ಬೇಲೂರು-ಪಟ್ಟಣದ ಹಳೆ ಯಗಚಿ ಸೇತುವೆ ಬಳಿ ಕೆಲಸ ಮಾಡಲು ಬಂದ ಕಾರ್ಮಿಕರಿಗೆ ಬೆಳಗಿನ ಜಾವ 6-30 ರ ಸಮಯದಲ್ಲಿ ಅಪರೂಪದ ಚಿಪ್ಪು ಹಂದಿಯೊಂದು ಕಾಣಿಸಿದ್ದು ಅದನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಸೇತುವೆ ಬಳಿ ಇರುವ ರಿಂಗ್ ನಿರ್ಮಾಣ ಮಾಡುವ ಕಾರ್ಖಾನೆಗೆ ಕೆಲಸಕ್ಕಾಗಿ ಬಂದ ಕಾರ್ಮಿಕರಾದ ಪುಟ್ಟರಾಜು ಹಾಗೂ ಕೇಶವರವರಿಗೆ ಚಿಪ್ಪಿನ ರೀತಿಯಲ್ಲಿ ವಸ್ತುವೊಂದು ಕಾಣಿಸಿದೆ.
ಬಳಿ ಹೋಗಿ ಅದು ಏನೆಂದು ಪರೀಕ್ಷಿಸಿದಾಗ ಚಿಪ್ಪು ಹಂದಿಯೆಂದು ತಿಳಿದು ಅದನ್ನು ರಕ್ಷಿಸಿ ನಂತರ ದೂರವಾಣಿ ಮೂಲಕ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿ ಅವರ ಸುಪರ್ದಿಗೆ ನೀಡಿದ್ದಾರೆ.
ನಂತರ ಮಾತನಾಡಿದ ಅರಣ್ಯ ಇಲಾಖೆ ಅಧಿಕಾರಿ ಮಂಜೇಗೌಡ ಹಾಗೂ ಯತೀಶ್ ಇದು ಅಪರೂಪದ ಪ್ರಾಣಿ ಈ ಭಾಗದಲ್ಲಿ ಹೆಚ್ಚು ಗೋಚರಿಸುವುದಿಲ್ಲ.ಆಹಾರ ಅರಿಸಿ ಬಂದಿರುವ ಸಾಧ್ಯತೆಗಳಿದ್ದು,ಮೇಲಾಧಿಕಾರಿಗಳ ಸೂಚನೆಯಂತೆ ಅದನ್ನು ಕಾಡಿಗೆ ಬಿಡಲಾಗುತ್ತದೆ ಎಂದು ಮಾಹಿತಿ ನೀಡಿದರು.
——–-ಲೋಹಿತ್