ಬೇಲೂರು-ಹುಟ್ಟು ಹಬ್ಬದ ಪ್ರಯುಕ್ತ ಗಿಡಗಳನ್ನು ನೆಟ್ಟು ಸಮಾಜಕ್ಕೊಂದು ‘ಸಂದೇಶ ಕೊಟ್ಟ ಸಿದ್ದೇಗೌಡ’ರು

ಬೇಲೂರು;ಹುಟ್ಟುಹಬ್ಬವನ್ನು ಹೆಂಡ-ತುಂಡಿನೊಂದಿಗೆ ಆಚರಿಸಿಕೊಳ್ಳುವವರ ಮದ್ಯೆ ಪರಿಸರದ ಉಳಿವಿಗಾಗಿ ಗಿಡಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಳ್ಳುತ್ತಿರುವ ಸಿದ್ದೇಗೌಡರಂತಹ ಸಂತತಿ ನೂರ್ಮಡಿಯಾಗಬೇಕು ಎಂದು ಸುಲೈಮಾನ್ ಹಾರೈಸಿದರು.

ಬಿಕ್ಕೋಡು ರಸ್ತೆಯ ವಿಶ್ವ ಶಾಲಾ ಆವರಣದಲ್ಲಿ ತಾಲೂಕು ಜಾನಪದ ಪರಿಷತ್ ನ ಅಧ್ಯಕ್ಷರಾದ ಸಿದ್ದೇಗೌಡರ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ನಾನು ಸಹ ಸಿದ್ದೇಗೌಡರ ಆಯಸ್ಸು ಹೆಚ್ಚಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿ ಒಂದು ಗಿಡವನ್ನು ನೆಟ್ಟಿದ್ದೇನೆ.ಸಮಾಜ ಇಂತಹ ಸಮಾಜಮುಖಿ ವ್ಯಕ್ತಿಗಳ ಹಿಂಬಾಲಿಸಬೇಕು.ಇವರ ಆದರ್ಶಗಳನ್ನು ಯುವ ಸಮುದಾಯ ಅಳವಡಿಸಿಕೊಳ್ಳಬೇಕು.ಹುಟ್ಟು ಹಬ್ಬದ ದಿನಗಳಂದು ಮೋಜು ಮಸ್ತಿ ನಡೆಸದೆ ಸಿದ್ದೇಗೌಡರ ಹಾಗೆ ಸಮಾಜಕ್ಕೆ ಕೊಡುಗೆ ಕೊಡುವಂತಹ ಕೆಲಸಗಳನ್ನು ಕೈಗೊಳ್ಳಬೇಕು ಎಂದು ಅವರು ಕರೆ ನೀಡಿದರು.

ವಕೀಲರಾದ ಚಂದ್ರು ಮಾತನಾಡಿ ಅತ್ಯಂತ ಸರಳ ಸಜ್ಜನಿಕೆಯ ಸಿದ್ದೇಗೌಡರು ಹಿಂದಿನಿಂದಲೂ ಸಮಾಜದ ಉದ್ದಾರಕ್ಕೆ ತಮ್ಮ ಕೈಲಾದ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ.ತಮ್ಮ ಇಳಿ ವಯಸ್ಸಿನಲ್ಲಿಯೂ ಹುಟ್ಟು ಹಬ್ಬದ ಆಚರಣೆಯನ್ನು ಗಿಡಗಳನ್ನು ನೆಡುವ ಮೂಲಕ ಆಚರಿಸಿಕೊಳ್ಳುತ್ತಿರುವುದು ಮಾದರಿಯ ಕೆಲಸವಾಗಿದೆ. ಇಲ್ಲಿ ನೆರೆದಿರುವ ನಾವುಗಳೆಲ್ಲರೂ ಮುಂದಿನ ದಿನಗಳಲ್ಲಿ ಇವರನ್ನು ಅನುಸರಿಸುವ ಪ್ರತಿಜ್ಞೆ ಮಾಡೋಣ ಎಂದರು.

ಪರಿಸರ ಪ್ರೇಮಿಯಾಗಿ ದಿನನಿತ್ಯ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು,ಯುವ ಪೀಳಿಗೆಗಳಿಗೆ ಉತ್ತಮ ಸಮಾಜ ನಿರ್ಮಾಣ ಮಾಡುವ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿರುತ್ತಾರೆ.ಎಂದಿನಂತೆ ಇವರ ಸಮಾಜಮುಖಿ ಕಾರ್ಯಗಳನ್ನು ಹೀಗೆ ಮುಂದುವರೆಯಲಿ ದೇವರು ಇವರಿಗೆ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಎಂದು ಸಮಾಜ ಸೇವಕ ನೂರ್ ಅಹಮ್ಮದ್ ಹಾರೈಸಿದರು.

ಈ ಸಂದರ್ಭದಲ್ಲಿ ಉಪನ್ಯಾಸಕ ಧನಂಜಯ್,ನರಸಿಂಹ,ಮಸೂದ್ ಪಾಶ,ಶಿಕ್ಷಕ ನಾಗರಾಜ್, ಉಪನ್ಯಾಸಕ ಮೋಹನ್ ಕುಮಾರ್,ಅಹಮದ್ ಹಾಗೂ ಮೋಹನ್ ರವರು ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?