ತುಮಕೂರು:ಯುವಜನತೆಯಲ್ಲಿರುವ ಹೊಸ ಹೊಸ ಐಡಿಯಾಗಳ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರವನ್ನು ಮತ್ತಷ್ಟು ಜನಪರವಾಗಿಸುವ ನಿಟ್ಟಿನಲ್ಲಿ ಶ್ರೀದೇವಿ ಇಂನಿಯರಿoಗ್ ಕಾಲೇಜು ಆಯೋಜಿಸಿರುವ 24 ಗಂಟೆಗಳ ಸುದೀರ್ಘ ಹ್ಯಾಕಥಾನ್ ಪೂರಕವಾಗಿ ಕೆಲಸ ಮಾಡಲಿದೆ ಎಂದು ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಡಾ.ಎಂ.ಆರ್.ಹುಲಿ ನಾಯ್ಕರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಶ್ರೀದೇವಿ ಇಂಜಿನಿಯರಿoಗ್ ಕಾಲೇಜುವತಿಯಿಂದ ಆಯೋಜಿಸಿದ್ದ ರಾಷ್ಟ್ರ ಮಟ್ಟದ 24 ಗಂಟೆಗೆ ಹ್ಯಾಕಥಾನ್‌ಗೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಯುವ ತಂತ್ರಜ್ಞರನ್ನು ಸಮಾಜಮುಖಿಯಾಗಿಸಲು ಇದೊಂದು ಉತ್ತಮ ವೇದಿಕೆಯಾಗಿದೆ.ಹ್ಯಾಕಥಾನ್‌ನಲ್ಲಿ ನೆರೆಯ ಆಂಧ್ರ,ತೆಲಗಾಣ,ತಮಿಳುನಾಡು ಮತ್ತು ಕರ್ನಾಟಕದ ವಿವಿಧ ಇಂಜಿನಿಯರಿoಗ್ ಕಾಲೇಜುಗಳ ಸುಮಾರು 80ಕ್ಕೂ ಹೆಚ್ಚು ತಂಡಗಳು ಭಾಗವಹಿಸುತಿದ್ದು, ಉದ್ದಿಮೆದಾರರು, ತಜ್ಞರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದರು.
ಶ್ರೀದೇವಿ ಸಂಸ್ಥೆಯಿoದ ಹೊರತರುವ ಶ್ರೀದೇವಿ ಅಂತರoಗ ಎಂಬ ಮಾಸ ಪತ್ರಿಕೆ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಸೈಬರ್ ಕ್ರೈಂ ಅಂಡ್ ನಾರ್‌ಕೋಟಿಕ್ ವಿಭಾಗದ ಡಿಐಜಿ ಡಾ.ಪ್ರಣಬ್ ಮೊಹಂತಿ,ಕರೋನ ನಂತರದಲ್ಲಿ ವೈದ್ಯಕೀಯ,ಇoಜಿನಿಯರಿoಗ್,ನರ್ಸಿoಗ್ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.ವೈದ್ಯಕೀಯ ಕ್ಷೇತ್ರವನ್ನು ಇಂಜಿನಿಯ ರಿಂಗ್ ಅವರಿಸಿಕೊಳ್ಳುತ್ತಿದೆ.ಕೃತಕ ಬುದ್ದಿಮತ್ತೆ(ಎಐ)ತಂತ್ರಜ್ಞಾನ ಶರವೇಗದಲ್ಲಿ ಬೆಳೆಯುತ್ತಿದ್ದು,ಈ ಪೈಪೋಟಿ ಎದುರಿಸಲು ಇಂಜಿನಿಯರಿoಗ್ ವಿದ್ಯಾರ್ಥಿಗಳಿಗೆ ಆಳವಾದ ಅಧ್ಯಯನ ಅಗತ್ಯವಾಗಿದೆ.