ಹೊಳೆನರಸೀಪುರ:ತಾಲ್ಲೂಕು ಸರಕಾರಿ ನೌಕರರ ಸಂಘದ ನಿರ್ದೇಶಕರ 32 ಸದಸ್ಯರ ಸ್ಥಾನಗಳಲ್ಲಿ 6 ಸ್ಥಾನಗಳಿಗಾಗಿ ಸೋಮವಾರ ಚುನಾವಣೆ ನಡೆಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ 3 ಸ್ಥಾನ,ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯ 1 ಸ್ಥಾನ, ಭೂ ಮಾಪನಾ ಇಲಾಖೆಯ 1 ಸ್ಥಾನ, ಸರಕಾರಿ ಪಾಲಿಟೆಕ್ಣಿಕ್ ನ ಒಂದು ಸ್ಥಾನಕ್ಕೆ ಚುನಾವಣೆ ನಡೆಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 3 ಸ್ಥಾನಕ್ಕೆ 6 ಅಭ್ಯರ್ಥಿಗಳಿದ್ದು 632ಮತದಾರರಿದ್ದರೆ, ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯ 1 ಸ್ಥಾನಕ್ಕೆ ಇಬ್ಬರು ಸ್ಪರ್ದಿಸಿದ್ದು 65 ಜನ ಮತದಾರರಿದ್ದಾರೆ. ಭೂಮಾಪನ ಇಲಾಖೆ 1 ಸ್ಥಾನಕ್ಕೆ ಇಬ್ಬರು ಸ್ಪರ್ದಿಸಿದ್ದು 20ಜನ ಮತದಾರರಿದ್ದಾರೆ. ಸರಕಾರಿ ಪಾಲಿಟೆಕ್ನಿಕ್ ನ 1 ಸ್ಥಾನಕ್ಕೆ 3 ಅಭ್ಯರ್ಥಿಗಳು ಸ್ಪರ್ದಿಸಿದ್ದು 30 ಜನ ಮತದಾರರಿದ್ದಾರೆ ಎಂದು ಚುನಾವಾಣಾಧಿಕಾರಿ ಸಪ್ನ ವಿವರಿಸಿದ್ದಾರೆ.
33 ನಿರ್ದೇಶಕರ ಸ್ಥಾನಗಳ ಪೈಕಿ ಈಗಾಗಲೇ 26 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿದೆ. ಮೀನುಗಾರಿಕೆ, ತೂಕ ಮತ್ತು ಆಳತೆ ಇಲಾಖೆಗೆ ಮೀಸಲಿದ್ದ ಒಂದು ಸ್ಥಾನಕ್ಕೆ ಒಬ್ಬರೂ ನಾಮಪತ್ರ ಸಲ್ಲಿಸದ ಕಾರಣ ಉಳಿಕೆ 6 ಸ್ಥಾನಗಳಿಗೆ ಸೋಮವಾರ ಬಿರುಸಿನ ಚುನಾವಣೆ ನಡೆಯಿತು. ಈ ಚುನಾವಣೆ ಯಾವುದೇ ವಿಧಾನಸಭಾ ಚುನಾವಣೆಗೂ ಕಡಿಮೆ ಇಲ್ಲದಂತೆ ನಡೆದಿದ್ದು ಎರಡೂ ಗುಂಪಿನ ಸದಸ್ಯರು ಕಳೆದೆರೆಡು ದಿನಗಳಿಂದ ಮತದಾರರ ಓಲೈಕೆಗೆ ಬೇಕಾದ ಎಲ್ಲಾ ಕಸರತ್ತುಗಳನ್ನೂ ಮಾಡಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ಶಿಕ್ಷಕರೊಬ್ಬರು ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆಯಿಂದ ನಡೆದ ಚುನಾವಣೆಯಲ್ಲಿ ಶಿಕ್ಷಕರ ಕ್ಷೇತ್ರದಿಂದ ಬಿ.ವಿ. ನಾಗರಾಜು, ಎಚ್.ಕೆ. ಮಂಜುನಾಥ್, ಉಮೇಶ್ ಗೆಲುವು ಸಾಧಿಸಿದ್ದರೆ ಇವರ ಸಮೀಪ ಪ್ರತಿಸ್ಪರ್ದಿಗಳಾದ ಉದಯಕುಮಾರ್, ನಾಗರತ್ನ ಚಂದ್ರಶೇಖರ್ ಪರಾಭವಗೊಂಡಿದ್ದಾರೆ.
ಪಾಲಿಟೆಕ್ನಿಕ್ ವಿಭಾಗದಲ್ಲಿ ಶಿವಕುಮಾರ್, ಸಾರ್ವಜನಿಕ ಕ ಶಿಕ್ಷಣ ಇಲಾಖೆ ಕಚೇರಿಯಿಂದ ಸಂತೋಷ್ ಕುಮಾರ್ , ಭೂಮಾಪನಾ ಇಲಾಖೆಯಿಂದ ವಿರೇಶ್ ಗೆಲುವು ಸಾಧಿಸಿದ್ದಾರೆ.
——————-ವಸಂತ್ ಕುಮಾರ್