ಬೇಲೂರು-ತಾಲೂಕಿನ ಶಂಭುಗನಹಳ್ಳಿ ಗ್ರಾಮದಲ್ಲಿ ಹೂನಲು ಬೆಳಕಿನ ‘ಭೀಮ ಕಪ್ ವಾಲಿಬಾಲ್’ ಪಂದ್ಯಾವಳಿ ಕಾರ್ಯಕ್ರಮವನ್ನು ಜಾಲಿ ಬಾಯ್ಸ್ ಯುವಕರ ಬಳಗದಿಂದ ಆಯೋಜಿಸಲಾಗಿತ್ತು.
ಈ ಪಂದ್ಯಾವಳಿಯಲ್ಲಿ ಜಿಲ್ಲೆಯ ಹಾಗು ಅಂತರ ಜಿಲ್ಲೆಯ ಸುಮಾರು 27 ತಂಡಗಳು ಭಾಗವಹಿಸಿ ಪ್ರಶಸ್ತಿಗಾಗಿ ಸೆಣೆಸಾಡಿದವು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಟಿ.ಎ.ಪಿ.ಸಿ.ಎಂ.ಎಸ್ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡ ತೀರ್ಥಕುಮಾರ್, ತಾಲೂಕಿನ ಅತಿ ಚಿಕ್ಕ ಗ್ರಾಮವಾದ ಶಂಭುಗನಹಳ್ಳಿಯಲ್ಲಿ ಸಂವಿಧಾನ ಶಿಲ್ಪಿ ಬಾಬಾಸಾಹೇಬರ ನೆನಪಿನಲ್ಲಿ ‘ಭೀಮ ಕಪ್ ವಾಲಿಬಾಲ್’ ಪಂದ್ಯಾವಳಿಯನ್ನು ಆಯೋಜಿಸಿರುವುದು ಅತ್ಯಂತ ಸಂತೋಷ ತಂದಿದೆ ಎಂದರು.
ಮಾನವ ಹಕ್ಕುಗಳ ಹೋರಾಟ ಸಮಿತಿಯ ಹಾಸನ ಜಿಲ್ಲಾಧ್ಯಕ್ಷರಾದ ಎಂ.ಜಿ ನಿಂಗರಾಜ್ ಮಾತನಾಡಿ, ತಾಲೂಕಿನ ಕುಗ್ರಾಮಗಳಲ್ಲಿ ಒಂದಾದ ಶಂಭುಗನಹಳ್ಳಿ ಗ್ರಾಮದಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಆಯೋಜಿಸಿರುವುದು ಪ್ರಶಂಶನೀಯವಾದದ್ದು ಎಂದು ತಿಳಿಸಿದರು.
ಮಾಜಿ ಗ್ರಾಮ ಪಂಚಾಯತ್ ಸದಸ್ಯ ರಂಗನಾಥ್,ಪ್ರಗತಿಪರ ಚಿಂತಕ ರಘ ನಾರಾಯಣಪುರ, ಮಾನವ ಹಕ್ಕು ಹೋರಾಟ ಸಮಿತಿ ತಾಲೂಕು ಕಾರ್ಯದರ್ಶಿ ಲಕ್ಷ್ಮೀನಾರಾಯಣ್,ಪ್ರಾರ್ಥನಾ ಅಕಾಡೆಮಿ ಬಿ.ವಿ.ಸ್ ತಾಲೂಕು ಅಧ್ಯಕ್ಷ ರಾಜು,ದಲಿತ ಮುಖಂಡರಾದ ಭದ್ರಯ್ಯ,ರೇಣುಕಯ್ಯ. ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ಸೇರಿದಂತೆ ಶಂಭುಗನಹಳ್ಳಿ ಯುವಕರು ಮತ್ತು ಗ್ರಾಮಸ್ಥರು ಹಾಜರಿದ್ದರು.
———————ಲೋಹಿತ್