ಒಂದು ಕಾಲದಲ್ಲಿ ಸಾಮಾಜಿಕ ವಿಷಯಗಳಾಗಿದ್ದ ಕೃಷಿ,ಪರಿಸರ,ಆರೋಗ್ಯ ಕ್ಷೇತ್ರಗಳು ತಂತ್ರಜ್ಞಾನದ ವಿಷಯಗಳಾಗಿ ಪರಿವರ್ತನೆ ಹೊಂದಿವೆ.ಎಲ್ಲ ಕ್ಷೇತ್ರಗಳಲ್ಲಿ ಇಂಜಿನಿಯರಿoಗ್ ಆವರಿಸಿಕೊಳ್ಳುತ್ತಿದೆ.ವೈದ್ಯಕೀಯ ವಿಜ್ಞಾನ ಮತ್ತು ಇಂಜಿನಿಯರಿoಗ್ ಒಂದಕ್ಕೊoದು ಪೂರಕವಾಗಿ ಕೆಲಸ ಮಾಡುತ್ತೀವೆ.ಇವುಗಳನ್ನು ಬಳಕೆ ಮಾಡಿಕೊಂಡು ಮೋಸ ಮಾಡುವವರ ಸಂಖ್ಯೆಯೂ ಹೆಚ್ಚಿದೆ. ಸೈಬರ್ ಕ್ರೈಂ ಬಗ್ಗೆ ಯುವಜನರು ಎಚ್ಚರದಿಂದ ಇರಬೇಕೆಂದು ಸಲಹೆ ನೀಡಿದರು.
ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆoಕಟೇಶ್ವರಲು ಮಾತನಾಡಿ,21ನೇ ಶತಮಾನ ಯುವಜನರ ಒಳ್ಳೆಯ ಕಾಲವಾಗಿದೆ.ನಮ್ಮಗಳ ಹಾಗೆ ಹಸಿವು,ಬಡತನದ ಅರಿವು ನಿಮಗಿಲ್ಲ.ಸ್ವಾತಂತ್ರ ಬಂದ ಕಾಲದಲ್ಲಿ ಹಸಿವು, ಬಡತನ ನಿಮೂರ್ಲನೆ ಮೊದಲ ಆದ್ಯತೆಯಾಗಿತ್ತು.ಆದರೆ ಈಗಿನ ಅದ್ಯತೆಗಳು ಬೇರೆಯಾಗಿದೆ. 2047ಕ್ಕೆ ವಿಕಸಿತ ಭಾರತದಲ್ಲಿ ಐದು ಟ್ರಿಯಲನ್ ಎಕಾನಮಿ ಸಾಧಿಸುವ ಮಹತ್ವದ ಗುರಿ ದೇಶದ ಮುಂದಿದೆ. ಇದಕ್ಕೆಪೂರಕವಾಗಿ ಮೇಕ್‌ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ಪರಿಕಲ್ಪನೆಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ.ವಿದ್ಯಾರ್ಥಿಗಳು ಉದ್ಯೋಗದ ಜೊತೆಗೆ,ಸಂಶೋಧನೆಯ ಕಡೆಗೂ ಹೆಚ್ಚಿನ ಒಲವು ತೋರಿಸಬೇಕಿದೆ.ನಿಮ್ಮ ಸಾಧನೆಯ ಹಿಂದೆ ನಿಮ್ಮ ಪೋಷಕರ ತ್ಯಾಗವಿದೆ ಎಂಬುದನ್ನು ಮರೆಯಬಾರದು ಎಂದು ಕಿವಿ ಮಾತು ಹೇಳಿದರು.
ವೇದಿಕೆಯಲ್ಲಿ ತಜ್ಞರಾದ ಜಿತೇಶ್ ಬಜಾಜ್, ರಾಜೇಂದ್ರ ಸಾರಂಗಿ, ಡಾ.ರಮಣ ಹುಲಿನಾಯ್ಕರ್, ಡೈರೆಕ್ಟರ್ ಎಂ.ಎಸ್.ಪಾಟೀಲ್, ಡಾ.ಲಾವಣ್ಯರಮಣ್,ಅಂಬಿಕಾಹುಲಿನಾಯ್ಕರ್, ಡಾ.ನರೇಂದ್ರವಿಶ್ವನಾಥ್, ಡಾ.ಗಿರೀಶ್.ಎಲ್ ಮತ್ತಿತರರು ಉಪಸ್ಥಿತರಿದ್ದರು.