ಚಿಕ್ಕಮಗಳೂರು-ಜೆ.ಸಿ.ಐ ಭಾರತ ವಲಯ 14ರ ಅಧ್ಯಕ್ಷರಾಗಿ ಚಿಕ್ಕಮಗಳೂರಿನ ವಿಜಯಕು ಮಾರ್ ಆಯ್ಕೆಯಾಗಿದ್ದು ಮಲೆನಾಡಿಗೆ ಹೊಸ ಗರಿಮೆ ತಂದಿದ್ದಾರೆ.
ಮೈಸೂರಿನಲ್ಲಿ ನಡೆದ ವಲಯ ಸಮ್ಮೇಳನದಲ್ಲಿ ಜೆ.ಸಿ.ಐ ಚಿಕ್ಕಮಗಳೂರು ಮಲ್ನಾಡ್ ಘಟಕದಿಂದ ಪ್ರಪ್ರಥಮ ಬಾರಿಗೆ ವಲಯ ಅಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಿದ್ದ ವಿಜಯ್ ಕುಮಾರ್ 2025 ನೇ ಸಾಲಿನ ವಲಯ ಅಧ್ಯಕ್ಷರಾಗಿ ಚುನಾಯಿತರಾದರು.
2013ರಲ್ಲಿ ಚಿಕ್ಕಮಗಳೂರು ಜೆ.ಸಿ.ಐ ಗೆ ಸೇರ್ಪಡೆಯಾಗಿದ್ದು 2020 ರಲ್ಲಿ ಚಿಕ್ಕಮಗಳೂರು ಘಟಕದ ಅಧ್ಯಕ್ಷರಾಗಿ 2021 ರಲ್ಲಿ ವಲಯ ಉಪಾಧ್ಯಕ್ಷರಾಗಿ 2022 ರಲ್ಲಿ ವಲಯ ಕಾರ್ಯದರ್ಶಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದ ಅನುಭವ ಅಲ್ಲಿನ ಕಾರ್ಯವೈಖರಿ
ವಿಜಯಕು ಮಾರ್ ರನ್ನು ವಲಯ ಅಧ್ಯಕ್ಷರಾಗಿ ಆಯ್ಕೆಯಾಗುವ ಮಟ್ಟಕ್ಕೆ ಕರೆದೊಯ್ದಿದೆ.
ಜೆ.ಸಿ.ಐ 14ರ ವಲಯ ಅಧ್ಯಕ್ಷರಾದ ಆಶಾ ಜೈನ್ ರವರಿಂದ ಅಧಿಕಾರ ಸ್ವೀಕರಿಸಿದ ವಿಜಯಕುಮಾರ್ ಸದಸ್ಯನಿಂದ ವಲಯ ಅಧ್ಯಕ್ಷರವರೆಗೂ ಕೈಹಿಡಿದು ನಡೆಸಿದ ತಂಡದ ಸದಸ್ಯರು ಹಾಗೂ ಆಯ್ಕೆಗೆ ಸಹಕರಿಸಿದ ವಲಯ ಪೂರ್ವ ಅಧ್ಯಕ್ಷರು ಹಾಗೂ ಹಿರಿಯರನ್ನು ನೆನೆದು ಧನ್ಯವಾದ ಸಲ್ಲಿಸಿದರು.
ಚುನಾವಣ ಅಧಿಕಾರಿಯಾಗಿ ಜೆ .ಸಿ ಸರವಣ, ನಾಮಪತ್ರ ಕಮಿಟಿಯ ಅಧ್ಯಕ್ಷೆ ಯಶಸ್ವಿನಿ, ಸದಸ್ಯರಾದ ಸಮತ, ಜೆ. ಸಿ ಭರತ್, ಜೆ. ಸಿ ಕುನಾಲ್ ಚುನಾವಣಾ ಕಾರ್ಯ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಜೆ.ಸಿ.ಐ ಭಾರತದ ರಾಷ್ಟ್ರೀಯ ಪೂರ್ವ ನಿರ್ದೇಶಕರಾದ ಜೆ. ಸಿ ದೇವರಾಜ್, ರಾಷ್ಟ್ರೀಯ ಪೂರ್ವ ಉಪಾಧ್ಯಕ್ಷರಾದ ಅಧ್ಯಕ್ಷರಾದ ಜೆ.ಎಫ್.ಎಸ್ ಭರತ್ ಆಚಾರ್ಯ, ಜೆ. ಸಿ. ಐ ಸೆನೇಟರ್ ವಿಕಾಸ್ ಗೂಗ್ಲಿಯ, ರಾಷ್ಟ್ರೀಯ ಉಪಾಧ್ಯಕ್ಷರಾದ ಐಎಫ್ಎಸ್ ಕುಮಾರ್, ನರೇನ್ ಕಾರ್ಯಪ್ಪ, ಐಎಫ್ಎಸ್ ರಂಗಸ್ವಾಮಿ, ವಲಯ ಪೂರ್ವ ಅಧ್ಯಕ್ಷರಾದ ಜೆ ಸಿ ಬದರೀಶ್, ಜೆ. ಸಿ ಜಯಚಂದ್ರ, ಜೆ. ಸಿ ದೇವಿ ಪ್ರಸಾದ್, ಜೆ .ಸಿ ಮಧೋಷ್ ಪೂವಯ್ಯ, ಜೆ.ಸಿ ಚಿಕ್ಕಮಗಳೂರು ಮಲ್ನಾಡ್ ಘಟಕದ ಸಂಸ್ಥಾಪಕ ಅಧ್ಯಕ್ಷ ಅನಿಲ್ ಆನಂದ್, ಅಧ್ಯಕ್ಷೇ ಪುಷ್ಪ ವಿಜಯ್, ಹಾಗೂ ಘಟಕದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.