕೆ ಪ್ರಕ್ರಿಯೆಯ ಸಮಯವನ್ನು ಸದಸ್ಯರಿಗೆ ತಿಳಿಸಿಲ್ಲ.ಎಂದು ಜೆ.ಡಿ.ಎಸ್ ಮತ್ತು ಬಿ.ಜೆ.ಪಿ ಸದಸ್ಯರು ಅಕ್ಷೇಪ ವ್ಯಕ್ತಪಡಿಸಿ ಸ್ವಲ್ಪ ಸಮಯ ಸಭೆಯಿಂದ ಹೊರನಡೆದರು.ನಂತರ ಪಟ್ಟಣ ಪಂಚಾಯಿತಿ ಅದ್ಯಕ್ಷೆ ಅನಿತರವರು ಎಲ್ಲರನ್ನು ಸಮಾದಾನಗೊಳಿಸಿ ಕರೆತಂದು ಸ್ಥಾಯಿಸಮಿತಿ ಅದ್ಯಕ್ಷ ಸದಸ್ಯರ ಆಯ್ಕೆಯನ್ನು ಸುಗಮಗೊಳಿಸಿದರು.
ಸ್ಥಾಯಿಸಮಿತಿ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಹೇಮಲತ ಸುದ್ದಿಗಾರರೊಂದಿಗೆ ಮಾತನಾಡಿ,ನನ್ನ ಆಯ್ಕೆಗೆ ಮುಖ್ಯವಾಗಿ ಕಾರಣರಾದ ಕ್ಷೇತ್ರದ ಶಾಸಕರು ಮತ್ತು ಗೃಹಸಚಿವರಾದ ಡಾ.ಜಿ.ಪರಮೇಶ್ವರ ರವರಿಗೆ ನನ್ನ ವಂದನೆಗಳನ್ನು ತಿಳಿಸುತ್ತೇನೆ.ನನ್ನ ಆಯ್ಕೆಗೆ ಸಹಕರಿಸಿದ ಪಟ್ಟಣಪಂಚಾಯಿತಿ ಅದ್ಯಕ್ಷರು ಮತ್ತು ಉಪಾದ್ಯಕ್ಷರಿಗೆ ಸದಸ್ಯರುಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಪಟ್ಟಣದ ಮೂಲಭೂತ ಸೌಕರ್ಯ ಅಭಿವೃದಿಗೆ ಪಕ್ಷಾತೀತವಾಗಿ ಎಲ್ಲರೊಂದಿಗೆ ಒಟ್ಟುಗೂಡಿ ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಉಮೇಶ್, ಉಪಾದ್ಯಕ್ಷರಾದ ಹುಸೇನ್ ಸದಸ್ಯರುಗಳಾದ ಎ.ಡಿ.ಬಲರಾಮಯ್ಯ, ಕಾವ್ಯಶ್ರೀರಮೇಶ್, ಭಾರತಿಸಿದ್ದಮಲಪ್ಪ, ಕೆ.ಎನ್.ಲಕ್ಷ್ಮೀನಾರಾಯಣ್, ನಟರಾಜು, ನಂದೀಶ್, ಮಂಜುಳ ಗೋವಿಂದರಾಜು, ಫಯಾಜ್ ಅಹಮದ್, ಅಧಿಕಾರಿಗಳಾದ ಹುಸೇನ್, ತುಳಸಿ, ವೇಣುಗೋಪಾಲ್, ಶೈಲೇಂದ್ರ, ಸಿಬ್ಬಂದಿಗಳಾದ ನಾಗರತ್ನಮ್ಮ, ಸಾವಿತ್ರಮ್ಮ, ವೆಂಕಟೇಶ್ ಹಾಜರಿದ್ದರು.
————-ಶ್ರೀನಿವಾಸ್ ಕೊರಟಗೆರೆ