ತುಮಕೂರು:ಶ್ರೀ ಸಿದ್ಧಾರ್ಥ ಆಕಾಡೆಮಿ ಆಫ್ ಹೈಯರ್‌ ಎಜುಕೇಜನ್ ವಿಶ್ವವಿದ್ಯಾಲಯದ ‘ಶಿವರಾಜು ಜಿ.ಡಿ’ ಅವರಿಗೆ ಡಾಕ್ಟರೇಟ್ ಪದವಿ

ತುಮಕೂರು:ಪ್ರತಿಷ್ಠಿತ ವಿವಿಗಳಲ್ಲಿ ಒಂದೆoದು ಗುರುತಿಸಿಕೊಂಡಿರುವ ನ್ಯಾಕ್ ಎ + ಶ್ರೇಣಿಯ ಶ್ರೀ ಸಿದ್ಧಾರ್ಥ ಆಕಾಡೆಮಿ ಆಫ್ ಹೈಯರ್‌ಎಜುಕೇಜನ್ (ಸಾಹೇ) ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಸಿವಿಲ್ ವಿದ್ಯಾರ್ಥಿಯಾಗಿ ಅಧ್ಯಯನ ಮಾಡಿ, ಅದೇ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪ ಕರಾಗಿರುವ ಹಾಗು ಎಸ್ಟೇಟ್ ಮ್ಯಾನೇಜರ್ ಆಗಿರುವ ಶಿವರಾಜು ಜಿ ಡಿ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.

ಎಸ್ ಎಸ್ ಐ ಟಿಯ ಸಿವಿಲ್ ವಿಭಾಗದಲ್ಲಿ ಕಳೆದ 7 ವರ್ಷದಿಂದ ಸಹಾಯಕ ಪ್ರಾಧ್ಯಾಪಕರಾಗಿ, ಪ್ರಸ್ತುತ ಎಸ್ಟೇಟ್ ಮ್ಯಾನೇಜರ್ ಆಗಿರುವ ಶಿವರಾಜು ಅವರು ಬೆಂಗಳೂರಿನ ಬಿ.ಎಂ.ಎಸ್ ಕಾಲೇಜ್ ಆಫ್ ಇಂಜಿನಿಯರಿoಗ್‌ನ ಸಂಶೋಧನಾ ಕೇoದ್ರದ ಪ್ರಾಧ್ಯಾಪಕರಾದ ಡಾ.ಆಶಾ ಕೆ ಅವರ ಮಾರ್ಗದರ್ಶನದಲ್ಲಿ ‘ಕಡಿಮೆ ವೆಚ್ಚದ ವಸತಿಗಾಗಿ ಜಿಯೋಪಾಲಿಮರ್ ಸಂಯೋಜನೆಗಳ ಸೂತ್ರೀಕರಣ’ ವಿಷಯ ಕುರಿತ ನಡೆಸಿದ ಸಂಶೋಧನಾ ಪ್ರಬಂಧಕ್ಕೆ ಪಿ.ಎಚ್‌.ಡಿ ಪದವಿ ಸಂದಿದೆ.

ಶಿವರಾಜು ಜಿ ಡಿ ಅವರು ಮೂಲತ: ಮಂಡ್ಯ ಜಿಲ್ಲೆಯ ಗುತ್ತಿಗಾನಹಳ್ಳಿ ಗ್ರಾಮದವರಾಗಿದ್ದು, ಇವರು ಶ್ರೀ ಸಿದ್ಧಾರ್ಥ ಇಂಜಿನಿಯರಿoಗ್ ಕಾಲೇಜಿನಲ್ಲಿ ಕಳೆದ 7ವರ್ಷಗಳಿಂದ ಸಹಾಯಕ ಪ್ರಾಧ್ಯಾಪಕರಾಗಿ ಹಾಗೂ ಎಸ್ಟೇಟ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯ ಮತ್ತು ಅಂತಾರಾಷ್ಟ್ರೀಯಮಟ್ಟದಲ್ಲಿ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ, ಪ್ರಬಂಧಗoಳನ್ನು ಮಂಡಿಸಿದ್ದಾರೆ.

ಡಾ.ಜಿ.ಪರಮೇಶ್ವರ ಅವರಿಂದ ಅಭಿನಂದನೆ:

ವಿ.ಟಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ಶಿವರಾಜು ಅವರನ್ನು ಸಾಹೇ ವಿ.ವಿ ಕುಲಾಧಿಪತಿಗಳಾದ ಸವ್ಯಸಾಚಿ ಡಾ.ಜಿ.ಪರಮೇಶ್ವರ ಹಾಗೂ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಕನ್ನಿಕಾಪರಮೇಶ್ವರಿ
ಅವರು ಅಭಿನಂದಿಸಿದ್ದಾರೆ.

ಸಾಹೇ ವಿವಿಯ ಕುಲಾಧಿಪತಿಗಳ ಸಲಹೆಗಾರರಾದ ಡಾ.ವಿವೇಕ್ ವೀರಯ್ಯ, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್ ಸೇರಿದಂತೆ ಅಂಗ ಸಂಸ್ಥೆಗಳ ಪ್ರಾoಶುಪಾಲರು ಮತ್ತು ಪ್ರಾಧ್ಯಾಪಕರು ಸಹ ಅಭಿನಂದಿಸಿದ್ದಾರೆ.

ಸoಶೋಧನೆಯನ್ನು ಮುಂದುವರಿಸುವ ಆಸಕ್ತಿಯನ್ನು ಪ್ರಚೋದಿಸಿದ ಮತ್ತು ನನಗೆ ನೇರವಾಗಿ ಅಥವಾ ಪರೋಕ್ಷವಾಗಿ ಬೆಂಬಲ ನೀಡಿದ ಮ್ಯಾನೇಜ್‌ಮೆಂಟ್, ಪ್ರಾಂಶುಪಾಲರು, ಪಿಎಚ್‌ಡಿ ಮಾರ್ಗದರ್ಶಕರು,ಪ್ರಾಧ್ಯಾಪಕರು, ಸಾಹೇ ಸಂಶೋಧನಾ ವಿಭಾಗದ ಸಹೋದ್ಯೋಗಿಗಳು,
ಬೋಧಕೇತರ ವಿಭಾಗ ಸೇರಿದಂತೆ ಎಲ್ಲಾ ವಿಭಾಗಗಳಿಗೆ ಧನ್ಯವಾದಗಳನ್ನು ಅರ್ಪಿಸಿರುವ ಶಿವರಾಜು ಅವರು ಸಂಶೋಧನಾ ಕಾರ್ಯದ ಪ್ರಯಾಣದಲ್ಲಿ ನನಗೆ ಬೇಕಾದ ವಿವಿಧ ಮಾಹಿತಿಯನ್ನು ಒದಗಿಸಿದ ಹಾಗೂ ಬೆಂಬಲವಿತ್ತ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

× How can I help you?