ಹೊಳೆನರಸೀಪುರ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ಯಿಂದ ಸಂಘದ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸಲಾಗುತ್ತಿದೆ

ಹೊಳೆನರಸೀಪುರ:ತಾಲ್ಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯಿಂದ ಸಂಘದ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ತಾಲ್ಲೂಕು ಯೋಜನಾಧಿಕಾರಿ ಸತ್ಯನಾರಾಯಣ ವಿವರಿಸಿದರು.

ಮಂಗಳವಾರ ಇಲ್ಲಿನ ಶಾಖಾ ಕಚೇರಿಯಲ್ಲಿ ಸದಸ್ಯರಿಗೆ ಸಂಸ್ಥೆಯ ನಿರಂತರ ಮಾಸ ಪತ್ರಿಕೆ ವಿತರಿಸಿ ಮಾತನಾಡಿ ತಾಲ್ಲೂಕಿನಲ್ಲಿ 2450 ಸ್ವಸಹಾಯ ಸಂಘಗಳಿದ್ದು 19720ಸದಸ್ಯರಿದ್ದಾರೆ. 2023-24 ನೇ ಸಾಲಿನಲ್ಲಿ ಸದಸ್ಯರಿಗೆ 30ಕೋಟಿರೂಗಳ ಸಾಲ ಸೌಲಭ್ಯವನ್ನು ಒದಗಿಸಲಾಗಿದೆ.

ನಮ್ಮ ಊರು ನಮ್ಮ ಕೆರೆ ಯೋಜನೆ ಅಡಿಯಲ್ಲಿ 2022 -23 ನೇ ಸಾಲಿನಲ್ಲಿ ಹಿರಿತಳಾಲು, ಗೆಜ್ಜಿಗನಹಳ್ಳಿ ಕೆರೆಯನ್ನು ಅಭಿವೃದ್ಧಿ ಪಡಿಸಿದ್ದೆವು. 2023 -24 ನೇ ಸಾಲಿನಲ್ಲಿ 10.24 ಎಕರೆ ವಿಸ್ತರ‍್ಣದ ಆಲಗೌಡನಹಳ್ಳಿ ಕೆರೆಯ ಸುಮಾರು 7 ಎಕರೆ ಪ್ರದೇಶದಲ್ಲಿ ಹೂಳು ತುಂಬಿದ್ದು 7.55 ಲಕ್ಷರೂಗಳನ್ನು ವೆಚ್ಚಮಾಡಿ ಹೂಳೆತ್ತಿಸಿದೆವು. ಇದಲ್ಲದೆ ಸ್ವಾಥ್ಯ ಸಂಕಲ್ಪ ಯೋಜನೆ ಅಡಿಯಲ್ಲಿ ದುಶ್ಚಟ ಬಿಡಿಸುವ ಕಾರ್ಯಕ್ರಮ , ತಂಬಾಕು ಸೇರಿದಂತೆ ಮಾಧಕವಸ್ತುಗಳನ್ನು ಸೇವಿಸದಿರಲು ಮಧ್ಯವ್ಯರ್ಜನ ಕಾರ್ಯಕ್ರಮ , ಜ್ಞಾನ ದೀಪ ಯೋಜನೆ ಅಡಿಯಲ್ಲಿ ಶಿಕ್ಷಕರ ಕೊರತೆ ಇರುವ 7 ಶಾಲೆಗಳಿಗೆ ಸಂಸ್ಥೆ ಗೌರವ ಧನ ನೀಡಿ ಶಿಕ್ಷಕರನ್ನು ನೇಮಿಸಿದೆ. ಜನ ಮಂಗಳ ಯೋಜನೆ ಅಡಿಯಲ್ಲಿ ಅಸಹಾಯಕರಿಗೆ ಹಾಸಿಗೆ, ದಿಂಬು, ಕೋಲುಗಳನ್ನು ನೀಡಿದೆ.

ಸುಜ್ಞಾನ ಶಿಷ್ಯವೇತದ ಅಡಿಯಲ್ಲಿ ಸಂಸ್ಥೆಯ ಸದಸ್ಯರ 313 ಬಡ ಮಕ್ಕಳಿಗೆ ಪ್ರತೀ ತಿಂಗಳೂ 1ಸಾವಿರ ರೂಗಳ ಶಿಷ್ಯವೇತನ ನೀಡುತ್ತಿದೆ ಎಂದರು. ಬಡವರು ಡೈರಿ ನೆಡೆಸಲು ಹಣ ಸಹಾಯ ಸ್ಥಳೀಯ ದೇವಸ್ಥಾನಗಳ ಜೀರ್ಣೋದ್ಧ್ಹಾರ ಕಾರ್ಯಕ್ರಮವನ್ನು ಅಯೋಜಿಸಿ ಜನರಿಗೆ ಉಪಯಕ್ತ ಸೇವೆಗಳನ್ನು ಮಾಡುತ್ತಿದೆ ಎಂದರು. ಶಾಖಾ ವ್ಯವಸ್ಥಾಪಕಿ ಪುಫ್ಪಾ ಹಾಗೂ ಸಿಬ್ಬಂದಿ ಜೊತೆಯಲ್ಲಿದ್ದರು.

Leave a Reply

Your email address will not be published. Required fields are marked *

× How can I help you?